ADVERTISEMENT

ಸಿಗದ ಚಿಕಿತ್ಸೆ: ಮಕ್ಕಳು, ಪೋಷಕರ ಪ್ರತಿಭಟನೆ

ಹಳೆಯ ಬಾಗಲಕೋಟೆ 50 ಹಾಸಿಗೆಗಳ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:13 IST
Last Updated 10 ಜನವರಿ 2017, 5:13 IST
ಬಾಗಲಕೋಟೆ: ಆಸ್ಪತ್ರೆಗೆ ಬಂದು ಗಂಟೆಗಟ್ಟಲೇ ಕಾದು ಕುಳಿತರೂ ವೈದ್ಯರು ಬಂದು ಚಿಕಿತ್ಸೆ ನೀಡದ ಕಾರಣ ಬೇಸತ್ತ ಅಂಗವಿಕಲ ಮಕ್ಕಳ ಹಾಗೂ ಅವರ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಹಳೆಯ ಬಾಗಲಕೋಟೆ 50 ಹಾಸಿಗೆಗಳ ಆಸ್ಪತ್ರೆಯ ಎದುರು ಸೋಮವಾರ ನಡೆಯಿತು.
 
ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣೆಗಾಗಿ ತಾಲ್ಲೂಕಿನ ವಿವಿಧೆಡೆ ಯಿಂದ ಅಂಗವಿಕಲ ಹಾಗೂ ಬುದ್ಧಿ ಮಾಂದ್ಯ ಮಕ್ಕಳು ಮುಂಜಾನೆಯೇ ಆಸ್ಪತ್ರೆಗೆ ಬಂದಿದ್ದರು. ಮಕ್ಕಳ ತಪಾಸಣೆ ಗಾಗಿ ಬೆಂಗಳೂರಿನಿಂದಲೂ ವೈದ್ಯರು ಬರಲಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಸಹಿ ಮತ್ತು ಮೊಹರು ಇರುವ ಚೀಟಿಗಳನ್ನು ಕೊಡಲಾಗಿತ್ತು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಅವರ ಪೋಷಕರು ಕರೆತಂದಿದ್ದರು.
 
ಬೆಳಿಗ್ಗೆ ಬಂದು ಆಸ್ಪತ್ರೆ ಎದುರು ಪಾಳಿ ಹಚ್ಚಿದರೂ ಯಾವುದೇ ವೈದ್ಯರು ಬರಲಿಲ್ಲ. ಕಾದು ಬೇಸತ್ತು ವೈದ್ಯರ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದರೆ, ಚಿಕಿತ್ಸೆ ವಿಚಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ ಎಂಬ ಉತ್ತರ ಅವರಿಂದ ಬಂದಿದೆ. ಇದರಿಂದ ಆಕ್ರೋಶಗೊಂಡ ಮಕ್ಕಳು ಹಾಗೂ ಅವರ ಪೋಷಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ದರು. ಆದರೂ ಯಾವುದೇ ಸ್ಪಂದನೆ ದೊರೆಯದ ಕಾರಣಕ್ಕೆ ಕೆಲವರು ಮಕ್ಕ ಳೊಂದಿಗೆ ಊರಿಗೆ ಮರಳಿದರು. ನಂತರ ಬಂದ ಆಸ್ಪತ್ರೆಯ ವೈದ್ಯರು ಬೆರಳೆಣಿಕೆ ಯಷ್ಟು ಇದ್ದ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಕಳುಹಿಸಿದರು.
 
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಬಿ.ಗೊರವರ ಅವರನ್ನು ಸಂಪರ್ಕಿ ಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.