ADVERTISEMENT

ಕಲಿಯುಗದ ದೈವ ಸಾಯಿಬಾಬಾಗೆ ಭಕ್ತರ ನಮನ

ಜಿಲ್ಲೆಯಾದ್ಯಂತ ಶಿರಡಿ ಸಾಯಿ ಬಾಬಾ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:50 IST
Last Updated 10 ಜುಲೈ 2017, 11:50 IST

ಬಳ್ಳಾರಿ: ನಗರದ ಸಾಯಿ ಬಾಬಾ ದೇವ ಸ್ಥಾನಗಳಲ್ಲಿ ಭಾನುವಾರ ಗುರು ಪೂರ್ಣಿಮೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಇಲ್ಲಿನ ವಿಶಾಲನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಸಾವಿರಾರು ರೈತರು ಸರತಿ ಸಾಲಿನಲ್ಲಿ ನಿಂತು ಬಾಬಾ ದರ್ಶನ ಪಡೆದರು. ಬಾಬಾಗೆ ಗುಲಾಬಿ ಹೂವು, ಹಣ್ಣು, ಕಾಯಿ, ಹೂವಿನ ಹಾರ ಸಮರ್ಪಿಸಿದರು.

ಕಾಕಡ ಆರತಿ, ಗಣಪತಿ ಪೂಜೆ, ಮಂಗಳ ಸ್ನಾನ, ಕ್ಷೀರಾಭಿಷೇಕ, ಸಾಯಿ ಚರಿತ್ರೆ ಪಾರಾಯಣ, ಸಂಕೀರ್ತನೆ, ಅರ್ಚನಾ ಪೂಜೆ, ಲಘು ಆರತಿ, ಆರತಿ, ಧೂಪಾರತಿ, ಪಲ್ಲಕ್ಕಿ ಉತ್ಸವ, ಶೇಜಾ ರತಿ, ಉಯ್ಯಾಲೆ ಉತ್ಸವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು.  ಗುರುಪೂರ್ಣಿಮೆ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿ ಸಲಾಗಿತ್ತು. ಸುಮಾರು 200ಕ್ಕೂ ಭಕ್ತರು ರಕ್ತದಾನ ಮಾಡಿದರು. ಮಹಿಳೆಯರು, ಪುರು ಷರು, ಯುವಕ–ಯುವತಿಯರು ಉತ್ಸಾ ಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ನಗರದ ವಿವಿಧ ಕಡೆ ಆಚರಣೆ: ಇಲ್ಲಿನ ಕೋಟೆ ಮತ್ತು ಕೌಲ್‌ ಬಜಾರ್ ಸಾಯಿ ಬಾಬಾ ದೇವಸ್ಥಾನಗಳಲ್ಲಿ ಗುರುಪೂ ರ್ಣಿಮೆ ಆಚರಿಸಲಾಯಿತು. ದೇವಸ್ಥಾನ ಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರ ಮಗಳು ಜರುಗಿದವು. ಭಕ್ತರು ದೇವರ ದರ್ಶನ ಪಡೆದು ಭಕ್ತಿಭಾವ ಮೆರೆದರು.       

ಬಾಬಾಗೆ ಕಾಕಡಾರತಿ
ಕೂಡ್ಲಿಗಿ:
ಪಟ್ಟಣದ ವೆಂಕಟೇಶ್ವರ ದೇವ ಸ್ಥಾನದಲ್ಲಿ ಭಾನುವಾರ ಗುರು ಪೂರ್ಣಿಮೆ ಪ್ರಯುಕ್ತ ಧಾರ್ಮಿಕ ಕಾರ್ಯ ಕ್ರಮಗಳನ್ನು ಆಚರಿಸಲಾಯಿತು.  ಮುಂಜಾನೆ ಸಾಯಿಬಾಬಾ ಮೂರ್ತಿಗೆ ಕಾಕಡ ಆರತಿ ನೆರವೇರಿಸಿ ಕಾರ್ಯಕ್ರಮ ಗಳಿಗೆ ಚಾಲನೆ ನೀಡಲಾಯಿತು.

ಸಾಯಿ ಸತ್ಯವೃತಾ ನಂತರ ಶಿವ ಸಹಸ್ರನಾಮ ಪಠಣ, 108 ನಮೂನೆಯ ನೈವೇದ್ಯಗಳೊಂದಿಗೆ ಆರತಿ, ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು.

