ADVERTISEMENT

ಸಮಾಜದ ಸಂಘಟನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:34 IST
Last Updated 31 ಜನವರಿ 2017, 6:34 IST

ಬನಹಟ್ಟಿ:  ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದು ಜಿಲ್ಲಾ ಶಿವಶಿಂಪಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಮೊಳೇದ ಹೇಳಿದರು.

ನಗರದಲ್ಲಿ ಜಿಲ್ಲಾ ಶಿವಶಿಂಪಿ ಸಮಾಜದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಸಮಾಜದ ಸಂಘಟನೆಯಲ್ಲಿ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅದಕ್ಕಾಗಿ ಸಮಾಜವನ್ನು ಬಲ ಪಡಿಸಲು ಪ್ರತಿಯೊಬ್ಬರು ಸನ್ನದ್ಧರಾಗಿ ಎಂದರು.

ಇದೇ ಏಪ್ರಿಲ್‌16 ರಂದು ಜಮಖಂಡಿಯಲ್ಲಿ ಶಿವದಾಸಿಮಯ್ಯ ಅವರ ಜಯಂತಿ ಉತ್ಸವ ಹಾಗೂ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ರೂಪ ರೇಷೆ ತಯಾರಿಸಲು ಜಮಖಂಡಿ ಘಟಕದವರಿಗೆ ಸೂಚಿಸಲಾಯಿತು. ಸಮಾರಂಭದಲ್ಲಿ ಹಿರಿಯರಾದ ಶ್ರೀಶೈಲಪ್ಪ ಸಣಕಲ್ಲ, ಬಿ. ಪಿ.ಮಮದಾಪುರ, ಬಸವರಾಜ ಕರನಂದಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಕೆ.ತಾಳಿಕೋಟಿ, ಮಲ್ಲಿಕಾರ್ಜುನ ಕೋಲಾರ, ಸದಸ್ಯರಾದ ಮಲ್ಲೇಶ ಆಳಗಿ, ಶರಣಪ್ಪ ಜಡರಾಮಕುಂಟಿ, ಶೀಶೈಲ ಶಿರೋಳ, ಮಲ್ಲಿಕಾರ್ಜುನ ತುಂಗಳ, ಶ್ರೀಶೈಲ ಜಾಲವಾದಿ, ಸಂಕಣ್ಣ ಗಂಗಣ್ಣವರ, ವಿಶ್ವನಾಥ ಮುನವಳ್ಳಿ, ಬಸವರಾಜ ಕಪಲಿ, ವಿಜಯಕುಮಾರ ಐಹೊಳ್ಳಿ, ಸುಹಾಸ ಅಲೆಗಾವಿ, ವೀರಣ್ಣ ಗಂಗಾವತಿ, ಶೇಕಣ್ಣ ಬ್ಯಾಳಿ, ಮಹಾಂತೇಶ ಐವಳ್ಳಿ  ಹಾಜರಿದ್ದರು. ಚಿದಾನಂದ ಸೊಲ್ಲಾಪೂರ ಸ್ವಾಗತಿಸಿದರು. ಕಿರಣ ಆಳಗಿ ನಿರೂಪಿಸಿದರು. ಗಣೇಶ ಕುಬಸದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.