ADVERTISEMENT

ಕುತಂತ್ರ ಬಿಟ್ಟು ನೇರ ರಾಜಕೀಯ ಮಾಡಲಿ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:20 IST
Last Updated 15 ಮೇ 2017, 7:20 IST

ಹೊಸಪೇಟೆ: ‘ನಕಲಿ ಲೆಟರ್‌ ಹೆಡ್‌, ಸಹಿ ಬಳಸಿಕೊಂಡು ಕಮಲಾಪುರ ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಡಿ. ವೆಂಕಟ ರಮಣ ಅವರು ನನ್ನ ವಿರುದ್ಧ ಪಿತೂರಿ ಮಾಡಿರುವ ಸಾಧ್ಯತೆ ಇದೆ ಎಂಬ ಶಾಸಕ ಆನಂದ ಸಿಂಗ್‌ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು’ ಎಂದು ಜಿಲ್ಲಾ ಪಂಚಾ ಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಸ್ಪಷ್ಟ ಪಡಿಸಿದ್ದಾರೆ.

‘ನನ್ನ ಹೆಸರಿನ ನಕಲಿ ಲೆಟರ್ ಹೆಡ್, ಸಹಿ ಬಳಸಿಕೊಂಡು ಬಳ್ಳಾರಿ ಜಿಲ್ಲಾಧಿ ಕಾರಿಗೆ ಪತ್ರ ಬರೆದಿದ್ದು, ಬ್ಯಾಡ (ನಾಯಕ) ಸಮುದಾಯ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡುವ ದೊಡ್ಡ ಪಿತೂರಿ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಅವರ ಆಪ್ತ ಡಿ. ವೆಂಕಟರಮಣ ಅವರ ಕೈವಾಡವಿರುವ ಸಾಧ್ಯತೆ ಇದೆ’ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್‌ ಶನಿವಾರ ಆರೋಪ ಮಾಡಿದ್ದರು.

ನಗರದ ಪತ್ರಿಕಾ ಭವನದಲ್ಲಿ ಭಾನು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್‌ ಸಿಂಗ್‌, ‘ಡಿ. ವೆಂಕಟರಮಣ ಅವರು ನನ್ನ ಆಪ್ತ ಎಂದು ಶಾಸಕರು ಹೇಳಿದ್ದಾರೆ. ಆದರೆ, ಅವರು ನನ್ನ ಆಪ್ತ ಸಹಾಯಕರಲ್ಲ. ಅವರು ಕಮಲಾಪುರ ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರಷ್ಟೇ. ಯಾರೇ ತಪ್ಪು ಮಾಡಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ADVERTISEMENT

ಅದು ಬಿಟ್ಟು ಮಾಧ್ಯಮದವರ ಮುಂದೆ ಮನಬಂದಂತೆ ಮಾತನಾಡುವುದು ಸರಿ ಯಲ್ಲ. ಏನೇ ಮಾತನಾಡಿದರೂ ಸೂಕ್ತ ದಾಖಲೆಗಳೊಂದಿಗೆ ಮಾತನಾಡಬೇಕು’ ಎಂದು ತಾಕೀತು ಮಾಡಿದರು.

‘ಇದೇ ಮೊದಲಲ್ಲ. ಈ ಹಿಂದೆಯೂ ಶಾಸಕರ ಕಚೇರಿಯಿಂದ ಪತ್ರ ಹೋಗಿವೆ. ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೆ ಗೊತ್ತಿರಬೇಕು. ಈ ಬಾರಿಯೂ ಅವರ ಕಚೇರಿಯಿಂದಲೇ ಪತ್ರ ಹೋಗಿರಬಹುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿ ಸಲು ಇಚ್ಛೆ ಹೊಂದಿರುವ ಅವರ ಮನೆಯ ನಂಬರ್‌ 2 ಸದಸ್ಯರೇ ಇದನ್ನು ಮಾಡಿರ ಬಹುದು’ ಎಂದು ಸಂದೇಹಿಸಿದರು.

