ADVERTISEMENT

ಕುಡಿಯುವ ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 7:06 IST
Last Updated 11 ಏಪ್ರಿಲ್ 2017, 7:06 IST
ಕುಡಿಯುವ ನೀರಿಗೆ ತತ್ವಾರ
ಕುಡಿಯುವ ನೀರಿಗೆ ತತ್ವಾರ   

ಸುರಪುರ: ಕುಡಿಯುವ ನೀರಿಗೆ ತತ್ವಾರ, ಅಸಮರ್ಪಕ ಚರಂಡಿ ವ್ಯವಸ್ಥೆ, ವಿಲೇ ವಾರಿಯಾಗದ ತ್ಯಾಜ್ಯ, ರಸ್ತೆಯ ಬದಿಯೇ ಗ್ರಾಮಸ್ಥರಿಗೆ ಶೌಚಾಲಯ.. ಇದು ಸುರಪುರದಿಂದ ಕೇವಲ 10 ಕಿ.ಮೀ ಅಂತರದಲ್ಲಿರುವ ಚಂದಲಾಪುರ ಗ್ರಾಮದ ದುಸ್ಥಿತಿ.

ಗ್ರಾಮದ ಜನಸಂಖ್ಯೆ 2 ಸಾವಿರಕ್ಕೂ ಅಧಿಕ. ಸೂಗೂರ ಗ್ರಾಮ ಪಂಚಾ ಯಿತಿಗೆ ಒಳಪಡುವ ಈ ಗ್ರಾಮದಲ್ಲಿ 4 ಜನ ಗ್ರಾಪಂ ಸದಸ್ಯರಿದ್ದಾರೆ. ಗ್ರಾಮದ ಬಹುತೇಕ ಮಂದಿ ಬಡವರು. ಜೀವನಕ್ಕೆ ಕೂಲಿ, ಕೆಲ ಯುವಕರು ತೋಟಗಾರಿಕೆ ಕೈಗೊಂಡಿದ್ದು ಪ್ರಗತಿಪರ ರೈತರಾಗಿ ದ್ದಾರೆ. ಆದರೆ, ಈ ಗ್ರಾಮಕ್ಕೆ ಯಾವುದೇ ಮೂಲ ಸೌಕರ್ಯಗಳು ಕಾಲಿಟ್ಟಿಲ್ಲ.

ಕೆಲವೆಡೆ ಸಿಸಿ ರಸ್ತೆ ಮಾಡ ಲಾಗಿದ್ದರೂ ಕಾಮಗಾರಿ ಸರಿಯಾಗಿ ಮಾಡಿಲ್ಲ. ಗ್ರಾಮ ಪ್ರವೇಶಿಸುವ ರಸ್ತೆಯ ಎರಡು ಬದಿ ಗ್ರಾಮಸ್ಥರಿಗೆ ಶೌಚಾಲಯ. ಊರು ಪ್ರವೇಶಿಸುತ್ತಲೇ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. 

ADVERTISEMENT

ಎಲ್ಲೆಡೆ ಕೆಸರು ಸಾಮಾನ್ಯ. ಆರೋಗ್ಯ ಕೇಂದ್ರ ಇಲ್ಲ, ಪಶು ಆಸ್ಪತ್ರೆ ಇದ್ದರೂ ಸಿಬ್ಬಂದಿ ಇಲ್ಲ, ಗ್ರಾಮದ ರಸ್ತೆಗಳೆಲ್ಲ ಮುಳ್ಳು ಕಂಟಿಗಳಿಂದ ತುಂಬಿ ಹೋಗಿವೆ.ಮಹಿಳಾ ಶೌಚಾಲಯ ಇಲ್ಲದಿರು ವುದರಿಂದ ಮಹಿಳೆಯರ ಪಾಡು ದೇವರೇ ಬಲ್ಲ. ರಾತ್ರಿ ಇಲ್ಲವೇ ನಸುಕಿನ ಜಾವ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ.

ಕಿರು ನೀರು ಸರಬರಾಜು ಯೋಜನೆ ಕೆಟ್ಟು ಹೋಗಿದೆ. ನೀರಿನ ಟ್ಯಾಂಕ್‌ ಇದ್ದರೂ ಪ್ರಯೋನಕ್ಕೆ ಬರು ತ್ತಿಲ್ಲ. ಗ್ರಾಮದಲ್ಲಿರುವ ಕೊಳವೆ ಬಾವಿ ಗಳಲ್ಲಿ ಉಪ್ಪು ನೀರು. ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ ಸಹ ಗ್ರಾಮಕ್ಕೆ ಇಲ್ಲ.ಶಿಥಿಲಗೊಂಡ ಅಂಗನವಾಡಿ ಕಟ್ಟಡ: ಗ್ರಾಮದಲ್ಲಿರುವ ಏಕೈಕ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದು, ಕೇಂದ್ರ ಶಾಲಾ ಕಟ್ಟಡದಲ್ಲಿ ನಡೆಯುತ್ತಿದೆ.

ಮತ್ತೊಂದು ಅಂಗನವಾಡಿ ಮಂಜೂರು ಮಾಡಲಾಗಿದೆ.ಆದರೆ, ಕಟ್ಟಡ ಕಾಮಗಾರಿ ನಡೆಯುತ್ತಿಲ್ಲ ಹೀಗಾಗಿ ಅಂಗನವಾಡಿ ಮಕ್ಕಳು ಸೌಲಭ್ಯದಿಂದ ವಂಚಿತವಾಗಿದ್ದಾರೆ. 
ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿ ಕಾರಿಗಳಿಗೆ, ಶಾಸಕರಿಗೆ  ಮನವಿ ಸಲ್ಲಿ ಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಭೀಮಣ್ಣ ಮೆಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.