ADVERTISEMENT

ಮಾರಕ ರೋಗಮುಕ್ತ ಭಾರತ: ಸಂಕಲ್ಪ

ವಿವಿಧ ಸಂಘ–ಸಂಸ್ಥೆಗಳ ಸಾಥ್: ದಡಾರ, ರುಬೆಲ್ಲಾ ಲಸಿಕಾ ಅಭಿಯಾನ, ಜಾಗೃತಿ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:28 IST
Last Updated 8 ಫೆಬ್ರುವರಿ 2017, 9:28 IST

ಬಾದಾಮಿ: ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಎಲ್ಲರೂ ಆರೋಗ್ಯವಂತರಾ ಗಿರಬೇಕು. ಇಂದಿನ ಮಕ್ಕಳು ನಾಳಿನ ಭವಿಷ್ಯ ಭಾರತದ ನಾಗರಿಕರು. ಕಡ್ಡಾಯ ವಾಗಿ ಎಲ್ಲರೂ ಲಸಿಕೆ ಹಾಕಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆರೋಗ್ಯ, ಶಿಕ್ಷಣ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಲಸಿಕೆಯನ್ನು ಹಾಕುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವು ದಿಲ್ಲ. ಮಕ್ಕಳು ಆರೋಗ್ಯವಾಗಿರಲು ಲಸಿಕೆ ಕಡ್ಡಾಯವೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮೀಣ ಜನತೆಗೆ ಮತ್ತು ಪೋಷಕರಿಗೆ ತಿಳಿವಳಿಕೆ ಹೇಳಬೇಕು ಎಂದರು.

ಸಮಾರಂಭಕ್ಕೆ ಚಾಲನೆ ನೀಡಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜಯ ಕುಮಾರ ಬೇಟೆಗಾರ, ತಹಶೀಲ್ದಾರ್‌ ಎಸ್‌.ರವಿಚಂದ್ರ, ಬಿಇಓ ಅಂದಾನಪ್ಪ ವಡಗೇರಿ, ಶಿಶು ಅಭಿವೃದ್ಧಿ ಇಲಾಖೆ ಅಧಿ ಕಾರಿ ಯಲ್ಲಪ್ಪ ಚಲವಾದಿ ಮುಖ್ಯಶಿಕ್ಷಕ ಡಾ.ಆನಂದ ಪೂಜಾರ ಇತರರು ಇದ್ದರು.

ಡಾ. ಕವಿತಾ ಶಿವನಾಯ್ಕರ್‌ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರೇವಣಸಿದ್ದಪ್ಪ ಸ್ವಾಗತಿಸಿದರು. ಆರ್‌.ಬಿ.ಅಂಬಿಗೇರ ನಿರೂಪಿಸಿದರು. ಪಿ.ಎಚ್‌. ಮಹಾಲಿಂಗಪುರ ವಂದಿಸಿದರು.

26,854 ಮಕ್ಕಳಿಗೆ ಲಸಿಕೆ
ರಬಕವಿ(ಬನಹಟ್ಟಿ):
ಮುಂಬರುವ ದಿನಗಳಲ್ಲಿ ಭಾರತವನ್ನು ದಡಾರ ಮತ್ತು ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ರಬಕವಿ ಬನಹಟ್ಟಿ ನಗರಸಭೆ ಪ್ರಭಾರ ಪೌರಾಯುಕ್ತ ಎಸ್‌.ಎಸ್‌.ಹೆರಲಗಿ ತಿಳಿಸಿದರು.

ಅವರು ಮಂಗಳವಾರ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಎಸ್‌.ಎಸ್‌.ಮೊಳೆ ಮಾತನಾಡಿ, ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರದ ನೂತನ ಅಭಿಯಾನವಾಗಿದೆ. ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 26854 ಮಕ್ಕಳು ದಡಾರ ಮತ್ತು ರುಬೆಲ್ಲಾ ಲಸಿಕೆಯ ಸೌಲಭ್ಯ ಪಡೆದುಕೊಳ್ಳಲಿದ್ದಾರೆ.  ಈ ಲಸಿಕೆಯನ್ನು ಪಡೆದುಕೊಳ್ಳುವುದ ರಿಂದ 9 ತಿಂಗಳಿಂದ 15 ವರ್ಷದೊಳ ಗಿನ ಎಲ್ಲ ಮಕ್ಕಳ ಆರೋಗ್ಯ ಕಾಪಾಡಿ ಕೊಳ್ಳಬಹುದಾಗಿದೆ ಎಂದರು. 

ನಗರಸಭೆ ಅಧ್ಯಕ್ಷೆ ರಮೀಜಾ ಝಾರೆ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಅಧಿಕಾರಿ ಡಾ.ಆಯೇಶಾ ತಾಂಬೋಳಿ, ಭೀಮಶಿ ಪಾಟೀಲ, ಯಲ್ಲಪ್ಪ ಕಟಗಿ, ಚಿದಾನಂದ ಗಾಳಿ, ಯುನಿಸ್‌  ಚೌಗಲಾ, ಹಿರಿಯ ಆರೋಗ್ಯ ನೀರೀಕ್ಷಕ ತೋಷ ಬೆಳ್ಳಿಕಟ್ಟಿ, ಬಸವರಾಜ ಪಟ್ಟಣಶೆಟ್ಟಿ, ಆರ್‌.ವಿ.ಚವಾಣ, ಎಂ.ಕೆ.ಮುಲ್ಲಾ, ಪಿ.ವಿ.ಗೋಕಾವಿ ಇದ್ದರು. ಲಕ್ಷ್ಮಿ ಖವಾಸಿ ಪ್ರಾರ್ಥಿಸಿದರು. ಎಂ. ಎಂ.ಜಂಗ್ಲಿ ಸ್ವಾಗತಿಸಿದರು. ಮಲ್ಲಿಕಾ ರ್ಜುನ ಗಡೆನ್ನವರ ನಿರೂಪಿಸಿದರು. ಎಸ್.ವಿ.ಮೋಮಿನ್‌ ವಂದಿಸಿದರು.

