ADVERTISEMENT

ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:21 IST
Last Updated 17 ಏಪ್ರಿಲ್ 2017, 7:21 IST

ಕೊಟ್ಟೂರು: ಗ್ರಾಮಗಳ ಅಭಿವೃದ್ಧಿಯೇ ದೇಶದ ಪ್ರಗತಿಗೆ ಪೂರಕ ಎಂದು ಸಮಾಜ ಶಾಸ್ತ್ರಜ್ಞ ಡಾ.ಎಚ್.ಎಂ. ಮರುಳಸಿದ್ಧಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣಕ್ಕೆ ಸಮೀಪದ ಹಿರೇಕುಂಬಳ ಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ 86ರ ಇಳಿವಯಸ್ಸಿನ ಅನಾರೋಗ್ಯದ ಮಧ್ಯೆಯೂ ತಮ್ಮ ಹುಟ್ಟೂರು ಹಾಗೂ ಗ್ರಾಮಸ್ಧರನ್ನು ನೋಡಬೇಕೆಂಬ ಹಂಬಲದಿಂದ ಬೆಂಗಳೂರಿನಿಂದ ಆಗಮಿಸಿ ಮಾತನಾಡಿ, ಸಮಾಜದ ಬಗ್ಗೆ ಕಾಳಜಿ, ಸಾಮಾಜಿಕ ಚಿಂತನೆ, ಸಮಾಜ ಸೇವೆ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಿದಾಗ ಆರೋಗ್ಯಕರ ಸಮಾಜ ನಿರ್ಮಾಣ ವಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಶಾಸಕ ಬಿ.ನಾಗೇಂದ್ರ, ಸರ್ಕಾರಿ ಶಾಲೆಯಲ್ಲಿ ಓದಿದವರು ಸಹ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳು ತ್ತಾರೆ ಎಂಬುದಕ್ಕೆ ಈ ಶಾಲೆಯಲ್ಲಿ ಓದಿದ ಹಿ.ಮ.ನಾಗಯ್ಯ, ಡಾ.ಎಚ್‌.ಎಂ.ಮರುಳ ಸಿದ್ಧಯ್ಯ ನಂತವರೇ ಉತ್ತಮ ನಿದರ್ಶನ. ಶಿಕ್ಷಣ ಬಹು ದೊಡ್ಡ ಆಸ್ತಿ ಹಾಗಾಗಿ ಮಕ್ಕ ಳಿಗಾಗಿ ಆಸ್ತಿಯನ್ನು ಮಾಡದೇ ಮಕ್ಕ ಳನ್ನೇ ಆಸ್ತಿಯನ್ನಾಗಿಸಿ ಎಂದ ಅವರು ಶತಮಾನೋತ್ಸವ ಆಚರಿಸುತ್ತಿರುವ ಈ ಶಾಲೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿ ಸಲು ಬದ್ಧನಾಗಿದ್ದೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಹಡಗಲಿಯ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ, ಮರುಳಸಿದ್ಧಯ್ಯನವರು ತಮ್ಮ ಹುಟ್ಟೂ ರಿನ ಅಭಿವೃದ್ಧಿಗಾಗಿ ಸ್ವಸ್ಥಿ ಸಂಸ್ಧೆಯನ್ನು ಹುಟ್ಟುಹಾಕಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಧರು ಜ್ಞಾನಾರ್ಜನೆ ವೃದ್ಧಿಸಿಕೊ ಳ್ಳಲಿ ಎಂಬ ಉದ್ದೇಶದಿಂದ ತಮ್ಮ  ಮನೆಯನ್ನು ‘ಪುಸ್ತಕ ಮನೆ ’ಯನ್ನಾಗಿಸಿ ಶಿಕ್ಷಣ ಇಲಾಖೆಗೆ ದಾನವನ್ನಾಗಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ಮಹಾತ್ಮ ಗಾಂಧೀಜಿಯವರ ‘ನಿರ್ಮಲ ಭಾರತ’ ಪರಿಕಲ್ಪನೆಯಿಂದ ಪ್ರೇರಿತ ಗೊಂಡ ಇವರು ‘ನಿರ್ಮಲ ಕರ್ನಾಟಕ’ ಎಂಬ  ಆಂದೋಲನದ ಮುಖಾಂತರ ಸುಮಾರು 25 ವರ್ಷಗಳ ಹಿಂದೆಯೇ ಗ್ರಾಮಾಭಿವೃದ್ಧಿ ಹಾಗೂ ನೈರ್ಮಲ್ಯೀ ಕರಣಕ್ಕೆ ಮುಂದಾದ ಮಹಾನ್‌ ಚೇತನ ಮರುಳಸಿದ್ಧಯ್ಯನವರು ಎಂದರು.

