ADVERTISEMENT

ಅಂಗನವಾಡಿ ವಶಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:04 IST
Last Updated 11 ಜನವರಿ 2017, 9:04 IST

ಸಂಡೂರು: ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮ ವಾರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಡಿ. ಫರ್ಜಾನಾ ಗೌಸ್ ಅಜಂ ಅವರ ಅಧ್ಯಕ್ಷತೆ ಯಲ್ಲಿ ಕೆಡಿಪಿ ಸಭೆ ನಡೆಯಿತು.

ಖಾಸಗಿ ವ್ಯಕ್ತಿ ವಶದಲ್ಲಿ ಅಂಗನವಾಡಿ ಕಟ್ಟಡ– ತಾಲ್ಲೂಕಿನ ಸ್ವಾಮಿಹಳ್ಳಿಯಲ್ಲಿನ ಅಂಗನವಾಡಿ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ವಾಸ್ತವ್ಯ ಹುಡಿದ್ದಾರೆ. ಅವರನ್ನು ಕಟ್ಟಡದಿಂದ ತೆರವುಗೊಳಿ ಸುವ ಅಗತ್ಯವಿದೆ ಎಂಬ ವಿಷಯ ಸಭೆ ಯಲ್ಲಿ ಚರ್ಚಿತವಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿ ಕಾರಿ ಮಧುಸೂಧನ ಮಾತನಾಡಿ, ಈ ಕಟ್ಟಡವನ್ನು ತಮ್ಮ ಇಲಾಖೆಗೆ ಇನ್ನೂ ಹಸ್ತಾಂತರಿಸಿಲ್ಲ. ಹಸ್ತಾಂತರವಾದರೆ, ತಾವು ಅಲ್ಲಿ ಕೇಂದ್ರವನ್ನು ತೆರೆಯಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. 

ಆಗ ತಾಲ್ಲೂಕು ಪಂಚಾಯ್ತಿ ಇಓ ಜೆ.ಎಂ. ಅನ್ನ ದಾನಸ್ವಾಮಿಯವರು  ನಿರ್ಮಿತಿ ಕೇಂದ್ರ ದವರಿಗೆ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರವನ್ನು ಹಸ್ತಾಂತರಿಸುವಂತೆ ಸೂಚಿ ಸಿದರಲ್ಲದೆ, ಕಟ್ಟಡದಲ್ಲಿ ವಾಸವಾಗಿರು ವವರನ್ನು ತೆರವುಗೊಳಿಸಿ, ಅಲ್ಲಿ ಅಂಗನ ವಾಡಿ ಕೇಂದ್ರ ಆರಂಭಿಸಲು ಶೀಘ್ರ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, 2015–16 ನೇ ಸಾಲ್ಲಿನಲ್ಲಿ 7 ಅಂಗನವಾಡಿ ಕಟ್ಟಡ  ಮಂಜೂರಾಗಿದ್ದವು. ಚೋರ ನೂರಿನಲ್ಲಿನ ಕಟ್ಟಡ ನಿರ್ಮಾಣ ಮುಕ್ತಾ ಯವಾಗಿದೆ. ಉಳಿದ ಕೇಂದ್ರಗಳ ಕಟ್ಟಡ ಗಳು ನಿರ್ಮಾಣ ಹಂತದಲ್ಲಿವೆ. ಈ ವರ್ಷ 5 ಕೇಂದ್ರ ಕಟ್ಟಡಗಳು ಮಂಜೂರಾಗಿವೆ ಎಂದರು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ಭುಜಂಗನಗರ ಗ್ರಾಮದಲ್ಲಿನ ಶಾಲೆಯಲ್ಲಿನ ನಾಲ್ಕು ಕೊಠಡಿಗಳು ತುಂಬಾ ಶಿಥಿಲವಾಗಿದೆ. ಅವುಗಳ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಮೌನೇಶ್ ಅವರಿಗೆ ತಿಳಿಸಿದಾಗ, ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಚ್‌ಕೆಡಿಪಿ ಯೋಜ ನೆಯಲ್ಲಿ ಗ್ರಾಮದಲ್ಲಿನ ಶಾಲೆಯ ಒಟ್ಟು 6 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತ ನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನಲ್ಲಿ ಒಟ್ಟು 2,865 ವಿದ್ಯಾರ್ಥಿ ಗಳಿಗೆ ಸೈಕಲ್‌ಗಳ ಬೇಡಿಕೆಯನ್ನು ಸಲ್ಲಿಸಿ ದ್ದೆವು. ಸೈಕಲ್‌ನ ಬಿಡಿಭಾಗಗಳನ್ನು ಜೋಡಿಸುವ ಕಾರ್ಯ ನಡೆದಿದೆ. ಈ ಕಾರ್ಯ ಪೂರ್ಣಗೊಂಡ ನಂತರ ಸೈಕಲ್‌ ಗಳನ್ನು ವಿತರಿಸಲಾಗುವುದೆಂದರು.

ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ತಾ.ಪಂ. ಇಓ ರವರು ತಾಲ್ಲೂಕು ವೈದ್ಯಾಧಿಕಾರಿ ಡಾ. ಗೋಪಾಲ್‌ರಾವರ್ ಅವರಿಗೆ ಸೂಚಿಸಿದರು.
ಹಾಗೆ ಬೆಳೆ ವಿಮೆ, ಸ್ವಾಮಿಹಳ್ಳಿಯಲ್ಲಿ ಸರ್ಕಾರಿ ಶಾಲೆಗಾಗಿ ಖರೀದಿಸಿರುವ ಜಾಗದ ರಜಿಸ್ಟ್ರೇಷನ್, ನಿರಂತರ ಜ್ಯೋತಿ ಯೋಜನೆಯ ಪ್ರಗತಿ, ಮೇವಿನ ಸಂಗ್ರಹ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಪಿಡಿಓಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.