ADVERTISEMENT

ಏಕಪತ್ನಿ ವ್ರತ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:59 IST
Last Updated 2 ಫೆಬ್ರುವರಿ 2018, 8:59 IST

ಜಮಖಂಡಿ: ವಿವಾಹ ಪೂರ್ವ ಬ್ರಹ್ಮಚರ್ಯ ಪಾಲನೆ ಹಾಗೂ ವಿವಾಹ ನಂತರ ಏಕಪತ್ನಿ, ಏಕಪತಿ ವ್ರತ ಪಾಲನೆಯಿಂದ ಮಾತ್ರ ಎಚ್‌ಐವಿ ಸೋಂಕಿನಿಂದ ಹಾಗೂ ಏಡ್ಸ್‌ ರೋಗದಿಂದ ದೂರ ಉಳಿಯಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪವಾಡೆಪ್ಪ ಬಿ.ಸಿ. ಹೇಳಿದರು.

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲಾ ಮೇಲ್ವಿಚಾರಕ ಎಂ.ಎಚ್‌. ಸುಬೇದಾರ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್‌.ಸಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್‌. ಗಲಗಲಿ, ಎನ್‌ಎಸ್‌ಎಸ್‌ ಜಿಲ್ಲಾ ನೋಡಲ್‌ ಅಧಿಕಾರಿ ಪ್ರೊ.ಎ.ವಿ. ಸೂರ್ಯವಂಶಿ, ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ.ಬಿ.ಎಸ್‌. ದೇಸಾಯಿ ವೇದಿಕೆಯಲ್ಲಿದ್ದರು.

ಏಡ್ಸ್‌ತಡೆ ಕುರಿತು ಜನಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯ ವಿಜೇತರಾದ ಬಾಗಲಕೋಟೆ ತಾಲ್ಲೂಕಿನ ರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹನಮಂತ ವಜ್ಜರಮಟ್ಟಿ(ಪ್ರಥಮ), ಬಾಗಲಕೋಟೆಯ ಎಸ್‌.ಆರ್. ಕಂಠಿ ಎಂಎಸ್‌ಡಬ್ಲ್ಯೂ ಕಾಲೇಜಿನ ಕೃಷ್ಣಾ ನಾಯಕ(ದ್ವಿತೀಯ) ಹಾಗೂ ಜಮಖಂಡಿಯ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ಸಾಗರ ಸೋಳಂಕಿ(ತೃತೀಯ) ಅವರುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.