ADVERTISEMENT

‘ಸಸಾಲಟ್ಟಿ:ಅಧಿವೇಶನದಲ್ಲಿ ಚರ್ಚೆ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:13 IST
Last Updated 21 ಜನವರಿ 2017, 8:13 IST
‘ಸಸಾಲಟ್ಟಿ:ಅಧಿವೇಶನದಲ್ಲಿ ಚರ್ಚೆ’
‘ಸಸಾಲಟ್ಟಿ:ಅಧಿವೇಶನದಲ್ಲಿ ಚರ್ಚೆ’   

ಮಹಾಲಿಂಗಪುರ: ತೇರದಾಳ ಭಾಗದ ರೈತರಿಗೆ ವರದಾನವಾಗಬಲ್ಲ ಸಸಾಲಟ್ಟಿ ಏತ ನೀರಾವರಿ ಯೋಜನೆಯ ಅನುಷ್ಠಾನ ಕುರಿತು  ಫೆ. 6 ರಂದು ನಡೆಯುವ ಅಧಿವೇಶನದಲ್ಲಿ ಚರ್ಚಿಸುವೆ ಎಂದು ಕುಡಚಿ ಶಾಸಕ ಪಿ. ರಾಜು ಹೇಳಿದರು. 

ಸ್ಥಳೀಯ ರಾಣಿಚನ್ನಮ್ಮ ವೃತ್ತದಲ್ಲಿ ಸಸಾಲಟ್ಟಿ ಏತ ನೀರಾವರಿ ಹೋರಾಟ ಸಮಿತಿ ಯೋಜನೆ ಜಾರಿಗಾಗಿ ನಡೆಸು­ತ್ತಿರುವ ಅನಿರ್ಧಿಷ್ಟಾವಧಿ ಸತ್ಯಾಗ್ರಹದ ವೇದಿಕೆಯಲ್ಲಿ ರೈತರ ಮನವಿ ಸ್ವೀಕರಿಸಿ ಮಾತನಾಡಿದರು.

ರಾಜ್ಯದಲ್ಲಿರುವ ನೀರಾವರಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ನೀರಿನ ಬಳಕೆ ಹಾಗೂ ಅಗತ್ಯತೆ  ಬಗ್ಗೆ ಪ್ರಸ್ತಾವ ಮಾಡುತ್ತಿಲ್ಲ. ಪ್ರವಾಹ ಬಂದಾಗ ನೀರು ಎಲ್ಲಿ ಹೆಚ್ಚು ಉಳಿಸಬಹುದು ಮತ್ತು ಉಳಿಸಿದ ನೀರನ್ನು ಹೇಗೆ ಬಳಸಬಹುದು ಎಂಬ ಮಾಹಿತಿ ನೀಡಬೇಕು. ರೈತರೂ ತಮಗಿರುವ ಸಮಸ್ಯೆ ಹಾಗೂ ಅವುಗಳ ನಿವಾರಣೆ ಜೊತೆ ಕೆಲವು ತಾಂತ್ರಿಕ ಮಾಹಿತಿಯನ್ನು ತಜ್ಞರೊಂದಿಗೆ ಸಮಾಲೋಚಿಸಬೇಕು ಎಂದರು.

ಸಸಾಲಟ್ಟಿ ಏತ ನೀರಾವರಿಗೆ ಅಂದಾಜು ಎರಡೂವರೆ ಟಿಎಂಸಿ ನೀರಿನ ಅಗತ್ಯವಿದ್ದು ಕರ್ನಾಟಕದ ಪಾಲಿನ ಕೃಷ್ಣಾ ನದಿ ನೀರಿನ ಪಾಲಿನಲ್ಲಿ ಉಳಿಸಿ ಪಡೆಯಬೇಕಾಗಿದೆ. ಇದು ತರಾತುರಿಯಲ್ಲಿ ಮಾಡುವ ಕೆಲಸವಲ್ಲ. ಜಲತಜ್ಞರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಿ ಹೋರಾಟ ಮುಂದುವರೆಸಬೇಕು ಎಂದು ಹೇಳಿದರು.

ರೈತರಾದ ಮಲ್ಲಿಕಾರ್ಜುನ ಕೌಜಲಗಿ, ಮಲ್ಲಪ್ಪ ಮಿರ್ಜಿ, ಗಂಗಾಧರ ಮೇಟಿ, ಮಹಾಲಿಂಗ ಇಟ್ನಾಳ, ಶೇಖರ ಅಂಗಡಿ, ವೀರೇಶ ಆಸಂಗಿ, ಅರ್ಜುನ ಬಂಡಿವಡ್ಡರ, ಶಿವು ಟಿರಕಿ, ಸಿದ್ದು ಉಳ್ಳಾಗಡ್ಡಿ, ಶಿವಪ್ಪ ಹೊಸೂರ, ಖಲೀಲ ಮುಲ್ಲಾ, ಚನ್ನಪ್ಪ ಬನಾಜ, ಸುರೇಶ ಮಡಿವಾಳ, ನಿಂಗಪ್ಪ ಬಾಳಿಕಾಯಿ, ಮಹಾದೇವ ಹೆಗ್ಗಾಣಿ, ಸತ್ಯಪ್ಪ ಸೈದಾಪುರ, ರಮೇಶ ಬಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.