ADVERTISEMENT

‘ನೋಟುರದ್ದತಿ ಕ್ರಮ; ರಾಜಕೀಯ ಟೀಕೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:34 IST
Last Updated 31 ಜನವರಿ 2017, 6:34 IST
‘ನೋಟುರದ್ದತಿ ಕ್ರಮ; ರಾಜಕೀಯ ಟೀಕೆ ಸಲ್ಲ’
‘ನೋಟುರದ್ದತಿ ಕ್ರಮ; ರಾಜಕೀಯ ಟೀಕೆ ಸಲ್ಲ’   

ಮುಧೋಳ:  ನೋಟುರದ್ದತಿ ಕ್ರಮವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ ಆರ್ಥಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡಬೇಕು ಎಂದು ಡಾ.ಬಿ.ಎ.ಗೂಳಿ ಅಭಿಪ್ರಾಯ ಪಟ್ಟರು.

ನಗರದ ಎಸ್.ಆರ್. ಕಂಠಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಅಂತರ ಮಹಾವಿದ್ಯಾಲಯ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.

ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿಯಂತ್ರಣ, ಅರ್ಥವ್ಯವಸ್ಥೆ ಸುಧಾರಣೆಗೆ ನೋಟು ರದ್ದತಿ ಅಗತ್ಯವಿತ್ತು ಎಂದರು.

ಭಯೋತ್ಪಾದನೆ, ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಅನುಕೂಲವಾಗಲಿದೆ. ಪ್ರತಿಯೊಂದು ಕಾರ್ಯದ ಹಿಂದೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಇದ್ದೆ ಇರುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನಕ್ಕೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.  ಪ್ರೊ.ಬಿ.ಬಿ.ಪಾಟೀಲ ನೋಟು ಅಪಮೌಲ್ಯೀಕರಣ ಕುರಿತು ಮಾತನಾಡಿದರು. ಪ್ರಾಚಾರ್ಯ ಪ್ರೊ.ಎನ್.ಆರ್. ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಅಶೋಕ ಚಪ್ಪಳಗಾಂವ ಸ್ವಾಗತಿಸಿದರು. ಪ್ರೊ.ಅಶೋಕ ಗಂಗಣ್ಣವರ  ಮಾತನಾಡಿದರು. ಡಾ.ಎಂ.ಎನ್.ಸಿದ್ಧಲಿಂಗಪ್ಪನವರ, ಪ್ರೊ.ಜಿ.ಕೆ.ಘೋರ್ಪಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.