ADVERTISEMENT

ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ದುರುಗಮ್ಮ ದುರುಗೇಶ್‌ ವಹಿಸಿದ್ದರು. ಸಮಾಜ ಸೇವಕಿ ರೂಪ ಉದಯ್‌ಸಿಂಗ್‌ ಲಾಡ್‌, ಎಚ್‌.ಎಂ.ವೀರಮ್ಮ ಮರುಳ ಸಿದ್ಧಯ್ಯ, ಹಿರಿಯ ಬರಹಗಾರ್ತಿ ಎಸ್‌.ಎಂ. ಲೋಲಾಕ್ಷಮ್ಮ, ನಿವೃತ್ತ ಶಿಕ್ಷಣಾಧಿಕಾರಿ ಎಚ್‌.ಎಂ.ಹಾಲಯ್ಯ ಮಾತನಾಡಿದರು. ಅಭಿನವ ಹಾಲಶ್ರೀಗಳು, ತಾ.ಪಂ. ಅಧ್ಯಕ್ಷ ವೆಂಕಟೇಶ್‌ ನಾಯ್ಕ್‌, ಜಿ.ಪಂ. ಮಾಜಿ ಸದಸ್ಯ ಕೆ.ಎಂ. ಶಶಿಧರ್‌, ಎಚ್‌.ಎಂ. ಹರ್ಷ, ಹಿ.ಮ.ಬಸವಯ್ಯ, ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್‌.ಪಿ.ಬಿ. ಮಹೇಶ್‌, ಶಿಕ್ಷಣ ಇಲಾಖೆಯ ಜಲೀಲ್‌ ಅಹಮದ್‌, ಲಕ್ಷಣ್‌ಸಿಂಗ್‌, ಡಾ.ಜಂಬನ ಗೌಡ, ಓಂಕಾರಪ್ಪ, ಕಣ್ಣಿ, ರವಿಗೌಡ, ಮುಖ್ಯಶಿಕ್ಷಕ ಶ್ಯಾಮಸುಂದರ್‌ ಸಫಾರೆ ಹಾಗೂ ಎಸ್‌ಡಿಎಂಸಿ ಹಾಗೂ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಗ್ರಾಮಸ್ಧರು ಇದ್ದರು.

ಶಾಲೆಯ ಆವರಣದಲ್ಲಿ ಶತಮಾ ನೋತ್ಸವದ ನೆನಪಿಗಾಗಿ ಶಾಸಕರಿಂದ ‘ಮರ ಬೆಳಸಿ ಬರ ಅಳಿಸಿ’ ಕಾರ್ಯ ಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾ ಯಿತು.  ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ರನ್ನು ಹಾಗೂ ಗ್ರಾಮದ ಹಿರಿಯ ನಾಗ ರಿಕರನ್ನು ಗ್ರಾಮದ ಯುವಕರು ಸನ್ಮಾನಿ ಸುವ ಮೂಲಕ ಶತಮಾನೋತ್ಸವ ಕಾರ್ಯ ಕ್ರಮ ಅರ್ಥಪೂರ್ಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.