ADVERTISEMENT

ಜಿಎಸ್‌ಟಿ: ಎಚ್‌ಯುಎಲ್‌ಗೆ ನೋಟಿಸ್‌

ಪಿಟಿಐ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ನಂತರ ಗ್ರಾಹಕರಿಗೆ ಬೆಲೆ ಕಡಿತದ ಪ್ರಯೋಜನ ವರ್ಗಾಯಿಸದ  ಆರೋಪಕ್ಕೆ ಸಂಬಂಧಿಸಿದಂತೆ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ ತಯಾರಿಕಾ ಸಂಸ್ಥೆ (ಎಫ್‌ಎಂಸಿಜಿ) ಹಿಂದೂಸ್ತಾನ್‌ ಯುನಿಲೀವರ್‌ಗೆ (ಎಚ್‌ಯುಎಲ್‌) ಸುರಕ್ಷತಾ ಮಹಾ ನಿರ್ದೇಶನಾಲಯವು (ಡಿಜಿಎಸ್‌) ನೋಟಿಸ್‌ ಜಾರಿ ಮಾಡಿದೆ.

ಬೆಲೆ ಕಡಿತ ಮಾಡದ ಉದ್ದಿಮೆ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಹಣಕಾಸು ಸಚಿವಾಲಯದ ಅಧೀನದಲ್ಲಿ ‘ಡಿಜಿಎಸ್‌’ ಕಾರ್ಯನಿರ್ವಹಿಸುತ್ತಿದೆ. ಸ್ಥಾಯಿ ಸಮಿತಿಯು ಈ ವಿವಾದವನ್ನು ‘ಡಿಜಿಎಸ್‌’ಗೆ ವರ್ಗಾಯಿಸಿತ್ತು. ಜಿಎಸ್‌ಟಿ ಜಾರಿಗೆ ಬಂದ ನಂತರ ತೆರಿಗೆ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ‘ಎಚ್‌ಯುಎಲ್‌’ಗೆ ನೋಟಿಸ್‌ ಕಳಿಸಲಾಗಿದೆ. ಸಂಸ್ಥೆಯ ಜಿಎಸ್‌ಟಿ ಮುಂಚಿನ ಮತ್ತು ನಂತರದ ಬೆಲೆ ಪಟ್ಟಿಯನ್ನೂ ‘ಡಿಜಿಎಸ್‌’ ಪರಿಶೀಲಿಸಲಿದೆ. 15 ದಿನಗಳಲ್ಲಿ ಉತ್ತರ ನೀಡಲೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT