ADVERTISEMENT

ಸ್ವಿಸ್‌ ವಾಚ್‌ಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಟೈಟಾನ್ ಕಂಪೆನಿಯ ಸಿಇಒ ಎಸ್.ರವಿಕಾಂತ್ ಮತ್ತು ರೇಮಂಡ್ ವೇಲ್ ಅಧ್ಯ್ಯಕ್ಷ ಒಲಿವರ್ ಬರ್ನೆಹಿಮ್   ರೇಮಂಡ್ ವೇಲ್ಸ್‌ನ ಮ್ಯಾಸ್ಟ್ರೊ  ಸಂಗ್ರಹ  ಬಿಡುಗಡೆ ಮಾಡಿದರು.
ಟೈಟಾನ್ ಕಂಪೆನಿಯ ಸಿಇಒ ಎಸ್.ರವಿಕಾಂತ್ ಮತ್ತು ರೇಮಂಡ್ ವೇಲ್ ಅಧ್ಯ್ಯಕ್ಷ ಒಲಿವರ್ ಬರ್ನೆಹಿಮ್ ರೇಮಂಡ್ ವೇಲ್ಸ್‌ನ ಮ್ಯಾಸ್ಟ್ರೊ ಸಂಗ್ರಹ ಬಿಡುಗಡೆ ಮಾಡಿದರು.   

ಬೆಂಗಳೂರು: ಭಾರತದಲ್ಲಿ  ಸ್ವಿಟ್ಜರ್ಲೆಂಡ್‌ನ ದುಬಾರಿ ವಾಚ್‌ಗಳನ್ನು ಮಾರಾಟ ಮಾಡಲು ಮಲ್ಟಿ ಬ್ರ್ಯಾಂಡ್‌ ವಾಚ್‌ ರಿಟೇಲರ್‌ ಹೆಲಿಯೋಸ್‌ ಕಂಪೆನಿಯು ರೇಮಂಡ್‌ ವೇಲ್ಸ್‌ ಜತೆ ಪಾಲುದಾರಿಕೆ ಮಾಡಿಕೊಂಡಿದೆ.

ಹೆಲಿಯೋಸ್‌, ಟೈಟಾನ್‌ ಕಂಪೆನಿಯ ಭಾರತದ ಒಂದು ಅಂಗಸಂಸ್ಥೆಯಾಗಿದ್ದು,  ದೇಶದಾದ್ಯಂತ 48 ಮಳಿಗೆಗಳಲ್ಲಿ ಸ್ವಿಸ್‌ ವಾಚ್‌ಗಳು ಮಾರಾಟವಾಗಲಿವೆ. ₹  50 ಸಾವಿರದಿಂದ ₹2.5 ಲಕ್ಷದ ಬೆಲೆಯ ವಾಚ್‌ಗಳು ಲಭ್ಯ ಇವೆ.

‘ಭಾರತದ ಗ್ರಾಹಕರಿಗೆ ಐಷಾರಾಮಿ ಬ್ರ್ಯಾಂಡ್‌ಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಸಂಸ್ಥೆ ಬದ್ಧವಾಗಿದೆ. ರೇಮಂಡ್ ವೇಲ್ ಜೊತೆಗಿನ ಪಾಲುದಾರಿಕೆ ನಮ್ಮ ಬದ್ಧತೆ ಬಲಗೊಳಿಸುವ ಮತ್ತೊಂದು ಯಾಗಿದೆ’ ಎಂದು ಟೈಟಾನ್ ಕಂಪೆನಿಯ ಸಿಇಒ ಎಸ್.ರವಿಕಾಂತ್ರವಿಕಾಂತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.