ADVERTISEMENT

‘ಮಹದಾಯಿ: ವಿರೋಧ ಪಕ್ಷದವರನ್ನು ಒಪ್ಪಿಸಿ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 6:37 IST
Last Updated 26 ಡಿಸೆಂಬರ್ 2017, 6:37 IST

ಬಾದಾಮಿ: ಮಹದಾಯಿ ಇತ್ಯರ್ಥಕ್ಕಾಗಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ನೀರು ಕೊಡಲು ಒಪ್ಪಿಗೆ ನೀಡಿ, ಪತ್ರವನ್ನು ಕಳಿಸಿದ್ದಾರೆ. ಆದರೆ ಅಲ್ಲಿನ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶಾಂತಾರಾಮ ನಾಯಕ ವಿರೋಧಿಸಿದ್ದು ಯಾಕೆ ? ಎಂದು ಸಂಸದ ಪಿ.ಸಿ. ಗದ್ದಿಗೌಡರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ, ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರ ಜೊತೆಗೆ ಸಿದ್ದರಾಮಯ್ಯ ಯಾಕೆ ಮಾಡನಾಡಲಿಲ್ಲ. ಕಾಂಗ್ರೆಸ್‌ನವರಿಗೆ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರು ಕೊಡುವುದು ಬೇಕಾಗಿಲ್ಲ. ಬರೀ ರಾಜಕೀಯ ಮಾಡುತ್ತಿದ್ದಾರೆ. ರೈತರ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.

ಚುನಾವಣೆ ಸಮೀಪ ಬಂದಿದೆಯೆಂದು ಯಡಿಯೂರಪ್ಪ ಅವರು ಮಹಾದಾಯಿ ಯೋಜನೆ ಬಗ್ಗೆ ಹೇಳುತ್ತಿಲ್ಲ. ಮೊದಲಿನಿಂದಲೂ ಮಹಾದಾಯಿ ಕಳಾಸಾ ಬಂಡೂರಿ ಬಗ್ಗೆ ಅವರಿಗೆ ಗೊತ್ತಿದೆ. ಯೋಜನೆಗೆ ₹ 100 ಕೋಟಿ ಮಂಜೂರು ಮಾಡಿ ಕಾಮಗಾರಿ ಆರಂಭಿಸಿದ್ದರು.ಆದರೆ ಕಾಂಗ್ರೆಸ್‌ನವರು ಯೋಜನೆಯನ್ನು ಸ್ಥಗಿತ ಮಾಡಿದರು ಎಂದು ಆರೋಪಿಸಿದರು.

ADVERTISEMENT

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಟಿ. ಪಾಟೀಲ, ಮಾಜಿ ಶಾಸಕ ರಾಜಶೇಖರ್‌ ಶೀಲವಂತ, ಮಹಾಂತೇಶ ಮಮದಾಪುರ, ಎಫ್‌.ಆರ್‌. ಪಾಟೀಲ, ಶರಣಬಸಪ್ಪ ಹಂಚಿನಮನಿ, ಬಿ.ಪಿ. ಹಳ್ಳೂರ, ಸಿದ್ದನಗೌಡ ಪಾಟೀಲ, ಸಿದ್ದಣ್ಣ ಶಿವಗುತ್ತಿ, ಸುರೇಶ ಯಲಿಗಾರ, ಎನ್‌.ಎಚ್‌. ಗುಡಿ, ಮುತ್ತಣ್ಣ ಹಳ್ಳಿಗುಡ್ಡ, ಎನ್‌.ಎಸ್‌. ಬೊಮ್ಮನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.