ADVERTISEMENT

ಸರ್ವಧರ್ಮ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 20 ಮೇ 2017, 6:01 IST
Last Updated 20 ಮೇ 2017, 6:01 IST

ಹುನಗುಂದ: ‘ಸಮಾಜದ ವಿವಿಧ ಸಂಘಟನೆಗಳು ದೀನ ದಲಿತರು ಹಾಗೂ ಸಾಮಾನ್ಯರ ಸೇವೆಗೆ ಮುಂದಾಗಬೇಕು. ಅದರಲ್ಲೂ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುವುದು. ಸಂಘಟನೆಯಲ್ಲಿ ಸಾಂಘಿಕತೆ ಹೆಚ್ಚುವುದು’ ಎಂದು ಜಂಗಮ ಸಮಾಜದ ಹಿರಿಯ ಮಹಾಂತಯ್ಯ ಗಚ್ಚಿನಮಠ ಹೇಳಿದರು.

ಇಲ್ಲಿನ ಹಜರತ್ ಸಯ್ಯದ್ ಅಮೀರ್ ಹಮಜಾ ದರ್ಗಾ ಉರುಸ್ ಕಮಿಟಿ ಈಚೆಗೆ ಏರ್ಪಡಿಸಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಯ್ಯದ್ ಖಾಜಾ ಅಮೀನ್ ಹಾಜಿಪೀರ್ ಪೀರಜಾದೆ, ಸಬುಬಕರ್ ಸಕಾಫಿ ಮತ್ತು ಮೊಹಮ್ಮದ್ ತಾಜುದ್ದೀನ್ ನೇತೃತ್ವ ವಹಿಸಿದ್ದರು. ಶೇಖರಪ್ಪ ಬಾದವಾಡಗಿ, ಮೊಹಮ್ಮದ್ ಖಾಜಿ, ಯಲಗುರದಪ್ಪ ಶೇಬಣ್ಣವರ, ಮೊಹಮ್ಮದ್ ದೋಟಿಹಾಳ, ರಜಾಕ್ ರೇಶ್ಮಿ, ಸಬ್ಜೆಸಾಬ್ ಮಾನ್ವಿ, ಗಿರಿಮಲ್ಲಪ್ಪ ಹಳಪೇಟಿ, ಜಬ್ಬಾರ ಕಲಬುರ್ಗಿ, ಸಾಂತಪ್ಪ ಹೊಸಮನಿ, ಮೆಹಬೂಬ್ ಸರಕಾವಸ, ಇಮಾಮಸಾಬ್  ಧನ್ನೂರ, ಮಲ್ಲು ಚೂರಿ, ಮೆಹಬೂಬ್ ಸಾಲ ವಾಡಗಿ, ಖತಲ್‌ಸಾಬ್ ಸುತಗುಂಡರ ಮತ್ತು ದಾನಿ ಕಾಸ್ಮೀರ್‌ಸಿಂಗ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.