ADVERTISEMENT

ಹೆಲ್ಮೆಟ್ ಜಾಗೃತಿ ಮೂಡಿಸಲು ಬಂದ ಯಮ!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 9:44 IST
Last Updated 28 ನವೆಂಬರ್ 2017, 9:44 IST
ಹೆಲ್ಮೆಟ್ ಜಾಗೃತಿ ಮೂಡಿಸಲು ಬಂದ ಯಮ!
ಹೆಲ್ಮೆಟ್ ಜಾಗೃತಿ ಮೂಡಿಸಲು ಬಂದ ಯಮ!   

ಕಲಬುರ್ಗಿ: 'ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ'!

- ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ಯಮ.

ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸರು ಕೈಗೊಂಡಿರುವ ಹೊಸ ಉಪಾಯವಿದು.

ADVERTISEMENT

ಹೀಗಾಗಿ, ಇಲ್ಲಿನ ರಸ್ತೆಗಳಲ್ಲಿ ಯಮಧರ್ಮನದ್ದೇ ಕಾರುಬಾರು ಇತ್ತು. ನಗರದಲ್ಲಿ ರಸ್ತೆಗಿಳಿದ ಯಮಧರ್ಮರಾಯನ ವೇಷಧಾರಿ ಒಂದು ಕೈಯಲ್ಲಿ ಗದೆ, ಮತ್ತೊಂದು ಕೈಯಲ್ಲಿ ಹೆಲ್ಮೆಟ್‌ ಹಿಡಿದು ಬೈಕ್ ಸವಾರರತ್ತ ತೆರಳಿ 'ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ' ಎನ್ನುತ್ತಾ ಎಲ್ಮೆಟ್‌ನ ಪ್ರಾಮುಖ್ಯತೆಯನ್ನು ತಿಳಿಸುತ್ತಿದ್ದರು.

‘ಹೋಗಿ ಹೋಗಿ ಯಮನ ಕೈಗೆ ತಗಲಾಕ್ಕೊಂಡ್ವಲ್ಲಪ್ಪಾ’ ಎಂಬ ಸ್ಥಿತಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಬೈಕ್‌ ಸವಾರರಿಗೆ ಎದುರಾಗಿತ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.