ADVERTISEMENT

ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:57 IST
Last Updated 28 ಮೇ 2017, 10:57 IST

ಹೂವಿನಹಡಗಲಿ: ತಾಲ್ಲೂಕಿನ ಹೊಳ ಗುಂದಿ ಗ್ರಾಮದಲ್ಲಿ ಹಿರೆಕೆರೆ ಮತ್ತು ಚಿಕ್ಕ ಕೆರೆಗಳಿಗೆ ಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಶನಿ ವಾರ ಭೂಮಿಪೂಜೆ ನೆರವೇರಿಸಿದರು.

‘ಗ್ರಾಮಸ್ಥರ ಮನವಿ ಮೇರೆಗೆ ಪರಿ ಷ್ಕೃತ ಕೆರೆ ತುಂಬಿಸುವ ಯೋಜನೆಯಲ್ಲಿ ಗ್ರಾಮದ ಎರಡು ಕೆರೆಗಳನ್ನು ಸೇರ್ಪಡೆ ಗೊಳಿಸಿದ್ದು, ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಯೋಜನೆಗೆ ₹ 81 ಲಕ್ಷ ಮಂಜೂರಾ ಗಿದೆ’ ಎಂದು ಶಾಸಕರು ತಿಳಿಸಿದರು.

ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಖ್ಯ ಕಾಲುವೆಯಿಂದ 1.75 ಕಿ.ಮೀ. ಪೈಪ್‌ಲೈನ್‌ ಅಳವಡಿಸಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದೇ ಸೆಪ್ಟಂಬರ್ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸಿ ಗ್ರಾಮದ ಹಿರೆಕೆರೆ, ಚಿಕ್ಕ ಕೆರೆ ಗಳನ್ನು ತುಂಬಿಸಲಾಗುವುದು ಎಂದರು.

ADVERTISEMENT

ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಈ ಭಾಗದ ರೈತರು ಸಹಕಾರ ನೀಡಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಲಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್ ಭೋಜ್ಯಾನಾಯ್ಕ, ಸಿಂಗ ಟಾಲೂರು ಏತ ನೀರಾವರಿ ಯೋಜನೆ ಎಇ ರಾಠೋಡ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಐಗೋಳ ಪ್ರಕಾಶ್, ಹನುಮಂತಪ್ಪ, ಮುಖಂಡ ರಾದ ಎಂ.ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ, ವಾರದ ಗೌಸ್‌ ಮೊಹಿದ್ದೀನ್, ಚಂದ್ರನಾಯ್ಕ, ಅಟವಾಳಗಿ ಕೊಟ್ರೇಶ್, ಜ್ಯೋತಿ ಮಲ್ಲಣ್ಣ, ತಾ.ಪಂ ಸದಸ್ಯ ಸೋಗಿ ಹಾಲೇಶ್, ಗ್ರಾ.ಪಂ ಅಧ್ಯಕ್ಷೆ ನಾಗರತ್ನಾ, ಉಪಾಧ್ಯಕ್ಷೆ ದುಗ್ಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.