ADVERTISEMENT

ದಾಂಪತ್ಯಕ್ಕೆ ಕಾಲಿರಿಸಿದ 11 ಜೋಡಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:19 IST
Last Updated 17 ಏಪ್ರಿಲ್ 2017, 7:19 IST

ಹಗರಿಬೊಮ್ಮನಹಳ್ಳಿ: ಆಡಂಬರದ ವಿವಾಹಗಳಿಂದ ಅನಗತ್ಯ ವೆಚ್ಚ ಹೆಚ್ಚಾ ಗುತ್ತದೆ, ಆದ್ದರಿಂದ ಸಾಮೂಹಿಕ ವಿವಾಹಗಳಲ್ಲಿ ಮದುವೆ ಆಗುವುದರಿಂದ ಆರ್ಥಿಕ ಹೊರೆ ತಪ್ಪುತ್ತದೆ ಎಂದು ಮಾಜಿ ಶಾಸಕ ನೇಮಿರಾಜನಾಯ್ಕ ಹೇಳಿದರು.ಪಟ್ಟಣದ ಪಂಚಮಸಾಲಿ ಭವನ ದಲ್ಲಿ ಶುಕ್ರವಾರ ವೀರಶೈವ ಪಂಚಮ ಸಾಲಿ ಸಮಾಜದಿಂದ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಈಗ ಎಲ್ಲ ಸ್ತರದವರೂ ಸರಳ ವಿವಾಹಗಳಿಗೆ ಆದ್ಯತೆ ನೀಡುತ್ತಿದ್ದಾರೆ, ಇದು ಉತ್ತಮ ಬೆಳವಣಿಗೆ ಎಂದರು.ಮನಗೋಳಿ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪಂಚಮಸಾಲಿ ಸಮಾಜದವರು ಕೃಷಿ ಜತೆಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.

ಸಮಾಜದ ರಾಜ್ಯಘಟಕದ ಮಾಜಿ ಅಧ್ಯಕ್ಷ ಬಾವಿಬೆಟ್ಟಪ್ಪ ಮಾತನಾಡಿದರು. ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಹುಡೇದ್ ಗುರು ಬಸವರಾಜರನ್ನು ಸನ್ಮಾನಿಸಲಾಯಿತು. ಒಟ್ಟು 11 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ADVERTISEMENT

ಮುಖಂಡರಾದ ಬೊಪ್ಪಖಾನ್ ಕುಮಾರಸ್ವಾಮಿ, ಅಕ್ಕಿ ಶಿವಕು ಮಾರ್, ನಿರ್ಮಲಾ ಬಣಕಾರ, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇರುದ್ರಮುನಿ, ಪುರಸಭೆ ಸದಸ್ಯರಾದ ಲಕ್ಷ್ಮಣ ಕಲಾಲ್, ಎಚ್‌.ಎಂ.ಚೋಳ ರಾಜ, ಚಾಮರಾ ಜೇಂದ್ರ ಗೌಡ, ಸಿದ್ದೇಶ್, ಬಣಕಾರ ಬಸವರಾಜ, ಶಿಕ್ಷಕ ಲೋಕೇಶ್, ಸಮಾ ಜದ ತಾಲ್ಲೂಕು ಪ್ರಧಾನ ಕಾರ್ಯ ದರ್ಶಿ ಜೆ.ಬಿ.ಶರಣಪ್ಪ, ಸಂಚಿ ಶಿವ ಕುಮಾರ್ ಇದ್ದರು.

ಶುಭಕೋರಿದ ಶಾಸಕ: ಶಾಸಕ ಎಸ್. ಭೀಮಾನಾಯ್ಕ ದಂಪತಿಗೆ ಶುಭ ಕೋರಿ ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಅಧ್ಯಕ್ಷ ಜೋಗಿ ಹನುಮಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಯು.ಬಾಬುವಲಿ, ಸದಸ್ಯ ರಾದ ಹನುಮಂತಪ್ಪ, ಕನಕಪ್ಪ, ಬಾಲು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದೇವೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.