ADVERTISEMENT

6 ಯೋಜನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST

ಬೆಂಗಳೂರು: ರಾಜ್ಯ ಉನ್ನತಾಧಿಕಾರ ಸಮಿತಿ ₹ 9,048.39 ಕೋಟಿ ಬಂಡವಾಳ ಹೂಡಿಕೆಯ ಆರು ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಐಟಿ, ಐಟಿಇಎಸ್‌ಗೆ ಸಂಬಂಧಿಸಿದ ನಾಲ್ಕು, ಪ್ರವಾಸೋದ್ಯಮ ಮತ್ತು ಕೈಗಾರಿಕೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ತಲಾ ಒಂದು ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಿದೆ. ಆ ಮೂಲಕ ಸುಮಾರು 35,487 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗುವ ನಿರೀಕ್ಷೆ ಇದೆ.

ಬೆಂಗಳೂರು ನಗರ ಜಿಲ್ಲೆಯ ಕಾಡುಬೀಸನಹಳ್ಳಿಯಲ್ಲಿ 13.29 ಎಕರೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿ ಅರಾಕಲ್‌  ₹ 2,438 ಕೋಟಿ ಬಂಡವಾಳ ಹೂಡಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ 55 ಎಕರೆ ಜಾಗದಲ್ಲಿ ಬ್ಲೂಸ್ಟೋನ್‌ ಟೆಕ್‌ ಪಾರ್ಕ್‌ ಸಂಸ್ಥೆ ₹ 2,051.39 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್‌ ಐಟಿ ಪಾರ್ಕ್‌ ನಿರ್ಮಿಸಲಿದೆ.

ದೇವನಹಳ್ಳಿ ತಾಲ್ಲೂಕಿನಲ್ಲಿ 300 ಎಕರೆಯಲ್ಲಿ ಕಾರ್ನರ್‌ ಸ್ಟೋನ್‌ ಪ್ರಾಪರ್ಟಿ ಡೆವಲಪರ್‌್ಸ ಇಂಟಿಗ್ರೇಟೆಡ್‌ ಎಂಟರ್‌ಟೈನ್‌ಮೆಂಟ್‌ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ₹ 1,330 ಕೋಟಿ, ಎಲ್‌ ಅಂಡ್‌ ಟಿ ಕಂಪೆನಿ ಬ್ಯಾಟರಾಯನಪುರದಲ್ಲಿ 12 ಎಕರೆ 22 ಗುಂಟೆ ಜಾಗದಲ್ಲಿ  ₹ 1,280 ಕೋಟಿ ಮತ್ತು 5 ಎಕರೆ 8 ಗುಂಟೆ ಜಾಗದಲ್ಲಿ ₹ 800 ಕೋಟಿ ಹೂಡಿಕೆ ಮಾಡಲಿದೆ.

ಬೆಳಗಾವಿಯ ಹುಕ್ಕೇರಿಯಲ್ಲಿ 1,054 ಎಕರೆಯಲ್ಲಿ ದೇವಿ ಸಿಟಿ ಇಂಡಸ್ಟ್ರೀಯಲ್‌ ಪಾರ್ಕ್‌ ಸಂಸ್ಥೆ  ಇಂಡಸ್ಟ್ರೀಯಲ್‌ ಮಲ್ಟಿ ಪ್ರಾಡಕ್ಟ್‌ ಕಾರ್ಖಾನೆ ಸ್ಥಾಪಿಸಲು ₹ 1,149 ಕೋಟಿ ಸುರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT