ADVERTISEMENT

ಶುಚಿತ್ವವೇ ಕಾರ್ಯಸೂಚಿ

ಆರೋಗ್ಯ ಇಲಾಖೆಯಿಂದ ಖಾನಾವಳಿ, ಹೋಟೆಲ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:55 IST
Last Updated 25 ಮೇ 2017, 9:55 IST

ಲೋಕಾಪುರ: ಮುಂಗಾರು ಆಗಮನದ ಮುನ್ಸೂಚನೆ ನೀಡಿದೆ. ಆದಾಗಲೇ ಆರೋಗ್ಯ ಇಲಾಖೆ ಎಚ್ಚೆತ್ತುಗೊಂಡು ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂ ಡಿದೆ. ಸುತ್ತಮುತ್ತ ಪರಿಸರದ ಶುಚಿತ್ವವೇ ಆರೋಗ್ಯ ಇಲಾಖೆ ಕಾರ್ಯಸೂಚಿ ಆಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು.

ಪಟ್ಟಣದಲ್ಲಿ ಹೋಟೆಲ್ ಮತ್ತು ಖಾನಾವಳಿಯ ಮೇಲೆ ದಿಢೀರ್‌ ದಾಳಿ ನಡೆಸಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು. ಒಂದು ವಾರದೊಳಗೆ ನೀವು ಸ್ವಚ್ಛತೆ ಕಾಪಾಡಿಕೊಳ್ಳದೇ ಇದ್ದರೆ ಕಾನೂನಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಶುದ್ಧವಾದ ಕುಡಿಯುವ ನೀರು, ಶುಚಿತ್ವವಾದ ಆಹಾರವನ್ನು ನೀಡಬೇಕು ಎಂದು ಮಾಲೀಕರಿಗೆ ತಾಕೀತು ಮಾಡಿದರು.

ಸ್ವಚ್ಛತೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ ಸಮಗ್ರ ರೂಪುರೇಷೆ ತಯಾರಿಸಿದೆ. ಆರಂಭದಲ್ಲಿ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ತೆರಳಿ ಸೊಳ್ಳೆಗಳ ನಿಯಂತ್ರಣ, ಅದು ಹರಡುವಂತಹ ರೋಗಗಳ ಬಗ್ಗೆ ಜನರಿಗೆ ಮನವರಿಕೆ ನೀಡುವ ಪ್ರಯತ್ನ ನಡೆಸಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆ ಪ್ರತಿನಿಧಿಗಳು ವಾರ್ಡ್ ಮಟ್ಟದಲ್ಲಿ ಪ್ರತಿ ಮನೆಗಳಿಗೆ ತೆರಳಿ ತಿಳಿವಳಿಕೆ ನೀಡುವುದರೊಂದಿಗೆ ನೀರು ಕಟ್ಟಿ ನಿಲ್ಲುವುದನ್ನು ತೆರವುಗೊಳಿ ಸುವ ಕೆಲಸ ಆರಂಭಿಸಿದ್ದಾರೆ. ಅದ ರೊಂದಿಗೆ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿ ನಿರ್ದೇಶನ ನೀಡುತ್ತಿದ್ದಾರೆ.

ಅನಧಿಕೃತ ನೀರಿನ ಘಟಕಗಳ ಮೇಲೆ ನಿಗಾ ಇಡಲಾಗಿದೆ, ಹೋಟೆಲಿನಲ್ಲಿ  ಬಾಲ ಕಾರ್ಮಿಕರನ್ನು ಇಟ್ಟುಕೊಂಡರೆ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಲೋಕಾಪುರ ಆರೋಗ್ಯಾಧಿಕಾರಿ ಡಾ.ಸಚಿನ್ ಪೂಜಾರ, ಡಾ.ವಿನಯ ಕುಲಕರ್ಣಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.