ADVERTISEMENT

ಪೊಲೀಸರು–ವಕೀಲರ ನಡುವೆ ವಾಗ್ವಾದ

ವಕೀಲ ಮಲ್ಲಿಕಾರ್ಜುನರೆಡ್ಡಿ ಕಚೇರಿಯಿಂದ ಪ್ರತಿಭಟನಾಕಾರರನ್ನು ಕರೆದೊಯ್ದ ಪೊಲೀಸರು: ಡಿ.ಸಿ. ಕ್ರಮಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 4:36 IST
Last Updated 21 ಫೆಬ್ರುವರಿ 2017, 4:36 IST
ಬಳ್ಳಾರಿ: ಅದಿರು ಸಾಗಣೆ ಲಾರಿಗಳ ಸಂಚಾರದಿಂದ ಆಗುತ್ತಿರುವ ಅನಾಹುತ ಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಜಿಲ್ಲೆಯ ಭುಜಂಗನಗರದಲ್ಲಿ ಪ್ರತಿಭಟಿ ಸಿದ ಜನಸಂಗ್ರಾಮ ಪರಿಷತ್‌ ಸದಸ್ಯರ ವಿರುದ್ಧ ದಾಖಲಾಗಿರುವ ಶಾಂತಿ ಭಂಗ ಪ್ರಕರಣ ಸೋಮವಾರ ಹೊಸ ತಿರುವು ಪಡೆದಿದ್ದು, ಎಲ್ಲ 12 ಮಂದಿಗೂ ಸಂಡೂರಿನಲ್ಲಿ ತಹಶೀಲ್ದಾರ್‌ ಯು. ಬಸವರಾಜ ಸೋಮವಾರ ಸಂಜೆ ಜಾಮೀನು ಮಂಜೂರು ಮಾಡಿದ್ದಾರೆ.
 
ಅದಕ್ಕೂ ಮುನ್ನ,  ನಗರದ ವಕೀಲ ಹಾಗೂ ಪ್ರತಿಭಟನಾಕಾರರ ಕಕ್ಷಿದಾರ ರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರ ಕಚೇರಿಯಲ್ಲಿದ್ದ ಒಂಭತ್ತು ಮಂದಿ ಯನ್ನು ಡಿವೈಎಸ್ಪಿ ಎಚ್‌,ಎಸ್‌.ಹೊಸ ಮನಿ ನೇತೃತ್ವದಲ್ಲಿ ಬ್ರೂಸ್‌ಪೇಟೆ ಠಾಣೆ ಸಿಪಿಐ ಶ್ರೀಧರ ದೊಡ್ಡಿ ವಿರೋಧದ ನಡುವೆಯೇ ವಶಕ್ಕೆ ಪಡೆದ ಘಟನೆಯೂ ನಡೆಯಿತು.
 
ತಮ್ಮ ಕಚೇರಿಗೇ ಬಂದು ಪ್ರತಿಭಟ ನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಅವಕಾಶವಿಲ್ಲ ಎಂದು ವಕೀಲರು ಮೊದಲಿಗೆ ಪ್ರತಿಪಾದಿಸಿದರು. ಅವರ ಮಾತಿಗೆ ತಕ್ಕಂತೆ, ತಾವು ಕೂಡ ಹೊರಕ್ಕೆ ಬರುವುದಿಲ್ಲ ಎಂದು ಪ್ರತಿಭಟ ನಾಕಾರರು ಪಟ್ಟು ಹಿಡಿದಿದ್ದರು.
 
ಆದರೆ ಪೊಲೀಸರು, ಪ್ರತಿಭಟನಕಾ ರರನ್ನು ವಶಕ್ಕೆ ಪಡೆಯಲು ತಮ್ಮ ಬಳಿ ವಾರಂಟ್‌ ಇದೆ. ಹೀಗಾಗಿ ಅಡ್ಡಿಪಡಿಸ ಬಾರದು ಎಂದು ವಕೀಲರನ್ನು ಆಗ್ರಹಿಸಿದರು. ಅದಕ್ಕೆ ಒಪ್ಪದ ವಕೀಲರು, ಪ್ರಕರಣ ಸಂಬಂಧ ಮಾಹಿತಿ ನೀಡಲು ಬಂದಿರುವ ತಮ್ಮ ಕಕ್ಷಿದಾರರನ್ನು ತಮ್ಮ ಕಚೇರಿಯಲ್ಲಿ ವಶಕ್ಕೆ ಪಡೆಯಲು ಅವಕಾಶವಿಲ್ಲ ಎಂದು ಪಟ್ಟುಹಿಡಿದರು. ತಮಗಿರುವ ‘ವಕೀಲರ ವಿಶೇಷ ಹಕ್ಕು’ (ಅಡ್ವೊಕೇಟ್‌ ಪ್ರಿವಿಲೇಜ್‌) ಅನ್ನು ಪೊಲೀಸರಿಗೆ ನೆನಪಿಸಿದರು. ತಮ್ಮ ಕಾರ್ಯ ಮುಗಿದ ಬಳಿಕ, ಕಕ್ಷಿದಾರರು ಕಚೇರಿಯಿಂದ ಹೊರಗೆ ಬರುವವರೆಗೂ ಅವರನ್ನು ವಶಕ್ಕೆ ಪಡೆಯುವಂತಿಲ್ಲ. ಪಡೆದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು. 
 
