ADVERTISEMENT

ವೀರೇಂದ್ರ, ಸಮುಂದರ್‌ ಸಿಂಗ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST

ಹುಬ್ಬಳ್ಳಿ: ಭಾರಿ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹವಾಲಾ ದಂಧೆಯ ಪ್ರಮುಖ ರೂವಾರಿ ಎನ್ನಲಾದ ಚಳ್ಳಕೆರೆಯ ಕೆ.ಸಿ. ವೀರೇಂದ್ರ ಮತ್ತು ಸಾಗರ್‌ ಹಣಕಾಸು ಸಂಸ್ಥೆ ಮಾಲೀಕ ಸಮುಂದರ್‌ ಸಿಂಗ್‌ ಸೇರಿದಂತೆ ಗೋವಾ ಮೂಲದ ಕ್ಯಾಸಿನೊ ಕ್ಲಬ್‌ಗಳ ಮಾಲೀಕರನ್ನು ನಗರದಲ್ಲಿ ವಿಚಾರಣೆಗೆ ಒಳಪಡಿಸಿದರು.

ವೀರೇಂದ್ರ ಅವರನ್ನು ಇಲ್ಲಿಗೆ ಕರೆತಂದು ಭಾನುವಾರ ರಾತ್ರಿ ವಿಚಾರಣೆ ನಡೆಸಿದರು. ಹಣ ಬದಲಾವಣೆಗೆ ಯಾರೆಲ್ಲಾ ಸಹಕರಿಸಿದ್ದಾರೆ ಎಂಬ ಮಾಹಿತಿಯನ್ನು ಅವರಿಂದ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆ ಸಲುವಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ವೀರೇಂದ್ರ ಜೊತೆ ಗುರುತಿಸಿಕೊಂಡಿರುವ ಸಮುಂದರ್‌ ಸಿಂಗ್‌ ಮತ್ತು ಗೋವಾ ಮೂಲದ ಕ್ಯಾಸಿನೊ ಕ್ಲಬ್‌ಗಳ ಮೂವರು ಮಾಲೀಕರನ್ನೂ
ಸೋಮವಾರ ವಿಚಾರಣೆಗೆ ಒಳಪಡಿಸಲಾಗಿದೆ.

ಇದೇ 9 ಮತ್ತು 10ರಂದು ವೀರೇಂದ್ರ ಮತ್ತು ಸಮುಂದರ್‌ ಸಿಂಗ್‌ ಅವರ ಮನೆ ಮತ್ತು ಹಣಕಾಸು ಸಂಸ್ಥೆ, ಜುವೆಲರಿ ಅಂಗಡಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.