ADVERTISEMENT

3ನೇ ದಿನವೂ ಸೂಚ್ಯಂಕ ಇಳಿಕೆ

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
3ನೇ ದಿನವೂ ಸೂಚ್ಯಂಕ ಇಳಿಕೆ
3ನೇ ದಿನವೂ ಸೂಚ್ಯಂಕ ಇಳಿಕೆ   

ಮುಂಬೈ : ಹೊಸ ವರ್ಷದಲ್ಲಿ ಸತತ ಮೂರನೇ ದಿನವೂ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿಯಿತು. ಬುಧವಾರ ಚಂಚಲ ವಹಿವಾಟಿನಿಂದ ಸೂಚ್ಯಂಕಗಳು ಇಳಿಕೆ ಕಂಡವು.

3ನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯ ಬಗ್ಗೆ ಹೂಡಿಕೆದಾರರು ಹೆಚ್ಚಿನ ಗಮನ ನೀಡಿದ್ದಾರೆ. ಹೀಗಾಗಿ ಷೇರುಪೇಟೆಯಲ್ಲಿ ಮಂದಗತಿಯ ವಹಿವಾಟು ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 19 ಅಂಶ ಇಳಿಕೆ ಕಂಡು, 33,998 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಹಿಂದಿನ ಎರಡು ದಿನಗಳ ವಹಿವಾಟಿನಲ್ಲಿ ಸೂಚ್ಯಂಕ 245 ಅಂಶ ಇಳಿಕೆ ಕಂಡಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ1 ಅಂಶ ಹೆಚ್ಚಾಗಿ 10,443 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಂಗಳವಾರ ವಿದೇಶಿ ಹೂಡಿಕೆದಾರರು ₹ 523 ಕೋಟಿ ಮೌಲ್ಯದ ಹಾಗೂ ದೇಶಿ ಹೂಡಿಕೆದಾರರು ₹ 65 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.