ADVERTISEMENT

ಸಾಗರ ಉತ್ಪನ್ನ ರಫ್ತು ಹೆಚ್ಚಳ

₹45,106 ಕೋಟಿ ದಾಟಿದ ವಹಿವಾಟು;ಹೊಸ ಮೈಲುಗಲ್ಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:24 IST
Last Updated 3 ಜುಲೈ 2018, 20:24 IST
   

ಮಂಗಳೂರು:ಸಾಗರೋತ್ಪನ್ನಗಳ ರಫ್ತಿನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಾಗಿದ್ದು, 2017–18 ರಲ್ಲಿ 13.77 ಲಕ್ಷ ಟನ್‌ ರಫ್ತು ಮಾಡುವ ಮೂಲಕ ₹ 45,107 ಕೋಟಿ ವಹಿವಾಟು ದಾಖಲಿಸಲಾಗಿದೆ.

ಹಿಂದಿನ ವರ್ಷ 11.34 ಲಕ್ಷ ಟನ್‌ ರಫ್ತು ಮಾಡುವ ಮೂಲಕ ₹ 37,871 ಕೋಟಿ ವಹಿವಾಟು ನಡೆಸಲಾಗಿತ್ತು. ಈ ವರ್ಷ ಶೇ 19.11 ರಷ್ಟು ವೃದ್ಧಿಯಾಗಿದೆ. ಇದರಲ್ಲಿ ಶೀತಲೀಕೃತ ಸಿಗಡಿ ಹಾಗೂ ಶೀತಲೀಕೃತ ಮೀನು ಪ್ರಮುಖ ಸರಕಾಗಿವೆ.

ಅಮೆರಿಕ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳು ಭಾರತದ ಸಾಗರೋತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿವೆ.

ADVERTISEMENT

‘ಜಾಗತಿಕ ಸಾಗರೋತ್ಪನ್ನ ವಹಿವಾಟಿನಲ್ಲಿ ಅನಿಶ್ಚಿತತೆಯ ಮಧ್ಯೆಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಸಿಗಡಿ ಮತ್ತು ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಹಲವಾರು ಸುಧಾರಣಾ ಕ್ರಮಗಳು ಹಾಗೂ ನಿಯಮಾವಳಿಗಳ ಪರಿಣಾಮವಾಗಿ 2022 ರ ವೇಳೆಗೆ ₹67 ಸಾವಿರ ಕೋಟಿಗಳಷ್ಟು ವಹಿವಾಟು ದಾಖಲಿಸುವ ಗುರಿ ಹೊಂದಲಾಗಿದೆ’ ಎಂದು ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎ. ಜಯತಿಲಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.