ADVERTISEMENT

‘ಸೌಜನ್ಯದ ಬದುಕಿಗೆ ವಿಶ್ವಕರ್ಮರು ಮಾದರಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 5:33 IST
Last Updated 20 ಸೆಪ್ಟೆಂಬರ್ 2017, 5:33 IST

ಮಹಾಲಿಂಗಪುರ: ಪ್ರಪಂಚದ ನೀಲನಕ್ಷೆ ತಯಾರಿಸಿ ಜನರ ಜೀವನಕ್ಕೆ ಮಾರ್ಗ ಕಲ್ಪಿಸಿಕೊಟ್ಟ ವಿಶ್ವಕರ್ಮರನ್ನು ಆದ್ಯ ಪ್ರವರ್ತಕ ಎಂದು ನಂಬಲಾಗಿದೆ, ವಿಶ್ವಕರ್ಮ ಸಮಾಜವು ಸೌಜನ್ಯದ ಬದುಕಿಗೆ ನಮ್ಮ ದೇಶಕ್ಕೆ ಮಾದರಿಯಾಗಿ ಬದುಕುತ್ತಿದೆ ಎಂದು ಸಿದ್ಧರಾಮ ಶಿವಯೋಗಿಗಳು ಹೇಳಿದರು.

ರನ್ನಬೆಳಗಲಿಯ ವಿಶ್ವಕರ್ಮ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಆಯೋಜಿಸಿದ್ದ ವಿಶ್ವ ಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಾಶಿಬಾಯಿ ಪುರಾಣಿಕ ಮಾತನಾಡಿದರು. ಬಸವರಾಜ ಕಂಬಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಕಮ್ಮಾರ, ಸದಾಶಿವ ಕಂಬಾರ ಉಪನ್ಯಾಸ ನೀಡಿ ದರು. ಪಟ್ಟಣ ಪಂಚಾಯ್ತಿ ಸದಸ್ಯ ಅಶೋಕ ಸಿದ್ದಾಪುರ, ಪಾಂಡು ಸಿದ್ದಾ ಪುರ, ಮಹಾಲಿಂಗಪ್ಪ ಪುರಾಣಿಕ ಇದ್ದರು. ಅಣ್ಣಪ್ಪ ಕಂಬಾರ ನಿರೂಪಿಸಿ ದರು, ಬಸವರಾಜ ಲೋಹಾರ ವಂದಿಸಿದರು.

ADVERTISEMENT

ಗುಳೇದಗುಡ್ಡ ವರದಿ ಇಲ್ಲಿನ ಪಟ್ಟಣದ ಸರ್ಕಾರಿ ಇಲಾಖೆ ಹಾಗೂ ಶಾಲಾ ಕಾಲೇಜುಗಳಲ್ಲಿ, ಖಾಸಗಿ ಸಂಘ ಸಂಸ್ಥೆಗಳಲ್ಲಿ ವಿಶ್ವಕರ್ಮನ ಜಯಂತಿ ಉತ್ಸವನ್ನು ಸಡಗರ ಸಂಭ್ರಮ ದಿಂದ ಭಾನುವಾರ ಆಚರಿಸಿದರು.  

ತಹಶೀಲ್ದಾರ ಕಚೇರಿ: ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ವಿಶ್ವಕರ್ಮನ ಜಯಂತಿ ಉತ್ಸವ ನಿಮಿತ್ತ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ, ಗ್ರಾಮ ಲೆಕ್ಕಾಧಿಕಾರಿ ಹಳ್ಳೂರ, ಎಚ್.ಡಿ. ಭಗವತಿ, ಗ್ರಾಮ ಸಹಾಯಕರು ಮಂಜುಳಾ ಚಳನ್ನವರ, ಚಳ್ಳಪ್ಪ ಚಳನ್ನವರ, ಅನ್ವರ ವಾಲೀಕಾರ ಇದ್ದರು.

ಪುರಸಭೆ ಕಚೇರಿ: ಇಲ್ಲಿನ ಪುರಸಭೆ ಕಚೇರಿಯಲ್ಲಿ ವಿಶ್ವಕರ್ಮನ ಜಯಂತಿ ಉತ್ಸವ ನಿಮಿತ್ತ ಭಾವಚಿತ್ರಕ್ಕೆ ರಮೇಶ ಪದಕಿ ಅವರು ವಿಶೇಷ ಪೂಜೆ ನೆರವೇರಿಸಿದರು. ಮುಖ್ಯಾಧಿಕಾರಿ ಏಸು ಬೆಂಗಳೂರು, ಪಿ.ವೈ. ದುರಗದ, ಉಮೇಶ ವರದಪ್ಪನವರ, ಕುಮಾರ ತಟ್ಟಮಠ, ಹೆಬ್ಬಳ್ಳಿ, ನಾಗರಾಜ ಕಟ್ಟಿಮನಿ ಇತರರು ಇದ್ದರು.