ಜಾಗೃತಿ ಜಾಥಾ
ಇಳಕಲ್‌:
ಫೆ. 7ರಿಂದ ಆರಂಭವಾಗಿ ರುವ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದ ಜಾಗೃತಿ 28ವರೆಗೆ ನಡೆಯಲಿದೆ. ಸಮೀಪದ ಚಿಕ್ಕಕೊಡಗಲಿ ಎಲ್.ಟಿ. 2ರಲ್ಲಿ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾಥಾ ಮಾಡಿದರು.   

ಜಾಥಾದ ನೇತೃತ್ವವನ್ನು ಮುಖ್ಯಶಿಕ್ಷಕ ಎಸ್.ಟಿ. ಧೂಪದ ವಹಿಸಿದ್ದರು. ಶಿಕ್ಷಕ ವಿ.ವಿ.ದೇವಾಂಗಮಠ, ಬಿ.ಎಸ್. ಗಣಾಚಾರಿ, ಎಸ್.ಡಿ.ಮಲಗಿಹಾಳ, ಡಿ.ಎಚ್. ಪೂಜಾರಿ, ಎ.ಬಿ.ಸಪ್ಪಂಡಿ, ಕೆ.ಎಂ.ಮಂಟೂರ, ವಿ.ಎಸ್. ಚಳ್ಳಗಿಡದ ಪಾಲ್ಗೊಂಡಿದ್ದರು.

ಈ ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿ ದಡಾರ ಮತ್ತು ರುಬೆಲ್ಲಾ ರೋಗದ ಲಕ್ಷಣ, ತಡೆಗಟ್ಟುವ ವಿಧಾನ ಗಳು, ಲಸಿಕಾ ಅಭಿಯಾನ ಬಗ್ಗೆ ಸಾರ್ವ ಜನಿಕರಿಗೆ ಮಾಹಿತಿ ನೀಡಿದರು. ನಂತರ ಶಾಲೆಯಲ್ಲಿ ಪಾಲಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಸ್.ಟಿ. ಧೂಪದ ಮಾತನಾಡಿದರು.

‘ರೋಗ ನಿಯಂತ್ರಣಕ್ಕೆ ಕ್ರಮ’
ಇಳಕಲ್:
‘ದಡಾರ ಒಂದು ಮಾರಣಾಂತಿಕ ಕಾಯಿಲೆ. ಈ ಕಾಯಿಲೆಗೆ ಕಾರಣವಾದ ವೈರಸ್‌ ಕೆಮ್ಮಿದಾಗ ಮತ್ತು ಸೀನಿದಾಗ ಇತರರಿಗೆ ಹರಡುತ್ತದೆ. ಹಾಗಾಗಿ 9 ತಿಂಗಳಿಂದ 15 ವರ್ಷದೊಳ ಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕುಸುಮಾ ಮಾಗಿ ತಿಳಿಸಿದರು.

ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್‌ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ಅಶೋಕ ಕಿರಗಿ, ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿದರು. ಅಧ್ಯಕ್ಷೆ ವೈಶಾಲಿ ಘಂಟಿ ಅಭಿಯಾ ನಕ್ಕೆ ಚಾಲನೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಮಹಾಂತೇಶ ಹನಮನಾಳ, ರೋಟರಿ ಸಂಸ್ಥೆಯ ಅಧ್ಯಕ್ಷ ವಿಜಯ ಕುಮಾರ ಹಿರೇಮಠ, ಕಾರ್ಯದರ್ಶಿ ಬಸವರಾಜ ಹುಂಡೇಕಾರ ಇತರರು ಇದ್ದರು.

ಸರ್ಕಾರಿ ಶಾಲೆಯಲ್ಲಿ ಚಾಲನೆ
ಬೀಳಗಿ:
ಮಾರಕ ರೋಗಗಳಾದ ಧಡಾರ್ ಮತ್ತು ರೂಬೆಲ್ಲ ರೋಗಗಳ ನಿರ್ಮೂಲನೆಗೆ ಆರಂಭಿಸಲಾದ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಯಿತು. ತಾ.ಪಂ.ಅಧ್ಯಕ್ಷ ಶ್ರೀಶೈಲ ಸೂಳೀಕೇರಿ  ಕಾರ್ಯಕ್ರಮ ಉದ್ಘಾಟಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಹಾಸಿಂಬಿ ನಿಂಬಾಳ್ಕರ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಉದಯ ಕುಂಬಾರ, ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿದರು.

ಸದಸ್ಯ ಅಜ್ಜು ಭಾಯಿಸರಕಾರ, ತಾ.ಪಂ. ಉಪಾಧ್ಯಕ್ಷೆ ರೇಖಾ ಕಟ್ಟೆಪ್ಪ ನವರ, ಎಸ್‌ಡಿಎಂಸಿ ಅಧ್ಯಕ್ಷ ಸಾಬಣ್ಣ ಗಡ್ಡಿ, ಮುಖ್ಯವೈದ್ಯಾಧಿಕಾರಿ ಡಾ.ಸಂಜಯ ಯಡಹಳ್ಳಿ, ಡಾ. ವೈ.ಎಂ. ಜಾಯಗೊಂಡ ಇದ್ದರು. ಪಿ.ಎಸ್. ಜಾಧವ ಇತರರು ಈ ಸಂದರ್ಭದಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.