ನಂತರ ನಡೆದ ಮಾತುಕತೆಯ ಬಳಿಕ,  ಶ್ರೀಶೈಲ ಆಲ್ದಹಳ್ಳಿ, ಮೂಲಿಮನಿ ಈರಣ್ಣ, ಯರ್ರಿಸ್ವಾಮಿ, ಎಂ.ಸುರೇಶ್‌, ಮಲ್ಲಿಕಾರ್ಜುನ, ಸುಬ್ರಮಣಿ, ಎಚ್‌.ಕೆ. ಬಸವರಾಜ, ಮುಕಡಪ್ಪ ಮತ್ತು ಪ್ರಕಾಶ್‌ ಕಂಚಿಗೇರಿ ಹೊರಕ್ಕೆ ಬಂದರು. ಅವರನ್ನು ಪೊಲೀಸರು ಸಂಡೂರು ತಹಶೀಲ್ದಾರರ ಕಚೇರಿಗೆ ಕರೆದೊಯ್ದರು.
 
ಅಪಹರಣ –ದೂರು: ಈ ಘಟನೆ ಬಳಿಕ, ತಮ್ಮ ಕಕ್ಷಿದಾ ರರನ್ನು ಪೊಲೀಸರು ಅಪಹರಿಸಿದ್ದಾರೆ ಎಂದು ಆರೋಪಿಸಿ ವಕೀಲರ ಸಹಾಯಕ ವಕೀಲರಾದ ಆರ್. ವೀರೇಂದ್ರ ಪಾಟೀಲ್‌ ದೂರು ನೀಡಿ ದರು. ಅದಕ್ಕೆ ತಮ್ಮ ಚಿಕ್ಕ ಸಹಿ ಹಾಕಿದ ಶ್ರೀಧರದೊಡ್ಡಿ ಠಾಣೆಗೆ ತೆರಳಿ ಸಲ್ಲಿಸುವಂತೆ ಸೂಚಿಸಿದರು.
 
12 ಮಂದಿಗೂ ಜಾಮೀನು 
ಸಂಡೂರು: 12 ಮಂದಿ ಪ್ರತಿಭಟನಾ ಕಾರರಿಗೂ ತಹಶೀಲ್ದಾರ್‌  ಯು.ಬಸವ ರಾಜ್‌ ಸೋಮವಾರ ಸಂಜೆ ಜಾಮೀನು ಮಂಜೂರು ಮಾಡಿದರು. ಬಳ್ಳಾರಿಯ ಲ್ಲಿದ್ದ ಒಂಭತ್ತು ಮಂದಿಗಿಂತಲೂ ಮುಂಚೆಯೇ ತಹಶೀಲ್ದಾರರ ಮುಂದೆ ಹಾಜರಿದ್ದ ಟಿ.ಎಂ.ಶಿವಕುಮಾರ್‌, ತಾಜು ದ್ದೀನ್‌ ಮತ್ತು ಕುಮಾರಸ್ವಾಮಿ ಹಿರೇ ಗೌಡ್ರ ಅವರಿಗೆ ಮೊದಲು ಜಾಮೀನು ದೊರಕಿತು, ನಂತರ ಬಳ್ಳಾರಿಯಿಂದ ಪೊಲೀಸರು ಕರೆತಂದ ಒಂಭತ್ತು ಮಂದಿಗೂ ಜಾಮೀನು ನೀಡಲಾಯಿತು. ಮೂವರ ಜಾಮೀನಿಗಾಗಿ ಭುಜಂಗ ನಗರ ರೈತ ಸಂಡೂರಿನ  ಹೊನ್ನೂರು ಸಾಬ್‌ ಎಂಬುವವರು ತಮ್ಮ ಜಮೀನು ಪಹಣಿಪತ್ರವನ್ನು ಭದ್ರತೆ ಸಲುವಾಗಿ ನೀಡಿದ್ದಾರೆ. 
 
ಉಳಿದ ಒಂಭತ್ತು ಮಂದಿ ಜಾಮೀನಿಗಾಗಿ ಎಚ್‌.ಜಿ. ಮಲ್ಲಿಕಾರ್ಜುನ ಎಂಬುವವರು ತಮ್ಮ ಜಮೀನು ಪಹಣಿ ಪತ್ರ ನೀಡಿದ್ದಾರೆ. ಮಾ.3ರಂದು ವಿಚಾರಣೆ ನಡೆಯಲಿದೆ.
 
