ADVERTISEMENT

ಬಾಲಕಿಯರ ಹಾಸ್ಟೆಲ್‌ಗೆ ಸಿಸಿಟಿವಿ ಕಣ್ಗಾವಲು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿದ್ಧತೆ; ಕೊರತೆಗಳ ನಡುವೆ ಅಭಿವೃದ್ಧಿಗೆ ಯತ್ನ– ಅಧಿಕಾರಿಗಳ ಭರವಸೆ

ಕೆ.ನರಸಿಂಹ ಮೂರ್ತಿ
Published 11 ಜನವರಿ 2017, 9:13 IST
Last Updated 11 ಜನವರಿ 2017, 9:13 IST
ಬಳ್ಳಾರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ದಾಖಲಿಸುವ ದೃಶ್ಯಾವಳಿಗಳನ್ನು ತಮ್ಮ ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಜಿಲ್ಲಾ ಅಧಿಕಾರಿ ನಾಗರಾಜ್
ಬಳ್ಳಾರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ದಾಖಲಿಸುವ ದೃಶ್ಯಾವಳಿಗಳನ್ನು ತಮ್ಮ ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಜಿಲ್ಲಾ ಅಧಿಕಾರಿ ನಾಗರಾಜ್   

ಬಳ್ಳಾರಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಎಲ್ಲ ವಿದ್ಯಾರ್ಥಿ ನಿಲಯಗಳಿಗೂ ಒಂದು ತಿಂಗಳ ಒಳಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ದೊರಕಲಿದೆ.

ಇಲಾಖೆಯ ನಿರ್ವಹಣಾ ವೆಚ್ಚದಲ್ಲಿ ಈಗಾಗಲೇ ಹಲವು ನಿಲಯಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಳಿದ ನಿಲಯಗಳಿಗೆ ಅಳವಡಿಸುವ ಸಲುವಾಗಿ ಟೆಂಡರ್‌ ಆಹ್ವಾನಿಸಲಾಗಿದೆ. ಕ್ಯಾಮೆರಾಗಳನ್ನು ಅಳವಡಿಸುವ ಸಲು ವಾಗಿಯೇ ಕಳೆದ ಡಿಸೆಂಬರಿನಲ್ಲಿ ಇಲಾ ಖೆಯ ಆಯುಕ್ತರು ಎಲ್ಲ ಜಿಲ್ಲಾ ಅಧಿಕಾರಿ ಗಳಿಗೆ ಆದೇಶ ನೀಡಿದ್ದಾರೆ.

ಈಗಾಗಲೇ ಜಿಲ್ಲಾ ಅಧಿಕಾರಿ ಕಚೇರಿ ಯಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿ ಸಲಾಗಿದ್ದು, ಕಚೇರಿಯ ಸಿಬ್ಬಂದಿಯ ಕಾರ್ಯವೈಖರಿಯನ್ನು ಜಿಲ್ಲಾ ಅಧಿಕಾರಿ ತಮ್ಮ ಕೊಠಡಿಯಲ್ಲೇ ಕುಳಿತು ವೀಕ್ಷಿಸುವ ವ್ಯವಸ್ಥೆಯೂ ಇದೆ.

ಆಯುಕ್ತರ ಕಚೇರಿಯೊಂದಿಗೆ ಇಲಾ ಖೆಯ ಎಲ್ಲ ಜಿಲ್ಲಾ ಕಚೇರಿಗಳೂ ಆನ್‌ ಲೈನ್‌ನಲ್ಲಿ ಸಂಪರ್ಕಹೊಂದುವ ಪ್ರಕ್ರಿ ಯೆಗೂ ಚಾಲನೆ ದೊರಕಲಿದೆ. ಸಾಫ್ಟ್‌ ವೇರ್‌ ದೊರೆತ ಬಳಿಕ, ಎಲ್ಲ ಹಾಸ್ಟೆಲ್‌ಗಳ ಚಟುವಟಿಕೆಗಳನ್ನು ನಮ್ಮ ಕಚೇರಿಯಲ್ಲೇ ಕುಳಿತು ವೀಕ್ಷಿಸಬಹುದು ಎನ್ನುತ್ತಾರೆ ಇಲಾಖೆಯ ಜಿಲ್ಲಾ ಅಧಿಕಾರಿ ನಾಗರಾಜ್.