‘ಶಾಸಕರೇ ಹೇಳಿಕೊಂಡಂತೆ ಒಟ್ಟಾರೆ ಪ್ರಕರಣ ಅವರ ಗಮನಕ್ಕೆ ಬಂದಿದ್ದು ಏ.22ರಂದು. ಅದೇ ದಿನ ಅವರು ನೇರವಾಗಿ ಠಾಣೆಗೆ ಹೋಗಿ ದೂರು ಕೊಡಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಶನಿವಾರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸತ್ಯಾಂಶ ಹೊರಜಗತ್ತಿಗೆ ಗೊತ್ತಾಗಬೇಕು’ ಎಂದರು.

‘ನಾಯಕ ಸಮುದಾಯಕ್ಕೆ ನನ್ನ ತಂದೆ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನ ವಿರುದ್ಧ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಏನೂ ಆಗಲ್ಲ. ನಾಯಕರಿಗೆ ಕಾಂಗ್ರೆಸ್‌ ಮಾಡಿದಷ್ಟು ಬಿಜೆಪಿ ಮಾಡಿಲ್ಲ. ರಾಜಕೀಯ ಮಾಡಬೇಕಿದ್ದರೆ ನೇರವಾಗಿ ಮಾಡಬೇಕು. ಅದನ್ನು ಬಿಟ್ಟು ಕುತಂತ್ರ ಮಾಡಬಾರದು’ ಎಂದು ಹೇಳಿದರು.

‘ಕುತಂತ್ರ ಮಾಡಿ ಗೊತ್ತಿಲ್ಲ’: ‘ಸುಮಾರು 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ. ಬೇರೆಯವರ ಹೆಸರಿಗೆ ಮಸಿ ಬಳಿಯುವ ಕೆಲಸ ಎಂದೂ ಮಾಡಿಲ್ಲ. ಕುತಂತ್ರ ಮಾಡಿ ಗೊತ್ತಿಲ್ಲ. ನನ್ನ ವಾಟ್ಸ ಆ್ಯಪ್‌ಗೆ ಕಾಂಗ್ರೆಸ್‌ ಕಾರ್ಯಕರ್ತ ಗುಜ್ಜಲ ಗಂಗಾಧರ ಎಂಬುವರು ಆನಂದ ಸಿಂಗ್‌ ಅವರ ಲೆಟರ್‌ ಹೆಡ್‌ ಹೊಂದಿರುವ ಪತ್ರವನ್ನು ಮೇ 12ರಂದು ಬೆಳಿಗ್ಗೆ 11 ಗಂಟೆ 11 ನಿಮಿಷಕ್ಕೆ ಕಳುಹಿಸಿದ್ದರು. ಇತರ ಮೆಸೇಜ್‌ಗಳಂತೆ ಅದನ್ನು ಇತರರಿಗೆ ಕಳು ಹಿಸಿದ್ದೇನೆ’ ಎಂದು ಡಿ. ವೆಂಕಟರಮಣ ಹೇಳಿದರು.

