ADVERTISEMENT

ಇಂದಿನಿಂದ ಚಿತ್ರಾವತಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:38 IST
Last Updated 31 ಜನವರಿ 2017, 7:38 IST
ಇಂದಿನಿಂದ ಚಿತ್ರಾವತಿ ಜಾತ್ರೆ
ಇಂದಿನಿಂದ ಚಿತ್ರಾವತಿ ಜಾತ್ರೆ   
ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರದಿಂದ ಫೆಬ್ರುವರಿ 4ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. 
 
ಜಾತ್ರೆಯ ಪ್ರಯುಕ್ತ ದೇವಸ್ಥಾನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಈಗಾಗಲೇ ದೇಗುಲ ಬಳಿಯಲ್ಲಿ ತಿಂಡಿ- ತಿನಿಸು, ಆಟಿಕೆ ವಸ್ತುಗಳ ಮಳಿಗೆಗಳು ತಲೆ ಎತ್ತಿವೆ. ಎತ್ತಿನ ಪರಿಷೆಯ ಸಿದ್ಧತೆ ಕೂಡ ಭರದಿಂದ ಸಾಗಿದೆ. 
 
ಮಂಗಳವಾರ ಬೆಳಿಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ನಾಂದಿ, ಧ್ವಜಾರೋಹಣ, ಸಂಜೆ ಅಂಕುರಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ. ಜ.1ರಂದು ರುದ್ರಾಭಿಷೇಕ, ಸಂಜೆ ಉಪನಯನ,  ಜ.2 ರಂದು ರುದ್ರಾಭಿಷೇಕ, ಮಧ್ಯಾಹ್ನ ಬ್ರಹ್ಮ ರಥೋತ್ಸವ ಮತ್ತು ರಾತ್ರಿ ದೂಳೋತ್ಸವ ನಡೆಯಲಿದೆ. ಜ.3 ರಂದು  ರುದ್ರಾಭಿಷೇಕ, ಪಾನಕ ಪೂಜೆ, ಉತ್ಸವ, ಸಂಜೆ ಪಾರ್ವಾಟೋತ್ಸವ. ಜ.4 ವಸಂತೋತ್ಸವ ಮತ್ತು ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.