ADVERTISEMENT

ಶಿರಗುಪ್ಪಿ: ಮೊಸಳೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 6:44 IST
Last Updated 14 ಏಪ್ರಿಲ್ 2017, 6:44 IST
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕು ಶಿರಗುಪ್ಪಿಯ ಘಟಪ್ರಭಾ ನದಿ ದಂಡೆಯ ಮೇಲೆ ಗುರುವಾರ ಸೆರೆ ಸಿಕ್ಕ ಮೊಸಳೆ
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕು ಶಿರಗುಪ್ಪಿಯ ಘಟಪ್ರಭಾ ನದಿ ದಂಡೆಯ ಮೇಲೆ ಗುರುವಾರ ಸೆರೆ ಸಿಕ್ಕ ಮೊಸಳೆ   

ಬಾಗಲಕೋಟೆ: ಬೀಳಗಿ ತಾಲ್ಲೂಕು ಶಿರಗುಪ್ಪಿಯ ಬಸಯ್ಯ ಮಠ ಅವರ ಕಬ್ಬಿನ ಗದ್ದೆಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಗ್ರಾಮದ ಬಳಿಯ ಘಟಪ್ರಭಾ ನದಿಯಿಂದ ಬೆಳಿಗ್ಗೆ ಗದ್ದೆಯತ್ತ ಬಂದಿದ್ದ ಅತಿಥಿಯನ್ನು ಕಂಡ ಬಸಯ್ಯ ಹಾಗೂ ಅಕ್ಕಪಕ್ಕದ ಜಮೀನುಗಳ ರೈತರು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ವಲಯ ಅರಣ್ಯಾಧಿಕಾರಿ ಹನುಮಂತ ಡೋಣಿ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿ ಟಂಟಂ ವಾಹನದಲ್ಲಿ ಕೊಂಡೊಯ್ದು ರೊಳ್ಳಿ ಸಮೀಪ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಬಿಟ್ಟು ಬಂದರು.

ಆರು ಅಡ್ಡಿ ಉದ್ದ ಇದ್ದ ದೈತ್ಯ ಮೊಸಳೆ 90 ಕೆ.ಜಿ ತೂಗುತ್ತಿತ್ತು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT