ADVERTISEMENT

‘ಕಣ್ಣುಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:06 IST
Last Updated 23 ಮೇ 2017, 9:06 IST

ಮಹಾಲಿಂಗಪುರ: ಕಣ್ಣುಗಳು ಮಾನ ವನ ಅತ್ಯಮೂಲ್ಯ ಅಂಗಗಳು, ದೇಹ ರಚನಾ ಶಾಸ್ತ್ರದಲ್ಲಿ ಕಣ್ಣುಗಳಿಗಿರುವಷ್ಟು ಮಹತ್ವ ಬೇರೆ ಅಂಗಗಳಿಗಿಲ್ಲ, ಪ್ರಪಂಚದ ದಿನ ನಿತ್ಯದ ಆಗುಹೋಗುಗಳನ್ನು ನೋಡಲು ಕಣ್ಣುಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿ ಎಂದು ಸಾಂಗ್ಲಿಯ ಲಯನ್ಸ್ ಕಣ್ಣಿನ ಆಸ್ಪತ್ರೆಯ ವ್ಯೆದ್ಯ ಮಹಮ್ಮದ ಶೇಖ್ ಹೇಳಿದರು.

ಸ್ಥಳೀಯ ಮಾರ್ಕೆಟ್‌ ಹತ್ತಿರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಾಂಗ್ಲಿಯ ಲಯನ್ಸ್ ಕಣ್ಣಿನ ಆಸ್ಪತ್ರೆ ಹಾಗೂ ಬಾಗಲಕೋಟೆಯ ಪಾಪ್ಯೂಲರ್‌ ಫ್ರಂಟ್ ಆಫ್ ಇಂಡಿಯಾ ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ಸರಂಕ್ಷಣೆ ಮಾಡಿಕೊಳ್ಳುವುದರಿಂದ ತಮ್ಮ ಜೀವ ರಕ್ಷಣೆ ಮಾಡಿಕೊಂಡಂತೆ, ಮನುಷ್ಯನ ಜೀವನದಲ್ಲಿ ಕಣ್ಣುಗಳು ಇಲ್ಲದಿದ್ದರೆ ಜೀವನ ನಶ್ವರ ಹಾಗೂ ಅಸಹನೀಯವೆನಿಸುತ್ತದೆ, ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸಲು ನಲವತ್ತರ ನಂತರ ಪ್ರತಿ ಆರು ತಿಂಗಳಿ ಗೊಮ್ಮೆ ಕಣ್ಣಿನ ತಜ್ಞರನ್ನು ಭೇಟಿಯಾ ಗುವಂತೆ ಸಲಹೆ ನೀಡಿದರು.

ADVERTISEMENT

ಸಂಘಟನೆಯ ಕಲಬುರ್ಗಿಯ ಅಧ್ಯಕ್ಷ ಮೋಹಸಿನ್‌ ಮಾತನಾಡಿ, ‘ಸಂಸ್ಥೆ ಯಿಂದ ಪ್ರತಿವರ್ಷ ವಿವಿಧ ಜನಪರ ಕೆಲಸಗಳನ್ನು ಮಾಡುತ್ತ ಬಂದಿದ್ದು ಬಡ ಜನರ, ದೀನದಲೀತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಆಯೋಜಿಸಿ ದ್ದೇವೆ, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಮೋಹಸಿನ್‌ ಗಡೇಕರ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ 350ಕ್ಕೂ ಹೆಚ್ಚು ಜನರ ಕಣ್ಣುಗಳ ತಪಾಸಣೆ ಮಾಡಲಾಯಿತು. ದೃಷ್ಟಿ ದೋಷ ಇದ್ದ ಅನೇಕರಿಗೆ ರಿಯಾಯ್ತಿ ದರದಲ್ಲಿ ಕನ್ನಡಕ ವಿತರಿಸ ಲಾಯಿತು. 30 ಜನರಿಗೆ ಕನಿಷ್ಟ ಖರ್ಚಿ ನಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಸಾಂಗ್ಲಿಗೆ ಕಳುಹಿ ಸಲಾಯಿತು. ಪಟ್ಟಣದ ಸುತ್ತಲಿನ ಗ್ರಾಮ ಜನರು ಶಿಬಿರದ ಪ್ರಯೋಜನ ಪಡೆದು ಕೊಂಡರು.

ಮುಖಂಡ ಸಜನಸಾಬ್ ಪೆಂಡಾರಿ, ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ, ಜಾವೇದ ಭಾಗ ವಾನ, ಬಸವರಾಜ ರಾಯರ, ಕಾಂಗ್ರೆಸ್ ಧುರೀಣ ವಿಜುಗೌಡ ಪಾಟೀಲ, ಮೌಲಾನಾ ಜಕಾರಿಯಾ, ಗೌಸ್ ನದಾಫ್, ಸಲೀಂ ಅವಟಿ, ಮುಸ್ತಾಕ ನಧಾಫ್, ಸೈಯದ ನಧಾಫ್, ಮೀರಾ ಸಾಬ್ ಅತ್ತಾರ, ರಫೀಕ ಜಂಗಿ, ಉಮರ ಮುನಿರಾಬಾದ, ಸೈಯದ ಐನಾಪುರ, ರಸೀದ ತಾಸವಾಲೆ, ಫಯಾಜ್ ಚಿನ ಗುಂಡಿ, ಮೋಸಾ ಬೂದಿಹಾಳ, ಮುನ್ನಾ ಅತ್ತಾರ, ನಬಿ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.