ADVERTISEMENT

ಹಣ ಪಾವತಿಗೆ ಗೂಗಲ್‌ನಿಂದ ‘Tez’ ಆ್ಯಪ್‌: ಮೊಬೈಲ್‌, ಬ್ಯಾಂಕ್‌ ಖಾತೆ ಸಂಖ್ಯೆ ಬಳಸದೆಯೇ ಮತ್ತೊಂದು ಫೋನ್‌ ಜತೆಗೆ ಸಂಪರ್ಕ

ಏಜೆನ್ಸೀಸ್
Published 18 ಸೆಪ್ಟೆಂಬರ್ 2017, 10:33 IST
Last Updated 18 ಸೆಪ್ಟೆಂಬರ್ 2017, 10:33 IST
ಹಣ ಪಾವತಿಗೆ ಗೂಗಲ್‌ನಿಂದ ‘Tez’ ಆ್ಯಪ್‌: ಮೊಬೈಲ್‌, ಬ್ಯಾಂಕ್‌ ಖಾತೆ ಸಂಖ್ಯೆ ಬಳಸದೆಯೇ ಮತ್ತೊಂದು ಫೋನ್‌ ಜತೆಗೆ ಸಂಪರ್ಕ
ಹಣ ಪಾವತಿಗೆ ಗೂಗಲ್‌ನಿಂದ ‘Tez’ ಆ್ಯಪ್‌: ಮೊಬೈಲ್‌, ಬ್ಯಾಂಕ್‌ ಖಾತೆ ಸಂಖ್ಯೆ ಬಳಸದೆಯೇ ಮತ್ತೊಂದು ಫೋನ್‌ ಜತೆಗೆ ಸಂಪರ್ಕ   

ನವದೆಹಲಿ: ಮೊಬೈಲ್‌ ಮೂಲಕ ಹಣ ಪಾವತಿಸಲು ಸಹಕಾರಿಯಾಗುವ ‘ತೇಜ್‌’ ಆ್ಯಂಡ್ರಾಯ್ಡ್‌ ಆ್ಯಪ್‌ ಅನ್ನು ಗೂಗಲ್‌ ಬಿಡುಗಡೆ ಮಾಡಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಸೋಮವಾರ ನೂತನ ಆ್ಯಪ್‌ ಬಿಡುಗಡೆ ಮಾಡಿದರು. ಭಾರತದ ಆ್ಯಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತೇಜ್‌ ಆ್ಯಪ್‌ ಬಳಸಿ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್‌ ಖಾತೆಯಿಂದ ಹಣ ಪಾವತಿ, ನೇರವಾಗಿ ಖಾತೆಗೆ ಹಣ ಜಮೆ ಹಾಗೂ ಬಿಲ್‌ ಪಾವತಿ ಸಾಧ್ಯವಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ದ ಏಕೀಕೃತ ಪಾವತಿ ವ್ಯವಸ್ಥೆಯೊಂದಿಗೆ ತೇಜ್‌ ಮೂಲಕ ಹಣ ವರ್ಗವಾಣೆ ಸುಲಭ ಹಾಗೂ ಸುರಕ್ಷಿತ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.