ADVERTISEMENT

‘ಅಸ್ಪೃಶ್ಯತೆ ವಿರುದ್ಧ ಸರ್ಜಿಕಲ್‌ ದಾಳಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:19 IST
Last Updated 9 ಜನವರಿ 2017, 8:19 IST
ಇಳಕಲ್‌ನ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿ ಆಯೋಜಿಸಿದ್ದ ಉಚಿತ ಸಾಮೂಹಿಕ ಮಂಗಲ ಪರಿಣಯ (ವಿವಾಹ ಮಹೋತ್ಸವ) ಕಾರ್ಯಕ್ರಮವನ್ನು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು
ಇಳಕಲ್‌ನ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿ ಆಯೋಜಿಸಿದ್ದ ಉಚಿತ ಸಾಮೂಹಿಕ ಮಂಗಲ ಪರಿಣಯ (ವಿವಾಹ ಮಹೋತ್ಸವ) ಕಾರ್ಯಕ್ರಮವನ್ನು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು   
ಇಳಕಲ್: ಮಾಂಗಲ್ಯ ಕಟ್ಟುವುದಷ್ಟೇ ಮದುವೆ ಅಲ್ಲ. ಮನಸ್ಸು ಕಟ್ಟುವುದು ಮದುವೆ. ₹ 1.30 ಲಕ್ಷ ಮಾಂಗಲ್ಯದ ಮದುವೆಗಳು ಮನಸ್ಸು ಮುರಿದ ಕಾರಣ ಇವತ್ತು ಕೋರ್ಟನಲ್ಲಿವೆ. ಪ್ರೀತಿ, ಕರುಣೆ, ನಂಬಿಕೆಯ ತಳಹದಿಯ ಮೇಲೆ ವಧು ವರರು ಮನಸ್ಸು ಕಟ್ಟಿಕೊಳ್ಳಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
 
ಭಾನುವಾರ ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿಯು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಹಾಗೂ ಇಲ್ಲಿಯ ಅಂಬೇಡ್ಕರ್ ಭವನ ನಿರ್ಮಾಣದ ವಾರ್ಷಿಕೋತ್ಸವದ ಅಂಗವಾಗಿ ಬೌದ್ಧ ಸಂಪ್ರದಾಯದಂತೆ ಆಯೋಜಿಸಿದ್ದ 7 ಜೋಡಿ ಉಚಿತ ಸಾಮೂಹಿಕ ಮಂಗಲ ಪರಿಣಯ (ವಿವಾಹ ಮಹೋತ್ಸವ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
50 ವಿಮಾನ ಖರೀದಿಸಿದವರ ವಿರುದ್ಧ, ಮಗಳ ಮದುವೆಗಾಗಿ ₹ 500 ಕೋಟಿ ಖರ್ಚು ಮಾಡಿ ಆಡಂಬರದ ಅಸಹ್ಯ ಪ್ರದರ್ಶನ ಮಾಡಿದವರ ವಿರುದ್ಧ, ದೇಶದ ಅರ್ಧದಷ್ಟು ಸಂಪತ್ತು ಹೊಂದಿದ ಬೆರಳೆಣಿಕೆಯಷ್ಟಿರುವ ಶ್ರೀಮಂತರ ವಿರುದ್ಧ ಯಾವುದೇ ದಾಳಿ ನಡೆಯುವುದಿಲ್ಲ. ಆದರೆ ದೇಶದ ಶೇ 80ರಷ್ಟು ಬಡವರನ್ನು ಬೀದಿಗೆ ತಳ್ಳಿ ತೊಂದರೆ ನೀಡಿದ ಬಗ್ಗೆ ನಮ್ಮ ಪ್ರಧಾನಿಗೆ ವಿಷಾದವಿಲ್ಲ. ಎಂದಿನಂತೆ ಮತ್ತೆ ಅಚ್ಛೇ ದಿನದ ಭರವಸೆ ನೀಡಿ ಮೋಸ ಮಾಡಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರದ ನೋಟು ಬದಲಾವಣೆ ಕ್ರಮವನ್ನು ಟೀಕಿಸಿದರು.
 
ಸಂಘಪಾಲ್ ಬಂತೇಜಿ, ವರಜ್ಯೋತಿ ಬಂತೇಜಿ, ಸಿದ್ದಣ್ಣ ಆಮದಿಹಾಳ, ಶರ ಣಪ್ಪ ಆಮದಿಹಾಳ, ಯಂಕನಗೌಡ ಹೂಲಗೇರಿ, ಬಾಬು ಕೋಡಿಹಾಳ, ಅಂಬೇಡ್ಕರ್‌ ಸೇವಾ ಸಮಿತಿಯ ಅಧ್ಯಕ್ಷೆ ಸಾವಿತ್ರಿ ಕೋಟೆಗಾರ ಶೋಭಾ ಆಮದಿಹಾಳ, ಮಂಜುನಾಥ ಇದ್ದರು.
 
***
‘ನೋಟ ಬದಲಾಗಲಿ’
‘ನೋಟ ಬದಲಾಗದ ಹೊರತು ನೋಟು ಬದಲಾವಣೆ ಮಾಡಿದರೆ ಏನು ಪ್ರಯೋಜನ ? ಸರ್ಜಿಕಲ್‌ ದಾಳಿ ನಡೆಯಬೇಕಿರುವುದು ನೋಟುಗಳ ಮೇಲಲ್ಲ. ಅಸಮಾನತೆ, ಅಸ್ಪೃಶ್ಯತೆ, ಬಡತನ ಹಾಗೂ ಮೌಢ್ಯಗಳ ವಿರುದ್ಧ ನಡೆಯಬೇಕು. 12 ನೇ ಶತಮಾನದಲ್ಲಿ ಜಾತಿ, ಅಸಮಾನತೆ ವಿರುದ್ಧ ಬಸವಣ್ಣ, 1932 ರಲ್ಲಿ ಅಂಬೇಡ್ಕರ್‌ ನಡೆಸಿದ ಸರ್ಜಿಕಲ್‌ ದಾಳಿಯ ಪರಿಣಾಮ ಇವತ್ತು ಮೋದಿ ಪ್ರಧಾನಿ ಆಗಿದ್ದಾರೆ. ಇದನ್ನು ಅರಿತುಕೊಂಡು ಮೋದಿ ಅವರು ಸಾಮಾಜಿಕ ಅನಿಷ್ಠಗಳ ವಿರುದ್ಧ ದಾಳಿ ಮಾಡುವ ದಿಟ್ಟತನ ತೋರಿಸಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು. 

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.