ADVERTISEMENT

ನಕಲಿ ಲೆಟರ್‌ಹೆಡ್‌: ಸಮಗ್ರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:12 IST
Last Updated 23 ಮೇ 2017, 9:12 IST

ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್‌ ಅವರ ನಕಲಿ ಲೆಟರ್‌ ಹೆಡ್‌, ಸಹಿ ಬಳಸಿಕೊಂಡು ನಾಯಕ ಸಮುದಾಯದ ಕೆಲವರ ವಿರುದ್ಧ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕು ಎಂದು ಸಿಪಿಎಂ ತಾಲ್ಲೂಕು ಸಮಿತಿ ಆಗ್ರಹಿಸಿದೆ. ಈ ಸಂಬಂಧ ಮಂಗಳವಾರ ಜಿಲ್ಲಾ ಧಿಕಾರಿ ರಾಮಪ್ರಸಾದ ಮನೋಹರ್‌ ಅವರಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಗೆ ಸಲ್ಲಿಸಿತು.

ರಾಜಕೀಯ ದುರುದ್ದೇಶದಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಹಾಗೂ ಕಮಲಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ. ವೆಂಕಟರಮಣ ಆ ಪತ್ರ ಬರೆದಿದ್ದಾರೆ ಎಂದು ಶಾಸಕರು ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಪ್ರವೀಣ್‌ ಸಿಂಗ್‌, ಡಿ. ವೆಂಕಟರಮಣ ಅವರು ಶಾಸಕರ ಆರೋಪ ತಳ್ಳಿ ಹಾಕಿದ್ದು, ಅವರ ಕಚೇರಿಯಿಂದಲೇ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಪತ್ತೆ ಹಚ್ಚಬೇಕಿ ಎಂದು ಆಗ್ರಹಿಸಲಾಗಿದೆ.

ಒಂದು ಸಮಾಜವನ್ನು ಅಪಮಾನ ಮಾಡುವುದು ಮತ್ತು ಅದೇ ಸಮಾಜ ದಿಂದ ಅನುಕಂಪ ಗಿಟ್ಟಿಸಿಕೊಂಡು ಲಾಭ ಪಡೆಯುವ ಉದ್ದೇಶದಿಂದ ಹೀಗೆ ಮಾಡಿರುವ ಸಾಧ್ಯತೆ ಇದೆ. ತಮ್ಮ ರಾಜ ಕೀಯ ಬೇಳೆ ಬೇಯಿಸಿಕೊಳ್ಳಲು ಒಂದು ಸಮಾಜದ ಹೆಸರನ್ನು ದುರುಪ ಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಿದೆ.

ADVERTISEMENT

ಹೊಸಪೇಟೆ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಿ, ಜಾತಿ ಜಾತಿಗಳ ನಡುವೆ ದ್ವೇಷ, ವೈಮನಸ್ಸು ಹುಟ್ಟು ಹಾಕಲು ಪ್ರಯತ್ನಿಸಲಾಗುತ್ತಿದೆ. 2015ರ ಡಿಸೆಂಬರ್‌ನಲ್ಲಿ ಅನಾಮಧೇಯ ಪತ್ರ ದಿಂದ ನಗರದಲ್ಲಿ ಕೋಮು ಜಗಳ ನಡೆ ದಿತ್ತು. ಹಳೆಯ ಘಟನೆಗಳಿಂದ ಎಚ್ಚೆತ್ತು ಕೊಂಡು ಭವಿಷ್ಯದಲ್ಲಿ ಮತ್ತೆ ಇಂತಹ ಘಟನೆಗಳು ಆಗದಂತೆ ನೋಡಿ ಕೊಳ್ಳಬೇಕು ಎಂದು ಮನವಿಯಲ್ಲಿ ಕೋರಿದೆ.

2015ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ. ಆ ಘಟನೆಯಿಂದ ಈಗಲೂ ಅನೇಕ ಜನ ಅಮಾಯಕರು ತೊಂದರೆ ಅನುಭವಿ ಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ವಾಟ್ಸ್‌ ಆ್ಯಪ್‌ನಲ್ಲಿ ಹರದಾಡಿರುವ ಪತ್ರ ಶಾಸಕ ಆನಂದ ಸಿಂಗ್‌ ಅವರ ಕೋಮುವಾದಿ ರಾಜಕೀಯ ಸಂಚಿನ ಮುಂದುವರಿದ ಭಾಗವಾಗಿರಬಹುದು ಎಂದು ಸಿಪಿಎಂ ಭಾವಿಸಿದೆ. ಸಮಗ್ರ ತನಿಖೆ ನಡೆಸಿ, ಅದಕ್ಕೆ ಕಾರಣರಾದವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಆರ್‌. ಭಾಸ್ಕರ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮರಡಿ ಜಂಬಯ್ಯ ನಾಯಕ, ಸದಸ್ಯರಾದ ಕಲ್ಯಾಣಯ್ಯ, ಎ. ಕರುಣಾನಿಧಿ, ಬಿ. ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.