ADVERTISEMENT

ಮೊಬೈಲ್‌ ಸಂಖ್ಯೆ 13ಕ್ಕೆ ಏರಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ನವದೆಹಲಿ: ಪ್ರಸ್ತುತ ಬಳಸುತ್ತಿರುವ ಹತ್ತು ಅಂಕಿಗಳ ಮೊಬೈಲ್‌ಫೋನ್ ಸಿಮ್‌ ಸಂಖ್ಯೆ  ಜುಲೈ 1 ರಿಂದ 13ಕ್ಕೆ ಏರಿಕೆಯಾಗಲಿದೆ ಎನ್ನುವ ಸುದ್ದಿ ಆಧಾರರಹಿತ ಎಂದು ದೂರ ಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.

ಹದಿಮೂರು ಅಂಕಿಗಳ ಸಂಖ್ಯೆ ಕೇವಲ ಎಂ2ಎಂ (ಮಷಿನ್ ಟು ಮೆಷಿನ್‌) ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ಮೊಬೈಲ್‌ಫೋನ್‌ ಸಿಮ್‌ನ ಅಂಕಿಗಳಲ್ಲಿ ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಯಂತ್ರದಿಂದ ಯಂತ್ರಕ್ಕೆ ಮೊಬೈಲ್‌ ಸಂಪರ್ಕ ಹೊಂದಿರುವ ಕಡೆಗಳಲ್ಲಿ 13 ಅಂಕಿಗಳ ‘ಎಂ2ಎಂ’ ಸಂಖ್ಯೆಗಳನ್ನು ಹೊಸ ಸಾಧನಗಳಲ್ಲಿ ಜುಲೈ 1ರಿಂದ ಜಾರಿಗೆ ತರಲಾಗುತ್ತದೆ. ಈಗಾಗಲೇ ಬಳಕೆಯಲ್ಲಿರುವ 10 ಅಂಕಿಗಳ ಎಂ2ಎಂ ಮೊಬೈಲ್‌ ಸಂಖ್ಯೆಗಳು ಅಕ್ಟೋಬರ್ 1ರಿಂದ ಬದಲಾಗಲಿವೆ.

ಎಂ2ಎಂ ಸಂಖ್ಯೆಗಳನ್ನು ಅಂತರ್ಜಾಲ ಸಹಾಯದಿಂದ ಕಾರ್ಯನಿರ್ವಹಿಸುವ ಸ್ವೈಪಿಂಗ್ ಮಷಿನ್, ಕಾರುಗಳ ಮೇಲೆ ನಿಗಾ ವ್ಯವಸ್ಥೆ, ಸಾರಿಗೆ ನಿರ್ವಹಣೆ, ಸ್ಮಾರ್ಟ್‌ ವಿದ್ಯುತ್ ಮೀಟರ್‌ಗಳಲ್ಲಿ ಬಳಸಲಾಗುತ್ತಿದೆ. ಇಂಟರ್‌ನೆಟ್‌ ನೆರವಿನಿಂದ ಪರಸ್ಪರ ಸಂವಹನ ಸಾಧಿಸುವ, ದೂರದಿಂದಲೇ ನಿಯಂತ್ರಿಸಬಹುದಾದ ಡಿಜಿಟಲ್‌ ಪರಿಕರಗಳಲ್ಲಿ (ಇಂಟರ್‌ನೆಟ್‌ ಆಫ್‌ ಥಿಂಗ್ಸ್‌) ಅಳವಡಿಸುವ ಸಿಮ್‌ಗಳಲ್ಲಿ ಈ ಸಂಖ್ಯೆ ಬಳಸಲಾಗುತ್ತಿದೆ.  ಬ್ಯಾಂಕ್‌ಗಳೂ  ಸೇರಿದಂತೆ ವಿವಿಧ ಉದ್ದಿಮೆ ಸಂಸ್ಥೆಗಳು ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಈ ‘ಎಂ2ಎಂ’ ವ್ಯವಸ್ಥೆ  ಬಳಸುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.