ADVERTISEMENT

‘ವ್ಯಾಗನ್‌ ಆರ್‌’ ದಾಖಲೆ ಮಾರಾಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಒಡೆತನದ ‘ವ್ಯಾಗನ್‌–ಆರ್‌’ ಮಾರಾಟ 15 ಲಕ್ಷ   ಮೈಲಿಗಲ್ಲನ್ನು ದಾಟಿದೆ ಎಂದು ಕಂಪೆನಿ ಹೇಳಿದೆ.

ವ್ಯಾಗನ್-–ಆರ್’ ಮಾದರಿಯನ್ನು ಮಾರುತಿ ಸುಜುಕಿ 2000ದಲ್ಲಿ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ದೇಶದ ಅತಿಹೆಚ್ಚು ಮಾರಾಟವಾಗುತ್ತಿರುವ ಐದು ಕಾರ್‌­ಗಳಲ್ಲಿ ವ್ಯಾಗನ್‌–ಆರ್‌ ಕೂಡಾ ಒಂದಾಗಿದ್ದು, 2013–14ರಲ್ಲಿ 1,56,300 ಕಾರುಗಳು ಮಾರಾಟ­ವಾಗಿವೆ. ಈ ವರ್ಷ ಈಗಾಗಲೇ 93 ಸಾವಿರ ಕಾರುಗಳು ಮಾರಾಟವಾಗಿವೆ ಎಂದು ಕಂಪೆನಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.