ಸಿಬ್ಬಂದಿ ಕೊರತೆ: ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೊರಗುತ್ತಿಯಡಿ ಸಿಬ್ಬಂದಿ ನೇಮಿಸಿಕೊಂಡಿದ್ದರೂ, ಪ್ರತಿ ಮೇಲ್ವಿಚಾ ರಕರಿಗೆ ಕನಿಷ್ಠ ತಲಾ ಎರಡು ನಿಲಯಗಳ ಜವಾಬ್ದಾರಿಯನ್ನು ನೀಡಲಾಗಿದೆ. ‘ಬಿ’ ದರ್ಜೆಯ ಎಂಟು ಹುದ್ದೆಗಳಲ್ಲಿ ಇರುವ ವರು ಅದೇ ಹುದ್ದೆಯ ಪದೋನ್ನತಿಗಾಗಿ ಕಾಯುತ್ತಿದ್ದಾರೆ. ‘ಡಿ’ ದರ್ಜೆ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸ್ವೀಕರಿಸಲಾಗಿದೆ. ಆದರೆ, ವಿದ್ಯಾರ್ಹತೆ ಸಂಬಂಧ ಆಕ್ಷೇಪ ವ್ಯಕ್ತವಾಗಿರುವುದರಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎನ್ನುತ್ತಾರೆ ಇಲಾಖೆ ಜಿಲ್ಲಾ ಅಧಿಕಾರಿ ಕೆ. ನಾಗರಾಜ್.

ಪರಿವರ್ತನೆ: ಅಲೆಮಾರಿ, ಅರೆ ಅಲೆ ಮಾರಿ ಸಮುದಾಯದ ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶ್ರಮ ಶಾಲೆಗಳನ್ನು ಮೆಟ್ರಿಕ್‌ಪೂರ್ವ ನಿಲಯಗಳನ್ನಾಗಿ ಪರಿವ ರ್ತಿಸಿದ್ದು, ಮುಂದೆ ಅಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.

ಹೊಸಪೇಟೆ ತಾಲ್ಲೂಕಿನ ಕಮಲಾ ಪುರ, ಬಳ್ಳಾರಿ ತಾಲ್ಲೂಕಿನ ಬೆಣಕಲ್, ಕೂಡ್ಲಿಗಿ ಪಟ್ಟಣ ಮತ್ತು ತಾಲ್ಲೂಕಿನ ಗುಡೇಕೋಟೆಯಲ್ಲಿ ಆಶ್ರಮ ಶಾಲೆಗಳಿವೆ. ಅವುಗಳ ಪೈಕಿ ಕೂಡ್ಲಿಗಿಯಲ್ಲಿರುವ ಶಾಲೆ ಮೆಟ್ರಿಕ್‌ಪೂರ್ವ ಬಾಲಕಿಯರ ನಿಲಯ ವಾಗಲಿದೆ. ಉಳಿದವು ಬಾಲಕರ ನಿಲಯ ಗಳಾಗಲಿವೆ ಎಂದು ತಿಳಿಸಿದರು.

9 ಮೊರಾರ್ಜಿ ವಸತಿ ಶಾಲೆಗಳು: ಜಿಲ್ಲೆಯ ಹಡಗಲಿ ತಾಲ್ಲೂಕಿನ ಮೊದಲ ಘಟ್ಟ, ಇಟಗಿ, ಹೊಸಪೇಟೆ ತಾಲ್ಲೂಕಿನ ಕಾಳಘಟ್ಟ, ಬಳ್ಳಾರಿ ತಾಲ್ಲೂಕಿನ ಕುರು ಗೋಡು, ಚೇಳಗುರ್ಕಿ, ಮೀನಳ್ಳಿ, ಎರ್ರ ಗುಡಿ, ಸಂಡೂರು ತಾಲ್ಲೂಕಿನ ಮೆಟ್ರಿಕಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಬಳಿ ಯಲ್ಲಿ 9 ಮೊರಾರ್ಜಿ ವಸತಿ ಶಾಲೆಗಳಿವೆ.

