ADVERTISEMENT

ಸಗಟು ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಸಗಟು ಹಣದುಬ್ಬರ ಇಳಿಕೆ
ಸಗಟು ಹಣದುಬ್ಬರ ಇಳಿಕೆ   

ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಮಾರ್ಚ್‌ ತಿಂಗಳಿನಲ್ಲಿ ಶೇ 5.70ಕ್ಕೆ ಇಳಿಕೆಯಾಗಿದೆ.

ಆಹಾರ ಪದಾರ್ಥಗಳ ಬೆಲೆ ಏರುಮುಖವಾಗಿದ್ದರೂ, ತಯಾರಿಕಾ ವಸ್ತುಗಳ ಬೆಲೆ ಇಳಿಕೆ ಕಂಡಿರುವುದರಿಂದ ಸಗಟು ಹಣದುಬ್ಬರ ತಗ್ಗಿದೆ ಎಂದು ಕೇಂದ್ರ ಅಂಕಿ–ಅಂಶ ಇಲಾಖೆ ಮಾಹಿತಿ ನೀಡಿದೆ.

ಸಗಟು ಹಣದುಬ್ಬರ ಫೆಬ್ರುವರಿಯಲ್ಲಿ ಶೇ 6.55 ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇ 0.45 ಇಳಿಕೆ ಕಂಡಿದೆ.

ADVERTISEMENT

ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿರುವುದರಿಂದ ಆಹಾರ ಪದಾರ್ಥಗಳ ಬೆಲೆ ಶೇ 2.69 ರಿಂದ ಶೇ 3.12ಕ್ಕೆ ಏರಿಕೆ ಕಂಡಿದೆ.

ತಯಾರಿಕಾ ವಸ್ತುಗಳ ಬೆಲೆ ಶೇ 3.66 ರಿಂದ ಶೆ 2.99ಕ್ಕೆ ಇಳಿಕೆ ಕಂಡಿದೆ. ಇದರ ಪ್ರಭಾವದಿಂದ ಸಗಟು ಹಣದುಬ್ಬರ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.