ಮಳಿಯಪ್ಪಯ್ಯನ ಗುಡಿ: ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಮಳಿಯಪ್ಪಯ್ಯನ ಗುಡಿಯಲ್ಲಿ ಸಮಾಜ ಭಾಂದವರು ವಿಶ್ವಕರ್ಮ ಜಯಂತಿ ಉತ್ಸವ ನಿಮಿತ್ತ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.ಸಮಾಜದ ಅಧ್ಯಕ್ಷ ಮೌನೇಶ ಪತ್ತಾರ, ಈರಪ್ಪ ಕರ್ಲಕೊಪ್ಪ, ಯಮನಪ್ಪ ಬಡಿಗೇರ, ಶೇಖರಪ್ಪ ಎಚ್. ಪತ್ತಾರ, ವೆಂಕಣ್ಣ ಶಾಹಾಪುರ, ವಿಠ್ಠಲ ಪತ್ತಾರ, ಚನ್ನಪ್ಪ ಕಾಳಪ್ಪ ಬಡಿಗೇರ, ಗಂಗಾಧರ ಪತ್ತಾರ ಇತರರು ಇದ್ದರು.   

ಮುರುಡಿ ಶಾಲೆ: ಸಮೀಪದ ಮುರುಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮನ ಜಯಂತಿ ಉತ್ಸವ ನಿಮಿತ್ತ ಭಾವಚಿತ್ರಕ್ಕೆ ಮುಖ್ಯ ಶಿಕ್ಷಕ ವಿ.ಡಿ. ಕಲ್ಯಾಣಕರ ಅವರು ವಿಶೇಷ ಪೂಜೆ ನೆರವೇರಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಈರಪ್ಪ ದ್ಯಾಮಗೌಡರ, ಉಪಾಧ್ಯಕ್ಷ ಐಯಪ್ಪ ಕೆಲೂರ ಇದ್ದರು.

ಕೆರಿ ಖಾನಾಪುರ ಶಾಲೆ: ಸಮೀಪದ ಕೆರಿ ಖಾನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮನ ಜಯಂತಿ ಉತ್ಸವ ನಿಮಿತ್ತ ಭಾವಚಿತ್ರಕ್ಕೆ ಶಿಕ್ಷಕಿ ಮಧು ಎಸ್. ಕಳ್ಳಿಗುಡ್ಡ ಅವರು ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಶಿಕ್ಷಕ ಆರ್.ಎಸ್. ಗಾಳಿ, ಆರ್.ಜಿ. ಬನ್ನಟ್ಟಿ, ಎಸ್.ಎನ್. ಗುಲಗಂಜಿ, ಎಸ್.ಎಸ್. ಶೀಪ್ರಿ ಇದ್ದರು.

ಕೋಟೆಕಲ್ಲ ವರದಿ
ಗುಳೇದಗುಡ್ಡ: ವಿಶ್ವಕರ್ಮನು ಒಬ್ಬ ದೇವಶಿಲ್ಪಿ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ವಿಶ್ವಕರ್ಮರು ಎಲ್ಲ ಸಮುದಾಯದ ಜನ ರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಬೆರೆತು ಕೊಂಡು ಜೀವನ ನಡೆಸುವ ಸಮಾಜ ವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನ ಮರದ ಹೇಳಿದರು.

ಅವರು ಸಮೀಪದ ಕೋಟೆಕಲ್ಲ ಗ್ರಾಮದ ಮಳಿಯಪ್ಪಯ್ಯನ ಗುಡಿಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ಧ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಕೀಲ ಪ್ರಕಾಶ ಮೇಟಿ ಮಾತನಾ ಡಿದರು. ಸಮಾಜದ ಅಧ್ಯಕ್ಷ ಯಚ್ಚರಪ್ಪ ಬಡಿಗೇರ, ಪಿಕೆಪಿಎಸ್ ಅಧ್ಯಕ್ಷ ಸಂಗಪ್ಪ ಹಡಪದ,  ಉಪಾಧ್ಯಕ್ಷ ಮೌನೇಶ ಪತ್ತಾರ, ಹುಚ್ಚೇಶ ಕಂಬಾರ, ಅಖಂಡೇ ಶ್ವರ ಎಂ. ಪತ್ತಾರ, ಮಾನಪ್ಪ ಕಂಬಾರ, ದುಂಡಪ್ಪ ಬಡಿಗೇರ, ವಿನೋದ ಬಡಿ ಗೇರ, ಅಖಂಡಪ್ಪ ಕಂಬಾರ, ಶೇಖರಪ್ಪ ಮುರನಾಳ, ಬಾಲು ತಳವಾರ, ಮಂಜು ಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.