**
‘ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ’
ಅದಿರು ಸಾಗಣೆ ಲಾರಿಗಳಿಂದ ಆಗುತ್ತಿರುವ ಅನಾಹುತಗಳನ್ನು   ತಡೆಯಬೇಕು ಎಂದು ಪ್ರತಿಭಟಿಸಿದವರ ವಿರುದ್ಧ  ಕೈಗೊಳ್ಳುತ್ತಿರುವ ಕಾನೂನು ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ನ್ಯಾಯ ಕೇಳುವ ಜನರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಂದ ಆಗಿರುವ ಅವಮಾನದ ವಿರುದ್ಧ ಜನಪರ ಸಂಘಟನೆಗಳು ಪ್ರತಿಭಟಿಸಲೇಬೇಕು ಎನ್ನುತ್ತಾರೆ ಜನಸಂಗ್ರಾಮ ಪರಿಷತ್‌ ರಾಜ್ಯ ಸಮಿತಿ ಸದಸ್ಯ ಚಂದ್ರಕಾಂತ ವಡ್ಡು.
 
**
ಅಂದೇ ಏಕೆ ಬಂಧಿಸಲಿಲ್ಲ?: ರೆಡ್ಡಿ
ಬಳ್ಳಾರಿ: ತಪ್ಪೊಪ್ಪಿಗೆ ನೀಡುವುದಿಲ್ಲ ಎಂಬ ಕಾರಣಕ್ಕೆ ಪ್ರತಿಭಟನಾಕಾರ ರನ್ನು ನ್ಯಾಯಾಂಗ ಬಂಧನಕ್ಕೆ ನೀಡು ವುದಾಗಿ ಫೆ.16ರಂದು ವಿಚಾರಣೆ ಬಳಿಕ ಹೇಳಿದ್ದ ಸಂಡೂರು ತಹಶೀಲ್ದಾ ರರು ಆ ಬಗ್ಗೆ ಆದೇಶ ಹೊರಡಿಸಿದ ಬಳಿಕ ಅಂದೇ ಏಕೆ ಪ್ರತಿಭಟನಾಕಾ ರರನ್ನು ಬಂಧಿಸಲಿಲ್ಲ ಎಂದು ವಕೀಲ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಆಕ್ಷೇಪಿಸಿದ್ದಾರೆ.
 
‘ತಮ್ಮನ್ನು ಬಂಧಿಸಬಹುದೆಂದು ನಿರೀಕ್ಷಿಸಿ ಕಕ್ಷಿದಾರರು ತಹ ಶೀಲ್ದಾರರ ಕಚೇರಿ ಆವರಣದಲ್ಲಿ ರಾತ್ರಿ 9 ಗಂಟೆ ವರೆಗೂ ಕಾದು ಮನೆಗಳಿಗೆ ವಾಪಸಾಗಿ ದ್ದರು. ರಾತ್ರಿ 11ರ ವೇಳೆ ಯರ್ರಿಸ್ವಾಮಿ ಅವರಿಗೆ ಪೊಲೀಸರ ದೂರವಾಣಿ ಕರೆ ಬಂದ ಬಳಿಕ ಭಯ ಭೀತರಾಗಿ ತಮ್ಮನ್ನು ಸಂಪರ್ಕಿಸಿದ್ದರು. ಹೀಗಾಗಿ ಅವರನ್ನೆಲ್ಲ ತಕ್ಷಣವೇ ಬಳ್ಳಾರಿಗೆ ಬರಲು ಹೇಳಿದ್ದೆ. ನಂತರ ಅವರನ್ನು ಶರಣಾಗತಿ ಸಲುವಾಗಿ ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾ ಧೀಶರ ಮನೆಗೆ ಕರೆದೊಯ್ಯಲಾಗಿತ್ತು.
ನ್ಯಾಯಾಧೀಶರು ಮಾರನೇ ದಿನ ನ್ಯಾಯಾಲಯಕ್ಕೆ ಹಾಜ ರಾಗುವಂತೆ ಸೂಚಿಸಿದ್ದರು. 17ರಂದು ನ್ಯಾಯಾಲಯಕ್ಕೆ ಶರಣಾಗತಿ ಅರ್ಜಿ ಯನ್ನು ಸಲ್ಲಿಸಲಾಗಿತ್ತು. ಆ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆಯಲ್ಲೇ ಪೊಲೀಸರು ನಮ್ಮ ಕಚೇರಿಗೆ ಬಂದು ತಮ್ಮ ಬಳಿ ಇರುವ ವಾರಂಟ್‌ ಯಾವು ದೆಂದು ತೋರಿಸದೆ, ಕಕ್ಷಿದಾರರನ್ನು ಕರೆದೊ ಯ್ದರು’ ಎಂದಿದ್ದಾರೆ.
 
‘ನ್ಯಾಯಾಂಗ ಬಂಧನ ಆದೇಶ ಹೊರಡಿಸಿದ ಬಳಿಕ ಪ್ರತಿಭಟನಾಕಾ ರರು ತಮ್ಮ ವಶಕ್ಕೆ ದೊರಕಿಲ್ಲ ಎಂದು ತಹಶೀಲ್ದಾರರು ಹೇಳುವುದಾರೆ ಆ ಬಗ್ಗೆ ಅಂದೇ ಏಕೆ ದೂರು ದಾಖಲಿ ಸಲಿಲ್ಲ? ನಾಲ್ಕು ದಿನ ಕಾಲ ಏನು ಮಾಡುತ್ತಿದ್ದರು?’ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.