ADVERTISEMENT

1500 ಕಾರ್ಯನಿರ್ವಾಹಕ ಹುದ್ದೆಗಳನ್ನು ಕಡಿತಗೊಳಿಸಿದ ಟಾಟಾ ಮೋಟಾರ್ಸ್‌

ಶೇ 10–12ರಷ್ಟು ಸಿಬ್ಬಂದಿ ಪ್ರಮಾಣ ಇಳಿಕೆ

ಏಜೆನ್ಸೀಸ್
Published 24 ಮೇ 2017, 11:44 IST
Last Updated 24 ಮೇ 2017, 11:44 IST
1500 ಕಾರ್ಯನಿರ್ವಾಹಕ ಹುದ್ದೆಗಳನ್ನು ಕಡಿತಗೊಳಿಸಿದ ಟಾಟಾ ಮೋಟಾರ್ಸ್‌
1500 ಕಾರ್ಯನಿರ್ವಾಹಕ ಹುದ್ದೆಗಳನ್ನು ಕಡಿತಗೊಳಿಸಿದ ಟಾಟಾ ಮೋಟಾರ್ಸ್‌   

ಮುಂಬೈ: ಸ್ಥಳೀಯ ಮಟ್ಟದಲ್ಲಿ 1500 ಕಾರ್ಯನಿರ್ವಾಹಕ ಹುದ್ದೆಗಳನ್ನು ಕಡಿತಗೊಳಿಸಿರುವುದಾಗಿ ಟಾಟಾ ಮೋಟಾರ್ಸ್‌ ಮಂಗಳವಾರ ಪ್ರಕಟಿಸಿದೆ.

ಸಂಸ್ಥೆಯಲ್ಲಿ ಪುನರ್‌ರಚನೆಯ ಭಾಗವಾಗಿ ಒಟ್ಟು 13 ಸಾವಿರ ಕಾರ್ಯನಿರ್ವಹಣಾಧಿಕಾರಿಗಳ ಪೈಕಿ ಶೇ10–12ರಷ್ಟು (ಅಂದಾಜು 1500) ಹುದ್ದೆ ಕಡಿತಗೊಳಿಸುತ್ತಿರುವುದಾಗಿ ವ್ಯವಸ್ಥಾಪಕ ನಿರ್ದೇಶಕ ಗೆಂಟರ್‌ ಬಷೆಕ್‌ ತಿಳಿಸಿದ್ದಾರೆ.

2017ನೇ ಸಾಲಿನಲ್ಲಿ ಎಂಜಿನಿಯರಿಂಗ್‌ ಮತ್ತು ನಿರ್ಮಾಣ ಸಂಸ್ಥೆ ಎಲ್‌ ಆ್ಯಂಡ್‌ ಟಿ  14 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಪ್ರಕಟಿಸಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ 10 ಸಾವಿರ ಸಿಬ್ಬಂದಿ ಕಡಿತ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.