ADVERTISEMENT

ಸೂಚ್ಯಂಕ 311 ಅಂಶ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

‌ಮುಂಬೈ(ಪಿಟಿಐ): ಜಾಗತಿಕ ವಿದ್ಯ ಮಾನಗಳ ಪ್ರಭಾವ, ಹೂಡಿಕೆದಾರರು ಷೇರುಗಳ ಸಾಮರ್ಥ್ಯ ನೋಡಿ ಖರೀದಿ ನಡೆಸುತ್ತಿರುವುದರಿಂದ ದೇಶದ ಷೇರು ಪೇಟೆಯಲ್ಲಿ ಗುರುವಾರ ಸಾಕಷ್ಟು ಚೇತರಿಕೆ ಕಂಡುಬಂದಿತು. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ)  ಸಂವೇದಿ ಸೂಚ್ಯಂಕ ದಿನದ ವಹಿವಾಟಿನಲ್ಲಿ 311 ಅಂಶಗಳ ಏರಿಕೆ ದಾಖಲಿಸಿತು. ಅದ ರೊಂದಿಗೆ 25,764.78 ಅಂಶಗಳಲ್ಲಿ ಗುರುವಾರದ ವಹಿವಾಟು ಅಂತ್ಯ ಗೊಳಿಸಿತು.

ರಾಷ್ಟ್ರೀಯ ಷೇರು ವಿನಿ ಮಯ ಕೇಂದ್ರದ (ಎನ್‌ಎಸ್‌ಇ) ನಿಫ್ಟಿ ಸಹ 106 ಅಂಶಗಳನ್ನು ಗಳಿಸಿಕೊಂಡು  7,800 ಅಂಶಗಳ ಗಡಿ ದಾಟಿ ಮುನ್ನಡೆಯಿತು. ದಿನದ ಕೊನೆಗೆ 7,845.60 ಅಂಶಗಳಲ್ಲಿ ವಹಿವಾಟಿಗೆ ಮುಕ್ತಾಯ ಹಾಡಿತು. ಚೀನಾದ ಷೇರುಪೇಟೆಯಲ್ಲಿಯೂ ಉತ್ತಮ ಚೇತರಿಕೆ ಕಂಡುಬಂದಿದ್ದರಿಂದ ನೆರೆಹೊರೆಯ ದೇಶಗಳ ಷೇರುಪೇಟೆ ಗಳಲ್ಲಿಯೂ ಸೂಚ್ಯಂಕವು ಮೇಲ್ಮುಖ ವಾಗಿ ಚಲಿಸಲು ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.