ADVERTISEMENT

‘ಲಾಭಾಂಶ ವಿತರಣೆ ನೀತಿ’ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ನವದೆಹಲಿ (ಪಿಟಿಐ): ಷೇರುಪೇಟೆಯಲ್ಲಿ ನೋಂದಾಯಿತ 500 ಕಂಪೆನಿಗಳಿಗೆ ಲಾಭಾಂಶ ವಿತರಣೆ ನಿಯಮಯನ್ನು ಕಡ್ಡಾಯ ಗೊಳಿಸಲಾಗಿದೆ.
ಕಂಪೆನಿಗಳಲ್ಲಿ ಅಧಿಕ ಹಣವಿದ್ದರೂ ಸಹ ಲಾಭಾಂಶ ನೀಡುತ್ತಿಲ್ಲ ಎಂದು ಷೇರುದಾರರು ದೂರು ನೀಡಿರುವುದರಿಂದ ಷೇರುದಾರರು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಲಾಭಾಂಶ ವಿತರಣೆ ನಿಯಮವನ್ನು ಕಡ್ಡಾಯಗೊಳಿಸಿದೆ.

ಹೊಸ ನಿಯಮದಂತೆ, ಷೇರುದಾರರು ಯಾವ ಕಾರಣಕ್ಕೆ  ಲಾಭಾಂಶ ನಿರೀಕ್ಷೆ ಮಾಡಬಹುದು ಅಥವಾ ಮಾಡಬಾರದು ಎನ್ನುವ ಬಗ್ಗೆ ಕಂಪೆನಿಗಳು ಪಟ್ಟಿಯೊಂದನ್ನು ನೀಡಬೇಕಾಗುತ್ತದೆ.

ಈ ನಿಯಮವು ಲಾಭಾಂಶ ಪಾವತಿಸುವಂತೆ ಕಂಪೆನಿಗಳಿಗೆ ಒತ್ತಾಯ ಮಾಡುವುದಿಲ್ಲ. ಬದಲಾಗಿ, ಹೂಡಿಕೆದಾರರಿಗೆ ಅವರು ತೊಡಗಿಸಿರುವ ಬಂಡವಾಳಕ್ಕೆ ಪ್ರತಿಫಲವಾಗಿ ಎಷ್ಟು ಗಳಿಕೆ ಬರುತ್ತಿದೆ ಎಂದು ತಿಳಿಸುತ್ತದೆ.  ಅಲ್ಲದೆ,  ಹೂಡಿಕೆಯನ್ನು ಷೇರುಗಳ ಜತೆ ಹೊಂದಾಣಿಕೆ ಮಾಡಿ ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.