ADVERTISEMENT

ಹಳೆ ಕಾರು ಮಾರಾಟಕ್ಕೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 19:30 IST
Last Updated 4 ಜುಲೈ 2015, 19:30 IST

ನವದೆಹಲಿ (ಪಿಟಿಐ): ಹಳೆಯ ಕಾರು ಸರ್ಕಾರಕ್ಕೆ ಮಾರಾಟ ಮಾಡಿ ಹೊಸ ಕಾರು ಖರೀದಿಸುವವರಿಗೆ ಹೊಸ ನೀತಿಯಡಿ ಆರ್ಥಿಕ ಉತ್ತೇಜಕಗಳನ್ನು ನೀಡಲು  ಕೇಂದ್ರ ಸರ್ಕಾರ  ನಿರ್ಧರಿಸಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತನ್‌ ಗಡ್ಕರಿ ಹೇಳಿದ್ದಾರೆ.

ಸಾರ್ವಜನಿಕರು ಒಂದಕ್ಕಿಂತ ಹೆಚ್ಚು ಕಾರುಗಳನ್ನು ಬಳಕೆ ಮಾಡದೇ ಇರುವಂತೆ ಮನವಿ ಮಾಡಿದ ಅವರು, ಕಾರುಗಳನ್ನು ಬಳಸುವ ಬಗ್ಗೆ ಕುಟುಂಬ ಯೋಜನೆ ಮಾದರಿಯನ್ನು ಅನುಸರಿಸ ಬೇಕು ಎಂದಿದ್ದಾರೆ. ಹಳೆಯ ಕಾರುಗಳನ್ನು ಹೊಸ ಕಾರಿನೊಂದಿಗೆ ವಿನಿಮಯ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರಲಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ಕಾರುಗಳನ್ನು ಮಾರುವವ ರಿಗೆ ಸರ್ಕಾರ ಉತ್ತೇಜಕ ಗಳನ್ನೂ ನೀಡ ಲಿದೆ. ಈ ಕಾರುಗಳ ಬಿಡಿ ಭಾಗಗಳನ್ನು ಮರು ಬಳಕೆಗೆ ಸಿದ್ಧಪಡಿಸಲಾಗುವುದು.  ಒಂದು  ಹೊಸ ಕಾರು ಕೊಳ್ಳುವುದರಿಂದ ಸರ್ಕಾರಕ್ಕೆ ₹95 ಸಾವಿರದಷ್ಟು  ಲಾಭವಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.