ADVERTISEMENT

‘ತುಂಗಭದ್ರಾ ಹೂಳು ತೆಗೆಸಿ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:17 IST
Last Updated 24 ಏಪ್ರಿಲ್ 2017, 6:17 IST

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿನ ಹೂಳಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಹೋರಾಟ ನಡೆಸುವುದಕ್ಕೆ ಸಂಬಂಧಿಸಿ ದಂತೆ ಭಾನುವಾರ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.ವೇದಿಕೆಯ ಜಿಲ್ಲಾ ಅಧ್ಯಕ್ಷ ಚಾನಾಳ್‌ ಶೇಖರ್‌ ಮಾತನಾಡಿ, ‘ಹೂಳಿನ ಸಮಸ್ಯೆ ಗಂಭೀರ ವಿಷಯವಾಗಿದೆ. ಆದರೂ ಸರ್ಕಾರ ಮೌನ ವಹಿಸಿದೆ. ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕಿದೆ’ ಎಂದು ಹೇಳಿದರು.

ನೆರೆಯ ಆಂಧ್ರ ಪ್ರದೇಶ, ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಇತ್ತೀಚೆಗೆ ಈ ವಿಷಯದ ಕುರಿತು ಚರ್ಚಿಸಿದ ಬಳಿಕ ಈ ಸಭೆ ಕರೆಯ ಲಾಗಿದ್ದು, ಸಮಸ್ಯೆಯ ಪರಿಹಾರಕ್ಕೆ ಹೋರಾಟವೊಂದೆ ದಾರಿ ಎಂಬ ಅಭಿಪ್ರಾಯ ಬಹುತೇಕರಿಂದ ವ್ಯಕ್ತ ವಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದು ತಿಳಿಸಿದರು.

ವೇದಿಕೆ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌.ಶ್ರೀನಿವಾಸ್‌, ಪದಾಧಿಕಾರಿ ಗಳಾದ ಆರ್ಮುಗಂ, ಬಿ. ಮಂಜುನಾಥ, ಹುಲುಗಪ್ಪ, ಎಸ್‌.ಎಂ. ಜಾಫರ್‌, ಸಲೀಂ, ಅಮರೇಶ್ವರಯ್ಯ, ವ್ಯಾಸರಾಜ್‌, ತಿಪ್ಪೇಸ್ವಾಮಿ, ಕೆ. ಲಕ್ಷ್ಮೀದೇವಿ, ಸುವರ್ಣ ರತ್ನ, ಶಮಾ, ಶಕುಂತಲಾ, ಲತಾ, ಶೈಲಜಾ, ಸುಮಾ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.