ADVERTISEMENT

‘ಸಾಧನೆ ಗೆಲುವಿಗೆ ಶ್ರೀರಕ್ಷೆ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:44 IST
Last Updated 28 ಡಿಸೆಂಬರ್ 2016, 5:44 IST

ಇಳಕಲ್:  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್  ಸರ್ಕಾರ ಮೂರೂವರೆ ವರ್ಷದಲ್ಲಿ ಮತಕ್ಷೇತ್ರಕ್ಕೆ ನೀರಾವರಿ, ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.   

ಇಲ್ಲಿನ ನಗರದ ತಮ್ಮ ನಿವಾಸದಲ್ಲಿ ನಡೆದ ಎಪಿಎಂಸಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೂರೂವರೇ ವರ್ಷಗಳ ನಂತರ ಮಾಜಿ ಶಾಸಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಸಿಡಿ ಪ್ರಕರಣದಲ್ಲಿ ನನ್ನ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕೈವಾಡವಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ನೇರ ಹಾಗೂ ನಿಷ್ಠುರ. ಯಾವತ್ತಲೂ ಮತ್ತೊಬ್ಬರಿಗೆ ದ್ರೋಹ ಬಗೆಯಲಾರೆ’ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು.

ಸಭೆಯಲ್ಲಿ ಸಿದ್ದಪ್ಪ ಹೊಸೂರ, ಅಮೀನಪ್ಪ ಸಂದಿಗವಾಡ, ನಗರಸಭೆ ಅಧ್ಯಕ್ಷೆ ತೇಜಮ್ಮ ವದ್ದಿ, ನಗರದ ಯೊಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ ಸುರಪೂರ, ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ, ಬಸವರಾಜ ಅಂಗಡಿ, ಗಂಗಾಧರ ದೊಡ್ಡಮನಿ, ರೆಹಮಾನಸಾಬ ದೊಡ್ಡಮನಿ, ಮಲ್ಲನಗೌಡ ಪಾಟೀಲ, ಅಪ್ಪಾಸಾಹೇಬ ನಾಡಗೌಡ ಇದ್ದರು.

ಚುನಾವಣೆ: ಅಭ್ಯರ್ಥಿಗಳ ಹುಡುಕಾಟ
ಲೋಕಾಪುರ: 
ಎಪಿಎಂಸಿ ನಿರ್ದೇಶಕ ಸ್ಥಾನದ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ಮಹಾಲಿಂಗಪುರ ಮತಕ್ಷೇತ್ರದ ವ್ಯಾಪ್ತಿಯ ಲೋಕಾಪೂರ, ಹೆಬ್ಬಾಳ ಮತ್ತು ಚಿಚಖಂಡಿ ಬಿ.ಕೆಯ ಕೃಷಿಕರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಚುರುಕುಗೊಂಡಿದೆ.        

ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಲುವಾಗಿ ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರಿಗೆ ಪ್ರತಿಷ್ಠೆಯಾಗಿದೆ. ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲ್ಲುವ ಕುದುರೆಗಾಗಿ ಹುಡುಕಾಟದಲ್ಲಿ ಪಕ್ಷದ ನಾಯಕರು ಮುಂದಾಗಿದ್ದಾರೆ.

ಲೋಕಾಪುರ ಕೃಷಿಕರ ಕ್ಷೇತ್ರ ಹಿಂದುಳಿದ ಅ--- ವರ್ಗಕ್ಕೆ. ಹೆಬ್ಬಾಳ ಮೀಸಲು ಕ್ಷೇತ್ರ. ಚಿಚಖಂಡಿ ಬಿ.ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಲೋಕಾಪುರ ಕ್ಷೇತ್ರದಲ್ಲಿ ಪುರುಷ ಮತದಾರರು 6983. ಮಹಿಳಾ ಮತದಾರರು 2,385 ಸೇರಿದಂತೆ ಒಟ್ಟು 9,368 ಸದಸ್ಯರಿದ್ದಾರೆ.

ಹೆಬ್ಬಾಳ ಕ್ಷೇತ್ರದಲ್ಲಿ ಪುರುಷ ಮತದಾರರು 6,226. ಮಹಿಳಾ ಮತದಾರರು 2,651 ಸೇರಿದಂತೆ ಒಟ್ಟು 8877 ಸದಸ್ಯರಿದ್ದಾರೆ. ಚಿಚಖಂಡಿ ಬಿ.ಕೆ ಕ್ಷೇತ್ರದಲ್ಲಿ ಪುರಷ ಮತದಾರರು 4,200.  ಮಹಿಳಾ ಮತದಾರರು 1,555 ಸೇರಿದಂತೆ ಒಟ್ಟು 5755 ಸದಸ್ಯರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.