ADVERTISEMENT

ಹೊಸ ಗ್ರಾ.ಪಂ.ಗೆ ಅಂತಿಮ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:10 IST
Last Updated 6 ಮಾರ್ಚ್ 2015, 7:10 IST

ಬಾಗಲಕೋಟೆ: ಹುನಗುಂದ ಹಾಗೂ ಬಾದಾಮಿ ತಾಲ್ಲೂಕಿಗೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಮತ್ತು ಹೊಸ ಗ್ರಾಮ ಪಂಚಾಯ್ತಿಗಳ ರಚನೆ ಕುರಿತಂತೆ ವಿಂಗಡಣಾ ಸಮಿತಿ ಸಲ್ಲಿಸಿರುವ ಹೆಚ್ಚುವರಿ ಮಾಹಿತಿಯನ್ವಯ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.

ಕರಡು ಅಧಿಸೂಚನೆಯನ್ವಯ ಈಗಾಗಲೇ ಲಿಖಿತ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದ್ದು, ಎಲ್ಲಾ ಆಕ್ಷೇಪಣೆ ಹಾಗೂ ಸಲಹೆಗಳನ್ನು ಹಾಗೂ ತಹಶೀಲ್ದಾರರ ವರದಿಯ ಆಧಾರದ ಮೇಲೆ ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹುನಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾ.ಪಂ.ಗೆ ಹಿರೇಮಾಗಿ, ಇನಾಂ ಬೂದಿಹಾಳ, ಬೇವಿನಾಳ, ಮಾದಾಪುರ. ರಕ್ಕಸಗಿ ಗ್ರಾ.ಪಂ.ಗೆ ರಕ್ಕಸಗಿ, ಬೇವಿನಮಟ್ಟಿ, ಚಿಕ್ಕಯರನಕೇರಿ, ಹಿರೇಯರನಕೇರಿ, ಹೊನ್ನರಹಳ್ಳಿ, ಹುಲಗಿನಾಳ ಹಾಗೂ ಕಲ್ಲಗೋನಾಳ, ಬಿಸಲದಿನ್ನಿ ಗ್ರಾ.ಪಂ.ಗೆ ಬಿಸಲದಿನ್ನಿ, ಕಟಗೂರ,ಚವಡಕಮಲದಿನ್ನಿ, ತುರಡಗಿ ಹಾಗೂ ವಳಕಲದಿನ್ನಿ ಗ್ರಾಮಗಳನ್ನು ಸೇರ್ಪಡೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.

ಬಾದಾಮಿ ತಾಲ್ಲೂಕಿನ ನರಸಾಪುರ ಗ್ರಾ.ಪಂ.ಗೆ ನರಸಾಪುರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ. ಕುಳಗೇರಿ ಗ್ರಾ.ಪಂ.ಗೆ ಕುಳಕೇರಿ, ಖಾನಾಪುರ ಎಸ್.ಕೆ, ಚಿರ್ಲಕೊಪ್ಪ, ಸೋಮಲಾಪುರ, ಆಲೂರ ಎಸ್.ಕೆ ಗ್ರಾ.ಪಂ.ಗೆ ಆಲೂರ ಎಸ್.ಕೆ, ಗೋವಿನಕೊಪ್ಪ, ಹಾಗನೂರ, ಬೀರನೂರ, ತಳಕವಾಡ, ಕಿತ್ತಲಿ ಗ್ರಾ.ಪಂ.ಗೆ ಕಿತ್ತಲಿ, ಕಳಸ, ಸುಳ್ಳ. ನೀಲಗುಂದ ಗ್ರಾ.ಪಂ.ಗೆ ನೀಲಗುಂದ, ತಿಮ್ಮಾಪುರ, ಕೆಂದೂರ ಗ್ರಾ.ಪಂ.ಗೆ ಕೆಂದೂರ, ಕೆಂದೂರ ತಾಂಡಾ ಹಾಗೂ ಕುಟಕನಕೇರಿ ಗ್ರಾಮಗಳು ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.