ADVERTISEMENT

ಚಿಗುರೊಡೆದ ಬೆಳೆಗೆ ಬೇಕಿದೆ ಮಳೆಯ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 6:40 IST
Last Updated 27 ಜುಲೈ 2017, 6:40 IST

ಸಂಡೂರು: ತಾಲ್ಲೂಕಿನ ವಿವಿಧೆಡೆ ಜಿನುಗಿದ ಮಳೆ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದೆಯಾದರೂ ಮಳೆ ಕೊರತೆಯಿಂದ ನಿರೀಕ್ಷಿತ ಬಿತ್ತನೆ ಗುರಿ ಸಾಧನೆಯಾಗಿಲ್ಲ. ಈಗಾಗಲೇ ಚಿಗು ರೊಡೆದ ಬೆಳೆಗಳು ಸಮೃದ್ಧವಾಗಿ ಬೆಳೆ ಯಲು ಹೆಚ್ಚಿನ ಮಳೆಯ ಅಗತ್ಯವಿದ್ದು, ರೈತ ಸಮುದಾಯ ಮಳೆಯ ನಿರೀಕ್ಷೆಯಲ್ಲಿದೆ.

ಶೇ 48ರಷ್ಟು ಪ್ರದೇಶದಲ್ಲಿ ಬಿತ್ತನೆ: ಮುಂಗಾರು ಆರಂಭವಾಗಿ ಎರಡು ತಿಂಗಳು ಮುಗಿಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ತಾಲ್ಲೂಕಿನಲ್ಲಿ ಕೇವಲ ಶೇ 48 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 30 ಸಾವಿರ ಹೆಕ್ಟೇರ್ ಬಿತ್ತನೆಯ ಗುರಿಯಲ್ಲಿ ಜುಲೈ 21ರವರೆಗೆ ಬಿತ್ತನೆಯಾಗಿರು ವುದು ಕೇವಲ 14398 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ.

ಪ್ರಮುಖ ಬೆಳೆಗಳ ಬಿತ್ತನೆ ವಿವರ (ಆವರಣದಲ್ಲಿರುವುದು ಗುರಿ): ಭತ್ತ 210 ಹೆಕ್ಟೇರ್ (1150 ಹೆಕ್ಟೇರ್), ಜೋಳ 1667 ಹೆಕ್ಟೇರ್ (3750 ಹೆ), ರಾಗಿ 500 ಹೆ (550ಹೆ), ಮೆಕ್ಕೆಜೋಳ 8765 ಹೆ (13000 ಹೆ), ಸಜ್ಜೆ 603 ಹೆ (2400 ಹೆ), ಸಿರಿಧಾನ್ಯ 141 ಹೆ (500 ಹೆ), ತೊಗರಿ 585 ಹೆ (700 ಹೆ), ಹೆಸರು 10 ಹೆ (55 ಹೆ), ಶೇಂಗಾ 1105 ಹೆ (1600 ಹೆ), ಎಳ್ಳು 150 ಹೆ (550 ಹೆ), ಗುರೆಳ್ಳು 50 ಹೆ (55 ಹೆ), ಹತ್ತಿ 595 ಹೆ (4810 ಹೆ).

ADVERTISEMENT

ಸಂಡೂರು ಹೋಬಳಿಯಲ್ಲಿ ಶೇ 70, ಚೋರನೂರು ಹೋಬಳಿ ಶೇ 60 ಹಾಗೂ ತೋರಣಗಲ್‌ ಹೋಬಳಿ ಶೇ 15 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೂನ್‌ ತಿಂಗಳ ಮಳೆ ವಿವರ (ಆವರಣ ದಲ್ಲಿರುವುದು ಸರಾಸರಿ ವಾಡಿಕೆ ಮಳೆ ಪ್ರಮಾಣ): ಸಂಡೂರು, ಚೋರುನೂರು ಹಾಗೂ ಕುರೆಕುಪ್ಪ ಮಳೆ ಮಾಪನ ಕೇಂದ್ರಗಳಲ್ಲಿ ಕ್ರಮವಾಗಿ 37.60 ಮಿ.ಮೀ (125.85 ಮಿ.ಮೀ), 48 ಮಿ.ಮೀ (99.45 ಮಿ.ಮೀ), 32 ಮಿ.ಮೀ (85.53 ಮಿ.ಮೀ).

ಜುಲೈ 25ರವರೆಗೆ ಮಳೆ ಪ್ರಮಾಣ: ಸಂಡೂರು–67 ಮಿ.ಮೀ (144.30 ಮಿ.ಮೀ). ಚೋರುನೂರು: 47 ಮಿ.ಮೀ (86.86 ಮಿ.ಮೀ) ಹಾಗೂ ಕುರೆಕುಪ್ಪ: 19 ಮಿ.ಮೀ (56.04 ಮಿ.ಮೀ). ರೈತ ಮುಖಂಡ ಶ್ರೀಪಾದಸ್ವಾಮಿ ಪ್ರಜಾವಾಣಿಯೊಂದಿಗೆ ಮಾತನಾಡಿ, ಕೆಲ ದಿನಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಂದ ಕಾರಣ ರೈತರು ಹಲವೆಡೆ ಬಿತ್ತನೆ ಮಾಡಿದ್ದಾರೆ. ಆದರೆ ಅದು ಸಾಕಾಗಿಲ್ಲ. ಒಂದೆರೆಡು ದಿನಗಳಲ್ಲಿ ಮಳೆ ಬಂದರೆ ಮಾತ್ರ ಬಿತ್ತಿದ ಬೀಜಗಳು ಚಿಗುರೊಡೆ ಯುತ್ತವೆ. ಇಲ್ಲದಿದ್ದರೆ ರೈತರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.