ADVERTISEMENT

ನೀರನ್ನು ಸಂರಕ್ಷಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮೇ 2017, 7:28 IST
Last Updated 3 ಮೇ 2017, 7:28 IST

ಸಂಡೂರು: ಭಗೀರಥ ಮಹರ್ಷಿ  ಬ್ರಹ್ಮ, ಶಿವ, ಜಹ್ನುವನ್ನು ಪ್ರಾರ್ಥಿಸಿ, ಹಲವು ಅಡೆತಡೆಗಳನ್ನು ಎದುರಿಸಿ, ಗಂಗೆಯನ್ನು ಧರೆಗೆ ತಂದ. ಇಂತಹ ಗಂಗೆಯನ್ನು, ಜೀವಿಗಳಿಗೆ ಅತ್ಯಮೂಲ್ಯ ನೀರು ಸಂರಕ್ಷಿಸಿ, ಸದುಪಯೋಗ ಪಡಿಸಿಕೊಳ್ಳುವ ಅಗತ್ಯ ಇದೆ ಎಂದು ಮುಖ್ಯಶಿಕ್ಷಕ ಎನ್. ವೀರಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಭಗೀರಥ ಮಹರ್ಷಿ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.

ಭಗೀರಥ ತನ್ನ ಕಾರ್ಯದಲ್ಲಿ ಸಾಧಿ ಸಿದ ಸಫಲತೆಯಿಂದ ತಿಳಿದು ಬರುವು ದೇನೆಂದರೆ, ಅಸಾಧ್ಯವಾದುದು ಯಾವು ದಿಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದರಲ್ಲದೆ, ಇಂದು ಕೆರೆ, ನದಿ ಪಾತ್ರ ಗಳು ಹೂಳಿನಿಂದ ತುಂಬಿದ್ದು, ಅವುಗ ಳನ್ನು ಹೂಳಿನಿಂದ ತೆರವುಗೊಳಿಸಬೇ ಕಿದೆ. ನದಿ ಜೋಡಣೆಯಂತಹ ಯೋಜ ನೆಗಳನ್ನು ರೂಪಿಸಿ, ನೀರು ಪೋಲಾಗ ದಂತೆ ಎಚ್ಚರವಹಿಸಬೇಕಿದೆ. ಲಭ್ಯವಿರುವ ನೀರನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ತಿಳಿಸಿದರು.

ತಹಶೀಲ್ದಾರ್ ಯು. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಇಓ ಜೆ.ಎಂ. ಅನ್ನದಾನಸ್ವಾಮಿ, ಉಪ್ಪಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಂಜಿನಪ್ಪ ಮಾತನಾಡಿದರು.

ಬಿಇಓ ಬಿ. ಮೌನೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಉಪತಹಶೀಲ್ದಾರ್ ರವೀಂದ್ರ ಬಾಬು, ಕಂದಾಯ ನೀರಿಕ್ಷಕ ಸಿದ್ದಪ್ಪ, ಶಿರಸ್ತೆದಾರ್ ರುದ್ರಪ್ಪ, ರೈತ ಸಂಘದ ಅಧ್ಯಕ್ಷ ಉಜ್ಜಿನಯ್ಯ, ಮುಖಂಡರಾದ ಎಸ್. ನಾಗೇಂದ್ರಪ್ಪ,  ರಂಗಪ್ಪ, ನಲ್ಲಪ್ಪ, ಕೊಟ್ರಪ್ಪ, ಸಿದ್ದಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.