ADVERTISEMENT

ಕುಡಿಯುವ ನೀರಿಗಾಗಿ ಆಗ್ರಹ; ಖಾಲಿ ಕೊಡ ಹಿಡಿದು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:55 IST
Last Updated 13 ಮೇ 2017, 9:55 IST

ಕುರುಗೋಡು: ಸಮೀಪದ ಎಂ.ಸೂಗೂರು ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮದ ಜನರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಕಾಲಿಕೊಡ ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾರೆಪ್ಪ ಮಾತನಾಡಿ, ಐದಾರು ತಿಂಗ ಳಿಂದ ಗ್ರಾಮದ 3ನೇ ವಾರ್ಡ್ ಮಟ್ಟಿ ಪ್ರದೇಶದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೀರು ಪೂರೈಕೆಯಾಗದ ಕಾರಣ ಹೊಲಗದ್ದೆ ಗಳಲ್ಲಿ ನಿಂತ ನೀರು ಸೇವಿಸುವಂತಾಗಿದೆ.

ಈ ಭಾಗದ ಜನರಿಗೆ ನೀರು ಪೂರೈ ಸಲು ವ್ಯವಸ್ಥೆ ಮಾಡಿದ್ದ ಎರಡು ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಪಂಪ್ ದುರಸ್ತಿಯಾಗದ ಕಾರಣ ನೀರು ಪೂರೈ ಸುತ್ತಿಲ್ಲ. ಕೂಡಲೇ ಪೂರೈಕೆಗೆ  ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ವೆಂಕೋಬ ಮಾತನಾಡಿ, ಕುಡಿ ಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿ ಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅನಿವಾ ರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು. ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯ ದಿದ್ದರೆ ಉಗ್ರ ಹೀರಾಟದ ಎಚ್ಚರಿಕೆ ನೀರಿದರು.

ಪ್ರತಿಭಟನೆಯ ಸುದ್ದಿ ತಿಳಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಷ ಗಿರಿ ಮಾತನಾಡಿ, ಸಿಬ್ಬಂದಿ ಲೋಪ ದೋಷದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಶೀಘ್ರ ಕುಡಿಯುವ ನೀರನ್ನು ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು ಕೆಲಸ ನೀಡುವುದಾಗಿ ತಿಳಿಸಿದರು.

ತಾತ್ಕಾಲಿಕ ವಾಗಿ ಶುಧ್ಧ ಕುಡಿಯುವ ನೀರಿನ ಘಟಕ ದಿಂದ ಜನರಿಗೆ ನೀರು ಪೂರೈಸಲು ಕ್ರಮ ಕೈಗೊಂಡ್ಡರಿಂದ ಪ್ರತಿಭಟನೆ ಹಿಂದಕ್ಕೆ ಪಡೆದರು. ಗಂಗಮ್ಮ, ಲಕ್ಷ್ಮಿ, ಮಾರೆಮ್ಮ, ಹನುಮಂತಮ್ಮ, ಈರಮ್ಮ, ಗುರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.