ಬಳ್ಳಾರಿ ಸತ್ಯ ಸಾಯಿ ಸೇವಾ ಸಮಿತಿ ಯ ಸತ್ಯವಾಣಿ, ಯು. ಶಾರದ, ಬಿ. ವಸಂತ, ಎನ್. ಉಷಾ, ಜಯಶ್ರೀ, ನಂದಿನಿ, ಬಿ.ಎಸ್. ಆನಂದ್ ಬಾಬು, ರಾಜಕುಮಾರ್, ಬಿ.ಜಿ. ಶ್ರೀನಿವಾಸ ಶೆಟ್ಟಿ, ಹುಣೆಸೆಹಳ್ಳಿ ರಾಜಣ್ಣ ಶೆಟ್ಟಿ, ಬಿ. ಮಂಜು ನಾಥ, ರಾಕೇಶ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿಶೇಷ ಪೂಜೆ
ಕುರಗೋಡು:
ಇಲ್ಲಿಗೆ ಸಮೀಪದ ಯಲ್ಲಾಪುರ ಕ್ರಾಸ್‌ನಲ್ಲಿರುವ ಸಾಯಿ ಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ಕಾಕಡ ಆರತಿ,ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಪುಷ್ಪಾರ್ಚನೆ, ಮಹಾಮಂಗಳಾರತಿ, ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು. ಕುರು ಗೋಡು ಸೇರಿ ಸುತ್ತಮುತ್ತಲಿನ ಗ್ರಾಮ ಗಳ ಭಕ್ತರು ಬೆಳಿಗ್ಗೆಯಿಂದಲೇ ದೇವ ಸ್ಥಾನಕ್ಕೆ ಬಂದು ಹೂವು, ಹಣ್ಣು ಸಮರ್ಪಿಸಿ ಸಾಲಿನಲ್ಲಿ ನಿಂತು ಸಾಯಿ ಬಾಬಾ ದರ್ಶನ ಪಡೆದು ಪುನೀತರಾದರು.

ಗುರು ಪೂರ್ಣಿಮೆ ಸಂಭ್ರಮ
ಕಂಪ್ಲಿ:
ಗುರುವಿನ  ಮಹತ್ವವನ್ನು ಸಾರುವ ದಿನವೇ ‘ಗುರು ಪೂರ್ಣಿಮೆ’ ಎಂದು ಶಾಸಕ ಟಿ.ಎಚ್‌. ಸುರೇಶ್‌ಬಾಬು ಹೇಳಿದರು. ಗುರು ಪೂರ್ಣಿಮೆ ನಿಮಿತ್ತ ಇಲ್ಲಿಯ ಸತ್ಯನಾರಾಯಣಪೇಟೆಯ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದರ್ಶನ ಪಡೆದ ನಂತರ ಮಾತನಾಡಿ, ನಾವು ಆಷಾಡದ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ ಅನು ದಿನ, ಅನು ಕ್ಷಣ ಗುರುವನ್ನು ಅಂತರಂಗದಲ್ಲೇ ಪೂಜಿ ಸುತ್ತಾ ನಮ್ಮನ್ನು ನಾವು ಸಮರ್ಪಿಸಿ ಕೊಳ್ಳಬೇಕು ಎಂದರು. ಪೌರ್ಣಿಮೆ ನಿಮಿತ್ತ ಶಾಸಕರು ದೇವಸ್ಥಾನದ  ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು. ಇದಕ್ಕೂ ಮುನ್ನ ದೇವ ಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಜರುಗಿದವು. ನಂತರ ಆಗಮಿ ಸಿದ್ದ ಭಕ್ತರಿಗೆ ಸಂಘಟಕರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಿ. ಸತ್ಯನಾರಾಯಣ ಮತ್ತು ಸದಸ್ಯರು, ಪುರಸಭೆ ಅಧ್ಯಕ್ಷ ಎಂ. ಸುಧೀರ್, ಪುರಸಭೆ ಸದಸ್ಯರಾದ ವಿ.ಎಲ್. ಬಾಬು, ಎನ್. ರಾಮಾಂಜ ನೇಯಲು, ಭಟ್ಟ ಪ್ರಸಾದ್, ಸಣ್ಣ ಹುಲುಗಪ್ಪ, ಬಿಜೆಪಿ ಮುಖಂಡರಾದ ಪಿ. ಬ್ರಹ್ಮಯ್ಯ, ಎನ್. ಪುರುಷೋತ್ತಮ, ಜಿ. ಸುಧಾಕರ, ಕೊಡಿದಲ ರಾಜು, ವೆಂಕಟೇಶ್ ಶ್ರೇಷ್ಠಿ, ಭಾಸ್ಕರರೆಡ್ಡಿ, ವಿ. ವಿದ್ಯಾಧರ, ಸಿಎಂಡಿ ರಫಿಕ್, ಜೀರ್ ರಮೇಶ್, ಮುದ್ಗಲ್ ಶಬ್ಬೀರ್, ಕೆ. ಜ್ಯೋತಿ ಇತರರು ಹಾಜರಿದ್ದರು.

