ADVERTISEMENT

ಸೆಲ್ಕೊ ಫೌಂಡೇಷನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಸೆಲ್ಕೊ ಫೌಂಡೇಷನ್‌ಗೆ ಪ್ರಶಸ್ತಿ
ಸೆಲ್ಕೊ ಫೌಂಡೇಷನ್‌ಗೆ ಪ್ರಶಸ್ತಿ   

ಅಬುಧಾಬಿ: ಅಬುಧಾಬಿ ಸುಸ್ಥಿರತೆ ಸಪ್ತಾಹದ ಭಾಗವಾಗಿ ಕೊಡಮಾಡುವ ಪ್ರತಿಷ್ಠಿತ ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ ಪ್ರಶಸ್ತಿಯನ್ನು ಸೆಲ್ಕೊ ಫೌಂಡೇಷನ್‌ನ ಸಂಸ್ಥಾಪಕ ಡಾ. ಹರೀಶ್ ಹಂದೆ ಅವರಿಗೆ ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿ ₹ 9.75 ಕೋಟಿ ಮೊತ್ತವನ್ನು ಹೊಂದಿದೆ. ಪ್ರಶಸ್ತಿ ಪಡೆದ ಭಾರತದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರಶಸ್ತಿಗಾಗಿ 112 ದೇಶಗಳ 2,296 ಅರ್ಜಿಗಳು ಬಂದಿದ್ದವು.

ಸೆಲ್ಕೊ ಫೌಂಡೇಷನ್ 2010 ರಲ್ಲಿ ಸ್ಥಾಪನೆಯಾದ ಸೇವಾ ಸಂಸ್ಥೆ. ಕರ್ನಾಟಕ ರಾಜ್ಯದ ಎಲ್ಲೆಡೆ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗೂ ಬಡವರಿಗೆ ಸುಸ್ಥಿರ ಇಂಧನ ಪೂರೈಸುವಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿದೆ. ಹರೀಶ್  ಹಂದೆ ಅವರಿಗೆ 2011ರಲ್ಲಿ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಬಂದಿತ್ತು.

ADVERTISEMENT

ನವೀಕರಿಸಬಹುದಾದ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ನಡೆಸಿದ ಸಾಧನೆ, ನೂತನ ಆವಿಷ್ಕಾರ, ಇವುಗಳ ದೂರಗಾಮಿ ಪರಿಣಾಮ, ಬದಲಾವಣೆಯ ಹರಿಕಾರನಾಗಿ ವಹಿಸಿದ ಮುಂದಾಳತ್ವ  ಮಾನದಂಡಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಸಂಯುಕ್ತ ಅರಬ್ ಎಮಿರೇಟ್ಸ್‌ನ ಪಿತಾಮಹ ಹಾಗೂ ಅಬುಧಾಬಿ ಆಳ್ವಿಕೆ ನಡೆಸಿದ ಶೇಖ್‌ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಅವರ ಮಗ ಅಬುಧಾಬಿ ರಾಜ ಹಾಗೂ ಯುಎಇ ಮಿಲಿಟರಿ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2008 ರಲ್ಲಿ ಸ್ಥಾಪಿಸಿದ್ದಾರೆ. ಅಂದಿನಿಂದ ಪ್ರತಿ ವರ್ಷ ಪರಿಸರ ರಕ್ಷಣೆಯ ಕ್ಷೇತ್ರದಲ್ಲಿ  ಈ ಪ್ರಶಸ್ತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.