ADVERTISEMENT

ಸೆಲ್ಫಿ, ದೀರ್ಘ ಬಾಳಿಕೆಯ ಬ್ಯಾಟರಿಗೆ ‘ಜಿವೋನಿ ಎ1’

ವಿಶ್ವನಾಥ ಎಸ್.
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಸೆಲ್ಫಿ, ದೀರ್ಘ ಬಾಳಿಕೆಯ ಬ್ಯಾಟರಿಗೆ ‘ಜಿವೋನಿ ಎ1’
ಸೆಲ್ಫಿ, ದೀರ್ಘ ಬಾಳಿಕೆಯ ಬ್ಯಾಟರಿಗೆ ‘ಜಿವೋನಿ ಎ1’   
ನವದೆಹಲಿ:ಆಫ್ ಲೈನ್ ಮೊಬೈಲ್  ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಜಿವೋನಿ ಕಂಪೆನಿಯು, ಗುಣಮಟ್ಟದ ಸೆಲ್ಫಿ ಮತ್ತು ದೀರ್ಘ ಬಾಳಿಕೆ ಬರುವ ಬ್ಯಾಟರಿ ಹೊಂದಿರುವ  ‘ಜಿವೋನಿ ಎ1’ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಂಗಳವಾರ ಇಲ್ಲಿ  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
‘ಗ್ರಾಹಕರ ಕುತೂಹಲ ಕಾಯ್ದಿರಿಸುವ ಉದ್ದೇಶದಿಂದ ಈಗಲೇ ಇದರ ಬೆಲೆ ಘೋಷಿಸುತ್ತಿಲ್ಲ. ಮಾರ್ಚ್ 31 ರಿಂದ ಏಪ್ರಿಲ್ 10 ರ ವರೆಗೆ ಮುಂಗಡ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ.
 
ಏಪ್ರಿಲ್ 11 ರಂದು ಮಳಿಗೆಗಳಲ್ಲಿ ಲಭ್ಯವಾಗಲಿದೆ. ಯುವ ಪೀಳಿಗೆಯು ಫ್ರಂಟ್ ಕ್ಯಾಮೆರಾದಿಂದ ಜಗತ್ತನ್ನು ನೋಡಲು ಹೆಚ್ಚು ಇಷ್ಟಪಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ತಯಾರಿಸಲಾಗಿದೆ’ ಎಂದು ಕಂಪೆನಿ ಸಿಇಒ ಅರವಿಂದ ರಜನೀಶ್ ವೋಹ್ರಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
 
‘ಸೆಲ್ಫಿ ಫೋನ್‌ಗಳ ಬ್ಯಾಟರಿ ಅಷ್ಟಾಗಿ ಬಾಳಿಕೆ ಬರುವುದಿಲ್ಲ ಎನ್ನುವ ದೂರು ಕೇಳಿಬರುತ್ತಿದೆ. ಜಿವೋನಿ ಎ1 ಆ ಕೊರತೆ ನೀಗಿಸಿದೆ. 16 ಎಂಪಿ ಫ್ರಂಟ್ ಕ್ಯಾಮೆರಾ ಈಗಿನ ಸೆಲ್ಫಿ ಟ್ರೆಂಡ್ ಪ್ರತಿನಿಧಿಸಿದರೆ 4010ಎಂಎ ಎಚ್ ಬ್ಯಾಟರಿ ಹೆಚ್ಚು ಗಂಟೆಗಳವರೆಗೆ ಬಾಳಿಕೆ ಬರುವ  ಭರವಸೆ ನೀಡುತ್ತದೆ’ ಎಂದರು.
 
ಮುಂಚಿತವಾಗಿ ಬುಕ್ ಮಾಡಿದವರಿಗೆ 2 ವರ್ಷ ವಾರಂಟಿ ಮತ್ತು 1 ಜೆಬಿಎಲ್ ಹೆಡ್ ಫೋನ್ ಉಚಿತ. ಅಮೆಜಾನ್‌ನಲ್ಲಿ ಬುಕ್ ಮಾಡಬಹುದು. ಸೆಲ್ಫಿಗೆ ಜನಪ್ರಿಯತೆ ಪಡೆದಿರುವ ಒಪ್ಪೊ ಕಂಪೆನಿ ಸಹ ಗುರುವಾರ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.
 
ಹೀಗಾಗಿ ದರ ಪೈಪೋಟಿ ನೀಡುವ ಉದ್ದೇಶದಿಂದಲೂ ಸದ್ಯಕ್ಕೆ ಬೆಲೆ ಘೋಷಿಸದೇ ಇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ನವದೆಹಲಿಗೆ ಭೇಟಿ ನೀಡಿದ್ದರು)
**
ವೈಶಿಷ್ಟ್ಯ
ಲೋಹದ ಕವಚ ಇರುವ ಈ ಡ್ಯುಯೆಲ್ ಫೋನ್ ಆ್ಯಂಡ್ರಾಯ್ಡ್ 7.0, ಆಕ್ಟಾ ಕೋರ್ 2.0ಗಿಗಾ ಹರ್ಟ್ಸ್, 13 ಎಂಪಿ ರಿಯರ್ ಕ್ಯಾಮೆರಾ, 4 ಜಿಬಿ ರ್್ಯಾಮ್, 64 ಜಿಬಿ ರೋಮ್, 256 ಜಿಬಿ ವರೆಗೆ ವಿಸ್ತರಣಾ ಸಾಮರ್ಥ್ಯ ಹೊಂದಿದೆ. ಅಲ್ಟ್ರಾಫಾಸ್ಟ್ ಚಾರ್ಜಿಂಗ್: 300 ಸೆಕೆಂಡ್ ಚಾರ್ಜ್ ಮಾಡಿದರೆ 2 ಗಂಟೆ ವರೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.