‘ಶನಿವಾರ ಸಂಜೆ 7.30ಕ್ಕೆ ಪೊಲೀಸ್‌ ಠಾಣೆಗೆ ಹೋಗಿ ಎಲ್ಲ ಮಾಹಿತಿ ಕೊಟ್ಟಿ ದ್ದೇನೆ. ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯುವಂತೆ ಒತ್ತಾಯಿಸಿದ್ದೇನೆ. ನಾನು ಪ್ರವೀಣ್‌ ಸಿಂಗ್‌ ಅವರ ಆಪ್ತ ಸಹಾಯಕ ಎಂದು ಶಾಸಕರು ಹೇಳಿದ್ದಾರೆ. ಆದರೆ, ಅದು ಸತ್ಯವಲ್ಲ. ನಾನು ಕಮಲಾಪುರ ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷನಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಎರಡು ಬಾರಿ ಶಾಸಕರಾಗಿರುವ ಆನಂದ ಸಿಂಗ್‌ ಅವರು ಯಾವುದೋ ಒಂದು ಕೋಮಿನ ಪರ ಕೆಲಸ ಮಾಡು ತ್ತಿರುವುದು ಸರಿಯಲ್ಲ. ಕೋಮುವಾದ ಬಿತ್ತುವ ಸಂಘಟನೆಗಳ ಮೂಲಕ ಸೇರಿ ಕೊಂಡು ಗಿಮಿಕ್‌ ಮಾಡುತ್ತಿದ್ದಾರೆ. ರಾಜ ಕೀಯ ಮಾಡುವುದರಲ್ಲಿ ಅವರದು ಎತ್ತಿದ ಕೈ. ಅವರ ಪಕ್ಷವೂ ಹಾಗೇ ಇದೆ. ಆದರೆ, ಕಾಂಗ್ರೆಸ್‌ ಎಲ್ಲೂ ಕೋಮುಗಲಭೆ ಮಾಡಿ ಸೊಲ್ಲ. ಏನಿದ್ದರೂ ನೇರ ರಾಜಕಾರಣ ಮಾಡುತ್ತದೆ’ ಎಂದು ಹೇಳಿದರು.

ಭಯವೇಕೆ?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೊಬ್ಬ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಷ್ಟೇ. ಆದರೆ, ಶಾಸಕ ಆನಂದ ಸಿಂಗ್‌ ಅವರಿಗೆ ಈಗಲೇ ನನ್ನ ಬಗ್ಗೆ ಭಯ ಶುರುವಾಗಿದ್ದೇಕೇ? ಎಂದು ಹಂಪಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಪ್ರಶ್ನಿಸಿದರು.

ಮಕ್ಕಳ  ಮೇಲೆ  ಆಣೆ  ಸರಿಯಲ್ಲ

‘ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕ ಆನಂದ ಸಿಂಗ್‌ ಅವರು ತಮ್ಮ ಮಕ್ಕಳ ಮೇಲೆ ಆಣೆ–ಪ್ರಮಾಣ ಮಾಡಿರುವುದು ಸರಿಯಲ್ಲ. ಈ ಹಿಂದೆಯೂ ಅನೇಕ ಬಾರಿ ಈ ರೀತಿ ಪ್ರಮಾಣ ಮಾಡಿದ್ದಾರೆ. ಅವರಿಗೆ ಇದೇನೂ ಹೊಸತಲ್ಲ’ ಎಂದು ಪ್ರವೀಣ್‌ ಸಿಂಗ್‌ ತಿಳಿಸಿದರು.

‘ನಾಯಕ ಸಮುದಾಯದ ವಿರುದ್ಧದ ಪತ್ರ ನಾನು ಬರೆದಿಲ್ಲ’ ಎಂದು ಶಾಸಕ ಆನಂದ ಸಿಂಗ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಗ ಸಿದ್ದಾರ್ಥ ಹಾಗೂ ಮಗಳು ವೈಷ್ಣವಿ ತಲೆ ಮೇಲೆ ಕೈಯಿಟ್ಟು ಆಣೆ ಮಾಡಿದ್ದಕ್ಕೆ ಪ್ರವೀಣ್‌ ಸಿಂಗ್‌ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಆನಂದ ಸಿಂಗ್‌ ಅವರು ಆರು ವರ್ಷಗಳ ಹಿಂದೆ ಜೈನ್‌ ಸಮುದಾಯಕ್ಕೆ ಸೇರಿದ ದೇವಸ್ಥಾನಕ್ಕೆ ಹೋಗಿ ಇನ್ನು ಮುಂದೆ ಮಾಂಸ ತಿನ್ನುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಆದರೆ, ಇಂದಿಗೂ ತಿನ್ನುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.