ADVERTISEMENT

‘ಶೋಷಿತ ವರ್ಗಗಳ ಆಶಾಕಿರಣ ಅಂಬೇಡ್ಕರ್‌’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:45 IST
Last Updated 18 ಏಪ್ರಿಲ್ 2017, 6:45 IST

ಕೆರೂರ: ‘ನನಗಿಂತ ಸಮಾಜ ದೊಡ್ಡದು, ಸಮಾಜಕ್ಕಿಂತ ದೇಶ ದೊಡ್ಡದು ಎಂಬ ಅಂಬೇಡ್ಕರ್ ಆಶಯದೊಂದಿಗೆ ದೇಶ ಕಟ್ಟುವ ಕೆಲಸ ಮಾಡಬೇಕು. ಸನ್ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಉಪವಿಭಾಗಾಧಿಕಾರಿ ಶಂಕರ ಗೌಡ ಸೋಮನಾಳ ಹೇಳಿದರು.ಇಲ್ಲಿನ ತರಕಾರಿ ಮಾರ್ಕೆಟ್‌ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಿತರಕ್ಷಣಾ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ದೀನ ದಲಿತರ ಮತ್ತು ಹಿಂದುಳಿದ ವರ್ಗಳ ಏಳಿಗೆಗಾಗಿ ಅವಿರತ ಶ್ರಮಿಸಿದರು. ಅವರ ಆದರ್ಶ, ತತ್ವಗಳನ್ನು ಪಾಲಿಸಬೇಕು ಎಂದರು.ಸಂಘದ ಅಧ್ಯಕ್ಷ ವೈ.ಸಿ. ಕಾಂಬಳೆ ಮಾತನಾಡಿ, ದೇಶದಲ್ಲಿ ಸಾವಿರಾರು ವರ್ಷಗಳಿಂದ ದಮನಿತಕ್ಕೆ ಒಳಗಾಗಿದ್ದ ಜಾತಿಗಳಿಗೆ ಸಮಾನತೆಯ ಮೂಲಕ ಅಂಬೇಡ್ಕರ್‌ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದರು.

ಟಿಪ್ಪುಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ್‌ ಮುಲ್ಲಾತಂ ಮಾತನಾಡಿದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ, ಪಟ್ಟನ ಪಂಚಾಯ್ತಿ ಅಧ್ಯಕ್ಷ ಸದಾನಂದ ಮದಿ, ವ್ಯಾಪಾರಸ್ಥ ಮಲ್ಲಪ್ಪಜ್ಜ ಘಟ್ಟದ, ಬಿ.ಎಂ.ಡಾಂಗೆ, ನೀಲಕಪ್ಪ ಮಲ್ಲಾಡದ, ಎಸ್.ಡಿ. ಚಿಟಗುಬ್ಬಿ, ಯಾಸೀನ್‌ ಖಾಜಿ, ಹನಮಂತ ತಿಮ್ಮಾಪುರ, ಮುತ್ತಣ್ಣ ಗಾಜಿ, ರಮೇಶ ಚವ್ಹಾಣ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.