ADVERTISEMENT

ಸರ್ಕಾರಿ ಬ್ಯಾಂಕುಗಳ ಎನ್‌ಪಿಎ ಗರಿಷ್ಠ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ವಸೂಲಾಗದ ಸಾಲದ ಒಟ್ಟು ಪ್ರಮಾಣದಲ್ಲಿ (ಎನ್‌ಪಿಎ) ಶೇ 90ರಷ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೇ ಪಿಎಸ್‌ಬಿ ಹೊಂದಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಇಲ್ಲಿ ಮಂಗಳವಾರ ರಾಜ್ಯ ಸಭೆಗೆ ಲಿಖಿತ ರೂಪದಲ್ಲಿ ಈ ಮಾಹಿತಿಯನ್ನು   ನೀಡಿದರು. 2013–14ರಲ್ಲಿ ಎನ್‌ಪಿಎ ರೂ2.40 ಲಕ್ಷ ಕೋಟಿಯಷ್ಟಿದ್ದು, ಅದರಲ್ಲಿ ರೂ2.16 ಲಕ್ಷ ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳದ್ದಾಗಿದೆ ಎಂದು ತಿಳಿಸಿದರು.
ಖಾಸಗಿ ವಲಯದ ಬ್ಯಾಂಕುಗಳ ಒಟ್ಟು ಎನ್‌ಪಿಎ ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ ಅಂತ್ಯದ ಮಾಹಿತಿ­ಯಂತೆ ರೂ22,738 ಕೋಟಿ­ಯಷ್ಟಿದೆ.

ವಸೂಲಾಗದ ಸಾಲದ ಮೇಲ್ವಿ­ಚಾರಣೆ  ಆಡಳಿತ ಮಂಡಳಿ ಮಟ್ಟದಲ್ಲಿ ಸಮಿತಿ ರಚನೆ ಹಾಗೂ ಸಾಲ ವಸೂಲಿಗೆ  ನೋಡಲ್‌ ಅಧಿಕಾರಿಗಳನ್ನು ನೇಮಿಸು­ವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ ಎಂದು ರಾಜ್ಯಸಭೆಗೆ ತಿಳಿಸಿದರು.

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ 30ರಂತೆ ಸರ್ಕಾರಿ ಬ್ಯಾಂಕುಗಳ ಎನ್‌ಪಿಎ ರೂ2.41 ಲಕ್ಷ ಕೋಟಿ ಮತ್ತು ಖಾಸಗಿ ಬ್ಯಾಂಕುಗಳ ಎನ್‌ಪಿಎ ರೂ26,571 ಕೋಟಿಯಷ್ಟಿದೆ.

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ 30ರಂತೆ ಸರ್ಕಾರಿ ಬ್ಯಾಂಕುಗಳ ಎನ್‌ಪಿಎ ರೂ2.41 ಲಕ್ಷ ಕೋಟಿ ಮತ್ತು ಖಾಸಗಿ ಬ್ಯಾಂಕುಗಳ ಎನ್‌ಪಿಎ ರೂ26,571 ಕೋಟಿಯಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.