ಕೊಟ್ಟಾಲ್ ರಸ್ತೆಯ ಕಾಲುವೆ ಬಳಿಯ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೂ ಶಾಸಕರು ಭೇಟಿ ನೀಡಿ ದರ್ಶನ ಪಡೆದರು.  ಬಾಬಾ ದರ್ಶನಕ್ಕೆ ನೂರಾರು ಭಕ್ತರು
ಸಂಡೂರು: ಗುರು ಪೂರ್ಣಿಮೆ ಪ್ರಯುಕ್ತ ಭಾನುವಾರ ಪಟ್ಟಣದ ಸಾಯಿಬಾಬಾ ದೇವಸ್ಥಾನದಲ್ಲಿನ ಬಾಬಾ ವಿಗ್ರಹಕ್ಕೆ ಅಭಿಷೇಕ, ವಿಶೇಷ ಅಲಂಕಾರ, ನವಗ್ರಹ ಪೂಜೆ, ಸಹಸ್ರ ನಾಮಾರ್ಚನೆ  ಹಾಗೂ ಹೋಮ ನೆರವೇರಿಸಲಾಯಿತು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸ ಲಾಗಿತ್ತು. ಘೋರ್ಪಡೆ ರಾಜವಂಶಸ್ಥರಾದ ಅಜಯ್ ಘೋರ್ಪಡೆ, ಬೆಹರ್‌ಜಿ ಘೋರ್ಪಡೆ  ದರ್ಶನ ಪಡೆದರು. ಔದುಂಬರ ಭಟ್, ವಿಷ್ಣುತೀರ್ಥಾಚಾರ್ ಪೌರೋಹಿತ್ಯ ವಹಿಸಿದ್ದರು.

ದರ್ಶನಕ್ಕೆ ನೂಕುನುಗ್ಗಲು
ಹೊಸಪೇಟೆ:
ಗುರು ಪೂರ್ಣಿಮೆ ಅಂಗ ವಾಗಿ ನಗರದ ಹಂಪಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾ ಅವರ ದರ್ಶನಕ್ಕೆ ಭಾನುವಾರ ಭಕ್ತರ ನೂಕು ನುಗ್ಗಲು ಕಂಡು ಬಂತು.

ನಗರದ ವಿವಿಧ ಬಡಾವಣೆಗಳಿಂದ ಬೆಳಿಗ್ಗೆಯಿಂದಲೇ ಜನ ಕುಟುಂಬ ಸದಸ್ಯರೊಂದಿಗೆ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ರಾತ್ರಿ 8ಗಂಟೆಯ ವರೆಗೂ ದೇವಸ್ಥಾನದ ಪರಿಸರದಲ್ಲಿ ಜನಜಾತ್ರೆ ಇತ್ತು. ಬೆಳಿಗ್ಗೆ ಸಾಯಿಬಾಬಾ ಅವರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣ ಹೊಸಪೇಟೆ–ಹಂಪಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

***

ಸಾಯಿನಾಥನಿಗೆ ಕ್ಷೀರಾಭಿಷೇಕ

ಹಗರಿಬೊಮ್ಮನಹಳ್ಳಿ: ಪಟ್ಟಣದ ಕುರದ ಡ್ಡಿಯ ಶಿರಡಿ ಸಾಯಿಬಾಬಾ ದೇವಸ್ಥಾನ ದಲ್ಲಿ ಭಾನುವಾರ ಗುರುಪೂರ್ಣಿಮ ಅಂಗವಾಗಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂರ್ತಿಗೆ ಕ್ಷೀರಾಭಿಷೇಕ ಮಾಡಲಾಯಿತು. ಕಾಕಡಾರತಿ, ಸುಪ್ರಭಾತ, ಅಭಿಷೇಕದ ನಂತರ  ಸಾಯಿಸೇವಕ್‌ ಬಳ್ಳಾರಿಯ ರತ್ನ ನೇತೃತ್ವದಲ್ಲಿ ಸಾಯಿಬಾಬಾರವರ ಸಾಮೂಹಿಕ ಸತ್ಯವೃತದ ಪೂಜೆ ನಡೆಯಿತು. 300ಕ್ಕೂ ಹೆಚ್ಚು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಗುರುಗಳಿಂದ ದೀಕ್ಷೆ ತೆಗೆದುಕೊಂಡ ಸಾಯಿ ಸೇವಕರಿಂದ ಸತ್ಸಂಗ ನಡೆಯಿತು. ಮಧ್ಯಾಹ್ನ ಸಾಯಿಬಾಬಾರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸಾಯಿ ಸೇವಾಶ್ರಮದ ಮೋಹನ್‌ ಕುಮಾರ್‌, ಸುಮಾ, ಹನಿಷಾ, ರಾಜೇಂದ್ರ ಪ್ರಸಾದ್‌, ವಿಜಯಲಕ್ಷ್ಮಿ, ಪೆಂಡಕೂರ್‌ ಗಿರೀಶ್‌, ಗೌರಿ, ಸಾಯಿಸೇವಕ್‌ ಚಿದಾನಂದ, ಮಹೇಶ್, ರಜಿತಾ, ಸುಕನ್ಯಾ, ವಿಜಯಕುಮಾರ್‌, ರಂಜಿತಾ, ಕೃಷ್ಣವೇಣಿ ಚಂದ್ರಶೇಖರ್‌, ವೈ.ಕೆ.ಪಾರ್ವತಮ್ಮ ಕೊಟ್ರಪ್ಪ, ಪ್ರಭಾಕರ ಶೆಟ್ರು, ಚಿದ್ರಿ ರಮೇಶ್‌ ಇದ್ದರು. ನೆರೆದಿದ್ದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.