ವಸತಿ ನಿಲಯಗಳು: ಜಿಲ್ಲೆಯಲ್ಲಿ 13 ಬಾಲಕಿಯರ ಮೆಟ್ರಿಕ್‌ಪೂರ್ವ ನಿಲಯ ಗಳು ಹಾಗೂ 18 ಬಾಲಕಿಯರ ಮೆಟ್ರಿಕ್‌ ನಂತರದ ನಿಲಯಗಳು ಇವೆ. (ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿ ಗೊಂಡನಹಳ್ಳಿಯಲ್ಲಿ ಪ್ರಸಕ್ತ ವರ್ಷ ಮೆಟ್ರಿಕ್‌ ನಂತರ ನಿಲಯ ಆರಂಭವಾಗ ಬೇಕಿತ್ತು. ಆದರೆ ಕೇವಲ 12 ವಿದ್ಯಾರ್ಥಿ ನಿಯರಷ್ಟೇ ಅರ್ಜಿ ಸಲ್ಲಿಸಿದ್ದರಿಂದ ಇನ್ನೂ ಆರಂಭವಾಗಿಲ್ಲ)

ಬಾಡಿಗೆ  ಕಟ್ಟಡ; ಸ್ವಂತ  ಕಟ್ಟಡ
ಜಿಲ್ಲೆಯಲ್ಲಿರುವ ಒಟ್ಟು ವಿದ್ಯಾರ್ಥಿನಿಲಯ, ವಸತಿಶಾಲೆಗಳ ಪೈಕಿ 54ಕ್ಕೆ ಸ್ವಂತ ಕಟ್ಟಡವಿದ್ದರೆ, 52ಕ್ಕೆ ಸ್ವಂತ ಕಟ್ಟಡವೇ ಇಲ್ಲ. ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿನಿಯರಿಗೆ ಸೌಕರ್ಯಗಳು ಸಮರ್ಪಕವಾಗಿ ದೊರೆಯದ ಸನ್ನಿವೇಶವೂ ಇದೆ.

ಸ್ವಂತ ಕಟ್ಟಡದಲ್ಲಿರುವ ನಿಲಯಗಳ ವಿದ್ಯಾರ್ಥಿನಿಯರಿಗೆ ಎರಡು ಹಂತದ ಮಂಚಗಳು, ಹಾಸಿಗೆಗಳನ್ನು  ವಿತರಿಸಲಾಗಿದೆ. ಆದರೆ ಬಾಡಿಗೆ ಕಟ್ಟಡದಲ್ಲಿ ಇರುವವರಿಗೆ ವಿತರಿಸಿಲ್ಲ.

ನಿದರ್ಶನಕ್ಕೆ, ನಗರದ ಬೆಳಗಲ್‌ ಕ್ರಾಸ್‌ ಸಮೀಪದಲ್ಲಿ 3 ಅಂತಸ್ತಿನ ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿ ನಿಯರಿಗೆ ಹಾಸಿಗೆ, ಮಂಚ ಇಲ್ಲ. ಬಾಡಿಗೆ ಕಟ್ಟಡ ಆದ್ದರಿಂದ ಸಾಗಣೆ, ಅಳವಡಿಕೆ ಕಷ್ಟಕರವಾಗಿದೆ. ಅಲ್ಲದೆ, 100 ಬಾಲಕಿಯರು ಒಟ್ಟಿಗೇ ಇರಲು ಅನುಕೂಲಕರವಾದ ಕಟ್ಟಡಗಳೂ ದೊರಕುವುದು ಕಷ್ಟ ಎನ್ನುತ್ತಾರೆ ಪ್ರಭಾರ ತಾಲ್ಲೂಕು ಸಮಾಜ ಕಲ್ಯಾಣಧಿಕಾರಿ ಲೋಕೇಶ್.

ಸಿಬ್ಬಂದಿ ಕೊರತೆ
ಇಲಾಖೆಯಲ್ಲಿ ಎ ಮತ್ತು ಬಿ ದರ್ಜೆ ಅಧಿಕಾರಿಗಳ ಕೊರತೆ ಇಲ್ಲ. 125 ‘ಸಿ’ ದರ್ಜೆ ಹುದ್ದೆಗಳು ಮಂಜೂರಾಗಿದ್ದು, 62 ಹುದ್ದೆಗಳು ಖಾಲಿ ಇವೆ. 366 ‘ಡಿ’ ದರ್ಜೆ ಹುದ್ದೆಗಳು ಮಂಜೂರಾಗಿದ್ದು, 267 ಹುದ್ದೆಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT