ADVERTISEMENT

ವಾಟ್ಸ್‌ಆ್ಯಪ್ ಮೂಲಕ ಡಿಜಿಲಾಕರ್ ಸೇವೆ

ಪಿಟಿಐ
Published 24 ಮೇ 2022, 15:40 IST
Last Updated 24 ಮೇ 2022, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡಿಜಿಲಾಕರ್ ಸೇವೆಗಳನ್ನು ಪಡೆದುಕೊಳ್ಳಲು ಮೈಗವ್ ಸಹಾಯವಾಣಿಯನ್ನು ವಾಟ್ಸ್‌ಆ್ಯಪ್‌ ಮೂಲಕ ಬಳಕೆ ಮಾಡುವ ಅವಕಾಶ ಲಭ್ಯವಾಗಿದೆ.

ಡಿಜಿಲಾಕರ್‌ನಲ್ಲಿ ಇರಿಸಿರುವ ದಾಖಲೆಗಳಿಗೆ ಮೂಲ ದಾಖಲೆಗಳಿಗೆ ಇರುವಷ್ಟೇ ಮೌಲ್ಯ ಇದೆ. ವಾಟ್ಸ್‌ಆ್ಯಪ್‌ ಮೂಲಕ ಡಿಜಿಲಾಕರ್ ಖಾತೆ ತೆರೆದು, ಅದನ್ನು ಅಧಿಕೃತಗೊಳಿಸಿ, ಅಲ್ಲಿಂದ ಅಗತ್ಯ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯಗಳು ಸಿಗಲಿವೆ.

ಡಿಜಿಲಾಕರ್ ಸೇವೆ ಪಡೆಯಲು ವಾಟ್ಸ್‌ಆ್ಯಪ್‌ ಬಳಕೆದಾರರು, ವಾಟ್ಸ್‌ಆ್ಯಪ್‌ ಮೂಲಕ +91 9013151515 ಸಂಖ್ಯೆಗೆ Hi ಎಂದು ಅಥವಾ Namaste ಎಂದು ಸಂದೇಶ ಕಳುಹಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.